
ಬಳ್ಳಾರಿ, 22 ಜುಲೈ (ಹಿ.ಸ.)
ಆ್ಯಂಕರ್ : ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಇಂಜಿನಿಯರಿ0ಗ್ ಕಾಲೇಜಿಗೆ `ಎಐಸಿಟಿಇ - ಆರ್ಪಿಎಸ್ - 2025 ಲ್ಯಾಬ್ ಟು ಮಾರ್ಕೆಟ್' ಯೋಜನೆ ಅಡಿಯಲ್ಲಿ ಎಲೆಕ್ಟ್ರಾನಿಕ್ಸ್ ವಿಭಾಗಕ್ಕೆ 24 ಲಕ್ಷ ರೂಪಾಯಿ ಸಂಶೋಧನಾ ಅನುದಾನ ಘೋಷಣೆಯಾಗಿದೆ.
ಕಾಲೇಜಿನ ಸಿಬ್ಬಂದಿಯ ಸಂಶೋಧನಾ ಪ್ರಸ್ತಾವನೆಯಾದ `ಎಫಿಶಿಯಂಟ್ ಅಂಡ್ ಸೆಕ್ಯೂರ್ಡ್ ಕಂಟೆಂಟ್ ಬೇಸ್ಡ್ ವಿಶುವಲ್ ಇನ್ಫರ್ಮೇಷನ್ ರಿಟ್ರಿವಲ್ ಸಿಸ್ಟಮ್ ಯೂಸಿಂಗ್ ಡೀಪ್ ಲರ್ನಿಂಗ್ ಟೆಕ್ನಿಕ್ಸ್ ಫಾರ್ ಕ್ರೈಂ ಪ್ರಿವೆಂಷನ್ ಅಂಡ್ ಡಿಫೆನ್ಸ್' ಪ್ರಬಂಧದ ಆಧಾರದಲ್ಲಿ ಅಪರಾಧ ತಡೆಗಟ್ಟುವಿಕೆ ಮತ್ತು ರಕ್ಷಣೆಗಾಗಿ ಡೀಪ್ ಲರ್ನಿಂಗ್ ಟೆಕ್ನಿಕ್ಸ್ ತಂತ್ರಗಳನ್ನು ಬಳಕೆ ಮಾಡಿಕೊಂಡು ಪರಿಣಾಮಕಾರಿ ಮತ್ತು ಸುರಕ್ಷಿತ ವಿಷಯ ಆಧಾರಿತ ದೃಶ್ಯ ಮಾಹಿತಿಯನ್ನು ರೂಪಿಸುವ ವ್ಯವಸ್ಥೆಗೆ ಈ ಮೊತ್ತವನ್ನು ಬಳಕೆ ಮಾಡಲು ನಿಬಂಧಿಗಳನ್ನು - ಷರತ್ತುಗಳನ್ನು ಎಐಸಿಟಿಇ ಯು ವಿಧಿಸಿದೆ.
ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರು ಮತ್ತು ಪ್ರಧಾನ ಸಂಶೋಧಕರು ಆಗಿರುವ ಡಾ. ಸವಿತಾ ಸೊನೊಳಿ ಮತ್ತು ಸಹ ಪ್ರಾಧ್ಯಾಪಕರಾಗಿರುವ ಡಾ. ಮಾನಸ ಕೆ. ಚಿಗಟೇರಿ ಅವರು ಎಐಸಿಟಿಇಗೆ ತಮ್ಮ ಸಂಶೋಧನಾ ಪ್ರಬಂಧನವನ್ನು ಸಲ್ಲಿಸಿದ್ದನ್ನು ಸ್ಮರಿಸಬಹುದಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್