ಕೆಪಿಎಸ್ ಶಾಲೆಯಲ್ಲಿ ಭಾರತ ಸೇವಾದಳದಿಂದ ರಾಷ್ಟಧ್ವಜ ಅಂಗೀಕಾರ ದಿನಾಚರಣೆ
ಕೆಪಿಎಸ್ ಶಾಲೆಯಲ್ಲಿ ಭಾರತ ಸೇವಾದಳದಿಂದ ರಾಷ್ಟಧ್ವಜ ಅಂಗೀಕಾರ ದಿನಾಚರಣೆ
ಕೋಲಾರ ತಾಲ್ಲೂಕಿನ ನರಸಾಪುರ ಕೆಪಿಎಸ್ ಶಾಲೆಯಲ್ಲಿ ಬುಧವಾರ ಭಾರತಸೇವಾದಳ ವತಿಯಿಂದ ರಾಷ್ಟçಧ್ವಜ ಅಂಗೀಕಾರ ದಿನಾಚರಣೆಯನ್ನು ಆಚರಿಸಲಾಯಿತು.


ಕೋಲಾರ, ೨೨ ಜುಲೈ (ಹಿ.ಸ) :

ಆ್ಯಂಕರ್ : ರಾಷ್ಟಧ್ವಜ ಹಾಗೂ ರಾಷ್ಟಗೀತೆಗೆ ಗೌರವ ನೀಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಹಾಗೂ ಧ್ವಜದ ನಿರ್ವಹಣೆ ಕುರಿತು ಅರಿವು ಇರಬೇಕು ಎಂದು ಭಾರತ ಸೇವಾದಳ ಜಿಲ್ಲಾ ಅಧ್ಯಕ್ಷ ಕೆ.ಎಸ್.ಗಣೇಶ್ ಹೇಳಿದರು.

ಕೋಲಾರ ತಾಲ್ಲೂಕಿನ ನರಸಾಪುರ ಕೆಪಿಎಸ್ ಶಾಲೆ ಆವರಣದಲ್ಲಿ ಭಾರತ ಸೇವಾದಳವತಿಯಿಂದ ಆಯೋಜಿಸಲಾಗಿದ್ದ ರಾಷ್ಟçಧ್ವಜ ಅಂಗೀಕಾರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧ್ವಜದ ಮಹತ್ವದ ಕುರಿತು ಮಾತನಾಡಿದರು.

ಲಕ್ಷಾಂತರ ಮಂದಿಯ ತ್ಯಾಗ ಮತ್ತು ಬಲಿದಾನಗಳಿಂದ ಪಡೆದುಕೊಂಡ ಸ್ವಾತಂತ್ರ ಉಳಿಸಿ ಸಂರಕ್ಷಿಸುವ ಹೊಣೆಗಾರಿಕೆ ಪ್ರತಿಯೊಬ್ಬ ದೇಶವಾಸಿಗಳದಾಗಿದ್ದುö, ಅದರಲೂ ಯುವ ಪೀಳಿಗೆ ದೇಶಾಭಿಮಾನವನ್ನು ಬೆಳೆಸಿಕೊಂಡು ದೇಶದ ಸಂರಕ್ಷಕರಾಗಬೇಕೆಂದು ಸಲಹೆ ನೀಡಿದರು. ಅಖಂಡ ಭಾರತವು ಜಾತಿ ಧರ್ಮ ಗಡಿ ಭಾಷೆ ಬೇಧಭಾವವನ್ನು ಮೀರಿ ರಾಷ್ಟçಧ್ವಜಕ್ಕೆ ಗೌರವ ನೀಡುತ್ತೇವೆ, ಸ್ವಾತಂತ್ರ ಹೋರಾಟ ಸಂದರ್ಭದಲ್ಲಿ ಅಖಂಡ ಭಾರತಗೌರವಿಸುವ ರಾಷ್ಟç ಧ್ವಜವನ್ನು ರೂಪಿಸಿ ಅಂಗೀಕರಿಸಿದ ದಿನವನ್ನು ಆಚರಿಸುತ್ತಿದ್ದೇವೆ ಎಂದರು.

ಭಾರತ ರಾಷ್ಟಧ್ವಜ ರೂಪುಗೊಂಡಿದ್ದರ ಹಿಂದೆ ರೋಚಕ ಇತಿಹಾಸವಿದೆ. ೧೯೦೪ ರಿಂದ ೧೯೪೭ ರವರೆವಿಗೂ ಭಾರತ ದೇಶವು ಸ್ವಾತಂತ್ರ÷್ಯ ಸಂಗ್ರಾಮದಲ್ಲಿ ಆರು ರಾಷ್ಟಧ್ವಜಗಳನ್ನು ಆಯಾ ಕಾಲಘಟ್ಟದಲ್ಲಿ ಅಂಗೀಕರಿಸಿತ್ತು. ಈಗ ನಾವು ಬಳಸುತ್ತಿರುವ ತ್ರಿವರ್ಣ ಧ್ವಜವನ್ನು ಅಂತಿಮವಾಗಿ ನಾ.ಸು.ಹರ್ಡೀಕರ್, ಮಹಾತ್ಮ ಗಾಂಧೀಜಿ, ಪಿಂಗಳಿ ವೆಂಕಯ್ಯö, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸುರಯ್ಯ ಬದ್ರೂದ್ದೀನ್ ತ್ಯಾಬ್ಜಿ ಅವರ ಪ್ರಯತ್ನದಿಂದ ರೂಪಿಸಿ ಸಂವಿಧಾನ ರಚನಾ ಸಮಿತಿ ಸಭೆಯಲ್ಲಿ ಅಂಗೀಕರಿಸಿದ್ದನ್ನು ಪ್ರತಿಯೊಬ್ಬರೂ ಸ್ಮರಿಸಬೇಕೆಂದರು.

ಕೆಪಿಎಸ್ ಶಾಲೆ ಮುಖ್ಯ ಶಿಕ್ಷಕ ಜಗನ್ನಾಥ್ ಮಾತನಾಡಿ, ಭಾರತಸೇವಾದಳವನ್ನು ಶಿಸ್ತುö, ಸಮಯಪಾಲನೆಯೊಂದಿಗೆ ದೇಶಭಕ್ತ ಯೋಧರ ಸಮರಶೀಲ ಸಂಘಟನೆಯಾಗಿ ನಾ.ಸು.ಹರ್ಡೀಕರ್ ರೂಪಿಸಿದರು. ಸುಭಾಷ್ ಚಂದ್ರಬೋಸ್ರೊಂದಿಗೆ ಕಾರ್ಯನಿರ್ವಹಿಸಿದ್ದ ಐಎನ್ಎ ರಾಮರಾವ್ ಭಾರತಸೇವಾದಳದ ಶಿಸ್ತಿನ ಸಿಪಾಯಿಯಾಗಿದ್ದರೆಂದು ವಿವರಿಸಿ, ಶಾಲೆಯಲ್ಲಿ ಧ್ವಜ ಕಟ್ಟುವ ಮತ್ತು ಇಳಿಸುವ ಕುರಿತು ಅರಿವು ನೀಡಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು. ಭಾರತ ಸೇವಾದಳ ಜಿಲ್ಲಾ ಸಂಘಟಕ ದಾನೇಶ್ ಧ್ವಜದ ಕುರಿತು ತಿಳಿಸಿ, ರಾಷ್ಟçಧ್ವಜದಲ್ಲಿ ಕೇಸರಿ ಬಣ್ಣವನ್ನು ತ್ಯಾಗಬಲಿದಾನಗಳು ಸಂಕೇತವಾಗಿ, ಬಿಳಿ ಬಣ್ಣವನ್ನು ಶಾಂತಿಯ ಸಂಕೇತವಾಗಿ ಹಾಗೂ ಹಸಿರು ಬಣ್ಣವನ್ನು ಸಮೃದ್ಧಿಯ ಸಂಕೇತವಾಗಿ ಮತ್ತು ಪ್ರಗತಿಯ ಸಂಕೇತವಾಗಿ ನೀಲಿ ಬಣ್ಣದ ಚಕ್ರವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಚಾಂದ್ ಪಾಷಾ,ಶಿಕ್ಷಕರಾದ ಅಮೃತ ಬಿ, ಪಿ.ಭಾರತಿ,ಹನುಮಾನ್ ಸಿಂಗ್, ಅರ್.ಹೇಮಾವತಿ,ವಿಜಯಮ್ಮ, ಶ್ರೀರಾಮಯ್ಯ, ಪರ್ವೀನ್ತಾಜ್,ಡಿ.ಭಾರತಿ, ನಾರಾಯಣಮ್ಮ, ಚಂದ್ರಕಲಾ, ಹಂಸವೇಣಿ,ಕುಸುಮ, ವೆಂಕಟರಮಣ, ಮುಜಾಹಿದ್ಉಲ್ಲಾಷರೀಫ್,ಸೌಮ್ಯ, ಮನುಜ, ಲತಾ, ಕೋಮಲ,ಶೈಲಜ, ಕವಿತಾ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande