
ಕೊಪ್ಪಳ , 22 ಜುಲೈ (ಹಿ.ಸ.):
ಆ್ಯಂಕರ್ : ಬಂಜಾರ ಸಮಾಜವು ಮಣ್ಣೆತ್ತಿನ ಅಮವಾಸ್ಯೆ ನಂತರ ಆಚರಿಸುವ ಸಿತ್ಲ ಹಬ್ಬದ ಪ್ರಯುಕ್ತ ಕೊಪ್ಪಳ ತಾಲೂಕಿನ ಕಲ್ಲತಾವರಗೇರಾ ಗ್ರಾಮ ಪಂಚಾಯತಿಯ ಕೆಂಚನಡೊಣಿ ತಾಂಡಾದಲ್ಲಿ ವಿಕಸಿತ ಭಾರತ ಉದ್ಯೋಗ ಖಾತ್ರಿ ಹಾಗೂ ಜೀವನೋಪಾಯ ಅಭಿಯಾನ(ಗ್ರಾಮೀಣ) ಯೋಜನೆಯ ವಿಶೇಷ ಐಇಸಿ ಜಾಗೃತಿ ಕಾರ್ಯಕ್ರಮ ನಡೆಯಿತು.
ತಾಲೂಕ ಪಂಚಾಯ ವಿಬಿಜಿರಾಮ್ ಜಿ ಯೋಜನೆಯ ಐಇಸಿ ಸಂಯೋಜಕ ದೇವರಾಜ ಪತ್ತಾರ ಅವರು ಮಾತನಾಡಿ, ವಿಬಿಜಿರಾಮ್ ಜೀ ಯೋಜನೆಯು ಗ್ರಾಮೀಣ ಭಾಗದ ಕೂಲಿಕಾರರು ಗುಳೆ ಹೋಗದಂತೆ ತಡೆದು ಒಂದು ಕುಟುಂಬಕ್ಕೆ ಸ್ಥಳೀಯವಾಗಿ 125 ದಿನಗಳ ಕೂಲಿ ಕೆಲಸ ನೀಡುವ ಉದ್ದೇಶವಾಗಿದೆ. ಯೋಜನೆಯಲ್ಲಿ ಸಾಮುದಾಯಿಕ ಮತ್ತು ವೈಯಕ್ತಿಕ ಕಾಮಗಾರಿಗಳ ಕುರಿತು ಮಾತನಾಡಿದರು.
ವಿಬಿಜಿ ರಾಮ್ ಜಿ ಪುರುಷ-ಮಹಿಳೆಯರಿಗೆ ಸಮಾನ ಕೂಲಿ ನಿಗದಿಪಡಿಸಿದ್ದು, ವಿಬಿಜಿರಾಮ್ ಜಿ ಯೋಜನೆಯ ಮೂಲ ಉದ್ದೇಶಗಳಾದ ಜಲ ಸಂರಕ್ಷಣೆ, ನೀರಾವರಿ, ಅಂತರಜಲ ಮರುಪೂರಣ, ಜಲಾನಯನ ಪ್ರದೇಶದ ಅಭಿವೃದ್ದಿ, ಜಲಮೂಲಗಳ ಪುನಶ್ಚೇತನ ಪ್ರಮುಖ ಕಾರ್ಯಗಳಿಗೆ ವಿಶೇಷ ಆದ್ಯತೆ ನೀಡಿರುತ್ತದೆ. ವಿಕಸಿತ ಗ್ರಾಮ ಪಂಚಾಯತಿಯಿಂದ ವಿಕಸಿತ ಭಾರತದೆಡೆಗೆ ಯೋಜನೆಯ ಉದ್ದೇಶ ಈಡೇರಿಸುವದಾಗಿದೆ ಎಂದರು.
ಪ್ರತಿ ಹಂತದಲ್ಲಿ ಆನ್ಲೈನ್ ವ್ಯವಸ್ಥೆ ಪಾರದರ್ಶಕ ವ್ಯವಸ್ಥೆ ಮೂಲಕ ವಿಬಿಜಿರಾಮಜೀ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದಕ್ಕೆ ಕೂಲಿಕಾರರ ಅಗತ್ಯ ಸಹಕಾರ ನೀಡಿ ಯೋಜನೆಯ ಲಾಭ ಪಡೆಯಬೇಕೆಂದು ಕರೆ ನೀಡಿದರು. ಪ್ರಸಕ್ತದಲ್ಲಿ ಪ್ರತಿ ಮಾನವ ದಿನಕ್ಕೆ ಕೂಲಿ ಹಣ ರೂ. 382 ನಿಗದಿಪಡಿಸಲಾಗಿದ್ದು, ಎಲ್ಲರೂ ಅಳತೆಗೆ ತಕ್ಕಂತೆ ಕೂಲಿ ಕೆಲಸ ನಿರ್ವಹಿಸಿರಿ ಕೂಲಿ ಹಣವನ್ನು ಅಳತೆಗೆ ಅನುಗುಣವಾಗಿ ಪಾವತಿಸಲಾಗುತ್ತದೆ.
ತಾಂಡಾದವರು ಗುಳೆ ಹೋಗದೇ ನಿರ್ದಿಷ್ಟಪಡಿಸಿದ 318 ಕಾಮಗಾರಿಗಳಲ್ಲಿ 125 ದಿನಗಳ ಕೆಲಸ ನಿರ್ವಹಿಸರೆಂದು ಕರೆ ನೀಡಿದರು. ಗ್ರಾಮ ಪಂಚಾಯತಿಯಿಂದ ನೀಡುವ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸಿ ಕೂಲಿ ಹಣ ಪಡೆದು ಆರ್ಥಿಕ ಸಬಲರಾಗಬೇಕೆಂದು ಕರೆ ನೀಡಿದರು. ಹೊಸದಾಗಿ ನೊಂದಣಿಯಾದ ಕುಟುಂಬಗಳಿಗೆ ಗ್ಯಾರಂಟಿ ಕಾರ್ಡಗಳನ್ನು ವಿತರಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಗಂಗಪ್ಪ ನಾಯಕ, ತಾಂಡಾದ ಪ್ರಮುಖರಾದ ಅಮರೇಶ ಜಿನ್ನಾಪುರ, ಶಾಲಾ ಮುಖ್ಯೋಪಾಧ್ಯಾಯರಾದ ಫಕೀರಪ್ಪ, ಗ್ರಾಮ ಪಂಚಾಯತಿ ಸಿಬ್ಬಂದಿ ಡಿಇಒ ಲಕ್ಷ್ಮಣ ಹಿರೇಮನಿ, ಮಲ್ಲಪ್ಪ, ಗ್ರಾಮ ಕಾಯಕ ಮಿತ್ರ ಯಂಕಮ್ಮ ವಾಲಿಕಾರ, ತಾಂಡಾ ರೋಜಗಾರ್ ಮಿತ್ರ ಶೇಖಪ್ಪ ಪೂಜಾರಿ, ತಾಂಡಾದ ಜನರು ಹಾಜರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್