ರಾಯಚೂರು : ಅಂಚೆ ಕಚೇರಿ ಸ್ಥಳಾಂತರ
ರಾಯಚೂರು, 22 ಜುಲೈ (ಹಿ.ಸ.): ಆ್ಯಂಕರ್ : ಭಾರತ ಸರ್ಕಾರದ ಅಂಚೆ ಇಲಾಖೆ ಸಾರ್ವಜನಿಕರಿಗೆ ಇನ್ನಷ್ಟು ಸುಲಭ, ಗುಣಮಟ್ಟದ ಹಾಗೂ ಪರಿಣಾಮಕಾರಿ ಅಂಚೆ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ರಾಯಚೂರು ನಗರದ ರೈಲ್ವೇ ನಿಲ್ದಾಣದ ಸಮೀಪ ಕಾರ್ಯನಿರ್ವಹಿಸುತ್ತಿದ್ದ ರಾಯಚೂರು ಆರ್.ಎಸ್. ಅಂಚೆ ಕಚೇರಿಯನ್ನು ರಾಯಚೂರಿನ
ರಾಯಚೂರು : ಅಂಚೆ ಕಚೇರಿ ಸ್ಥಳಾಂತರ


ರಾಯಚೂರು, 22 ಜುಲೈ (ಹಿ.ಸ.):

ಆ್ಯಂಕರ್ : ಭಾರತ ಸರ್ಕಾರದ ಅಂಚೆ ಇಲಾಖೆ ಸಾರ್ವಜನಿಕರಿಗೆ ಇನ್ನಷ್ಟು ಸುಲಭ, ಗುಣಮಟ್ಟದ ಹಾಗೂ ಪರಿಣಾಮಕಾರಿ ಅಂಚೆ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ರಾಯಚೂರು ನಗರದ ರೈಲ್ವೇ ನಿಲ್ದಾಣದ ಸಮೀಪ ಕಾರ್ಯನಿರ್ವಹಿಸುತ್ತಿದ್ದ ರಾಯಚೂರು ಆರ್.ಎಸ್. ಅಂಚೆ ಕಚೇರಿಯನ್ನು ರಾಯಚೂರಿನ ನವೋದಯ ನವೋದಯ ಮೆಡಿಕಲ್ ಕಾಲೇಜು ಆವರಣಕ್ಕೆ ಅಂಚೆ ಕಚೇರಿಯನ್ನು ಸ್ಥಳಾಂತರಿಸಲಾಗಿದೆ ಎಂದು ರಾಯಚೂರು ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

ನವೋದಯ ಮೆಡಿಕಲ್ ಕಾಲೇಜು ಆವರಣದಲ್ಲಿ ನೂತನವಾಗಿ ಆರಂಭಗೊಂಡಿರುವ ಈ ಅಂಚೆ ಕಚೇರಿಯು ಈ ಪ್ರದೇಶದ ಸಾರ್ವಜನಿಕರು, ವಿದ್ಯಾರ್ಥಿಗಳು, ವೈದ್ಯಕೀಯ ಸಿಬ್ಬಂದಿ ಹಾಗೂ ಸುತ್ತಮುತ್ತಲಿನ ನಿವಾಸಿಗಳಿಗೆ ಅಂಚೆ ಸೇವೆಗಳು ಮತ್ತಷ್ಟು ಸುಲಭವಾಗಿ ದೊರೆಯಲಿವೆ.

ಈ ಅಂಚೆ ಕಚೇರಿಯಲ್ಲಿ ಸ್ಪೀಡ್ ಪೋಸ್ಟ್, ನೋಂದಾಯಿತ ಅಂಚೆ, ಸಾಮಾನ್ಯ ಅಂಚೆ, ಪಾರ್ಸಲ್ ಸೇವೆ, ಅಂಚೆ ಜೀವ ವಿಮೆ, ಗ್ರಾಮೀಣ ಅಂಚೆ ಜೀವ ವಿಮೆ, ಅಂಚೆ ಉಳಿತಾಯ ಯೋಜನೆಗಳು, ಸುಕನ್ಯಾ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ, ಕಿಸಾನ್ ವಿಕಾಸ್ ಪತ್ರ ಸೇರಿದಂತೆ ಅಂಚೆ ಇಲಾಖೆಯ ವಿವಿಧ ಸೇವೆಗಳು ಸಾರ್ವಜನಿಕರಿಗೆ ಲಭ್ಯವಿರುತ್ತವೆ.

ರಾಯಚೂರು ಆರ್.ಎಸ್., ಎನ್.ಡಿ.ಎಸ್.ಒಯಲ್ಲಿ ನಿರ್ವಹಣೆಯಲ್ಲಿದ್ದ ಎಲ್ಲಾ ಅಂಚೆ ಉಳಿತಾಯ ಬ್ಯಾಂಕ್ ಖಾತೆಗಳು ಹಾಗೂ ಇತರೆ ಖಾತೆಗಳನ್ನು ರಾಯಚೂರು ಪ್ರಧಾನ ಅಂಚೆ ಕಚೇರಿಗೆ ವರ್ಗಾಯಿಸಲಾಗಿದ್ದು, ಸಂಬಂಧಿಸಿದ ಖಾತೆದಾರರು ತಮ್ಮ ಹಣಕಾಸು ವ್ಯವಹಾರಗಳು, ಪಾಸ್ ಬುಕ್ ನವೀಕರಣ, ಹಣ ಠೇವಣಿ, ಹಣ ಹಿಂಪಡೆಯುವಿಕೆ ಹಾಗೂ ಇತರೆ ಬ್ಯಾಂಕಿಂಗ್ ಸೇವೆಗಳಿಗಾಗಿ ರಾಯಚೂರು ಪ್ರಧಾನ ಅಂಚೆ ಕಚೇರಿಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಅಂಚೆ ಇಲಾಖೆಯು ಸಾರ್ವಜನಿಕರ ಅನುಕೂಲಕ್ಕಾಗಿ ಈ ಬದಲಾವಣೆಯನ್ನು ಜಾರಿಗೆ ತಂದಿದ್ದು, ಎಲ್ಲ ನಾಗರಿಕರು ಹೊಸದಾಗಿ ಕಾರ್ಯಾರಂಭ ಮಾಡಿರುವ ನವೋದಯ ಎಜುಕೇಶನ್ ಟ್ರಸ್ಟ್ ಅಂಚೆ ಕಚೇರಿಯಲ್ಲಿ ಲಭ್ಯವಿರುವ ವಿವಿಧ ಅಂಚೆ ಹಾಗೂ ಹಣಕಾಸು ಸೇವೆಗಳನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ರಾಯಚೂರು ಪ್ರಧಾನ ಅಂಚೆ ಕಚೇರಿ ಅಥವಾ ನವೋದಯ ಎಜುಕೇಶನ್ ಟ್ರಸ್ಟ್ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ರಾಯಚೂರು ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande