ಬರಪರಿಸ್ಥಿತಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ; ಡಾ. ಜಿ. ಪರಮೇಶ್ವರ್
ಬರಪರಿಸ್ಥಿತಿ ನಿರ್ವಹಣೆಯಲ್ಲಿ ನಿರ್ಲಕ್ಷö್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ; ಡಾ. ಜಿ. ಪರಮೇಶ್ವರ್
ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ. ಪರಮೇಶ್ವರ್ ಕೋಲಾರ ತಾಲ್ಲೂಕಿನ ನರಸಾಪುರದ ಬಳಿ ಬಿತ್ತನೆಯಾಗದ ಕೃಷಿ ಭೂಮಿಗೆ ಭೇಟಿ ನೀಡಿ ವೀಕ್ಷಿಸಿದರು.


ಕೋಲಾರ, ಜುಲೈ ೨೨(ಹಿ.ಸ) :

ಆ್ಯಂಕರ್: ಜಿಲ್ಲೆಯ ಬರ ಪರಿಸ್ಥಿತಿಯ ಬಗ್ಗೆ ನಿಖರವಾದ ಮಾಹಿತಿ ನೀಡದ ಅಧಿಕಾರಿಗಳ ಬಗ್ಗೆ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ.ಪರಮೇಶ್ವರ್ ತೀವ್ರ ಅಸಮಧಾನ ವ್ಯಕ್ತಪಡಿಸಿದರು. ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಅವರನ್ನು ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ನಿಯಂತ್ರ ಮಾಡಬೇಕು. ಬರಪರಿಸ್ಥಿತಿಯಲ್ಲಿ ನಿರ್ಲಕ್ಷö್ಯ ತೋರುವ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.

ಕೋಲಾರ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ಬರ ಪರಿಸ್ಥಿತಿಯ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ತೀವ್ರ ಮಳೆ ಅಭಾವ ಹಾಗೂ ಬರದಿಂದ ಕಂಗೆಟ್ಟಿರುವ ಜಿಲ್ಲೆಯ ರೈತರಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ಕಾರಣಕ್ಕೂ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಅಭಾವ ಉಂಟಾಗದಂತೆ ಸರ್ಕಾರ ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಜಲಕ್ಷಾಮ ಹಾಗೂ ಬೆಳೆ ನಷ್ಟ ತೀವ್ರಗೊಳ್ಳದಂತೆ ಎಚ್ಚರವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಜೂನ್ ೧ ರಿಂದ ಜುಲೈ ೨೧ ರವರೆಗೆ ಜಿಲ್ಲೆಯಲ್ಲಿ ೧೧೪.೮ಎಂಎA ವಾಡಿಕೆ ಮಳೆಯಾಗಬೇಕಿದ್ದು, ಕೇವಲ ೭೫.೨ ಎಂಎA ಮಳೆಯಾಗಿದೆ (-೩೪% ಕೊರತೆ). ವಿಶೇಷವಾಗಿ ಜುಲೈ ೧ ರಿಂದ ೨೧ ರ ಅವಧಿಯಲ್ಲಿ ೪೯.೩ ಎಂಎA ವಾಡಿಕೆ ಮಳೆಗೆ ಎದುರಾಗಿ ಕೇವಲ ೯.೦ ಎಂಎA ಮಳೆಯಾಗುವ ಮೂಲಕ ಬರೋಬ್ಬರಿ -೮೨% ನಷ್ಟು ತೀವ್ರ ಮಳೆ ಕೊರತೆ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಮಳೆ ಅಭಾವದಿಂದಾಗಿ ೨೦೨೬ ರ ಮುಂಗಾರಿಗೆ ನಿಗದಿಪಡಿಸಿದ್ದ ೮೫,೮೦೧ ಹೆಕ್ಟೇರ್ ಗುರಿಯ ಪೈಕಿ ಜುಲೈ ೨೧ ರವರೆಗೆ ಕೇವಲ ೪,೦೭೭ ಹೆಕ್ಟೇರ್ (೪.೭೫%) ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಕಳೆದ ೨೦೨೫ ರ ಜುಲೈ ಅವಧಿಯಲ್ಲಿ ೨೨,೭೫೭ ಹೆಕ್ಟೇರ್ ಬಿತ್ತನೆಯಾಗಿತ್ತು. ಜಿಲ್ಲೆಯ ಪ್ರಮುಖ ಬೆಳೆಯಾದ ರಾಗಿ ೬೧,೦೦೦ ಹೆಕ್ಟೇರ್ ಗುರಿಯಲ್ಲಿ ಕೇವಲ ೮೨೬ ಹೆಕ್ಟೇರ್ ಹಾಗೂ ನೆಲಗಡಲೆ ೫,೦೦೦ ಹೆಕ್ಟೇರ್ ಗುರಿಯಲ್ಲಿ ೧,೮೫೯ ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.

ಈ ಸನ್ನಿವೇಶದಲ್ಲಿ ರೈತರಿಗೆ ಬೆಳೆ ನಷ್ಟವಾಗದಂತೆ ೯೦ ರಿಂದ ೧೦೫ ದಿನಗಳ ಕಲ್ಪಾವಧಿಯ ಪರ್ಯಾಯ ವಿವಿಧ ರಾಗಿ ತಳಿಗಳನ್ನು ಬಿತ್ತನೆ ಬೀಜಗಳನ್ನು ವಿತರಿಸಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ೪೬೩.೪೫ ಕ್ವಿಂಟಾಲ್ ಬಿತ್ತನೆ ಬೀಜಗಳ ದಾಸ್ತಾನಿದ್ದು, ಮುಂಗಾರಿಗೆ ಅಗತ್ಯವಿರುವ ೪೦,೪೧೫ ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆಗೆ ತಕ್ಕಂತೆ ಯೂರಿಯಾ (೧,೨೮೫.೨೦) ಮತ್ತು ಡಿಎಪಿ (೪೯೦.೭೫) ದಾಸ್ತಾನು ಇರಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕುಡಿಯುವ ನೀರಿನ ಬಿಕ್ಕಟ್ಟು ನಿವಾರಣೆಗೆ ಸೂಚನೆ ನೀಡಿದ ಸಚಿವರು, ಗ್ರಾಮೀಣ ಭಾಗಗಳಲ್ಲಿ ಅಂತರ್ಜಲ ಮಟ್ಟ ೧೪೦೦ ರಿಂದ ೧೫೦೦ ಅಡಿಗಳಿಗೆ ಕುಸಿದಿರುವುದು ಹಾಗೂ ಕೊಳವೆಬಾವಿ ಕೊರೆದಿರುವ ಗುತ್ತಿಗೆದಾರರಿಗೆ ೩೮ ಕೋಟಿ ಹಳೆ ಬಾಕಿ ಪಾವತಿಯಾಗದೇ ಹೊಸ ಕಾಮಗಾರಿಗಳಿಗೆ ಹಿಂಜರಿಯುತ್ತಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದರು.

ಜಿಲ್ಲೆಯ ಒಟ್ಟು ೫,೭೯೯ ಗ್ರಾಮೀಣ ಕೊಳವೆಬಾವಿಗಳ ಪೈಕಿ ೯೦೩ ಬತ್ತಿಹೋಗಿದ್ದು, ೧,೫೭೦ ನಗರ ಕೊಳವೆಬಾವಿಗಳಲ್ಲಿ ೨೨೦ ಬತ್ತಿಹೋಗಿವೆ. ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬರಿಗೂ ದಿನಕ್ಕೆ ೫೫ ಹಾಗೂ ನಗರ ಪ್ರದೇಶದಲ್ಲಿ ೧೦೦ ಐPಅಆ ನೀರು ಪೂರೈಕೆಯನ್ನು ಖಾತರಿಪಡಿಸಲು ನಿರ್ದೇಶಿಸಿದರು.

ಬಂದ್ ಆಗಿದ್ದ ೧೧೦ ಗ್ರಾಮೀಣ ಆರ್.ಒ ಪ್ಲಾಂಟ್ಗಳಲ್ಲಿ ೧೦೫ ಗಳನ್ನು ಹಾಗೂ ನಗರದ ೯ ಪ್ಲಾಂಟ್ಗಳನ್ನು ಈಗಾಗಲೇ ದುರಸ್ತಿಗೊಳಿಸಲಾಗಿದ್ದು, ಇನ್ನುಳಿದ ೫ ಘಟಕಗಳನ್ನು ತಕ್ಷಣ ಸರಿಪಡಿಸಲು ಸೂಚಿಸಲಾಯಿತು. ಮುಂಬರುವ ದಿನಗಳಲ್ಲಿ ತೀವ್ರ ನೀರಿನ ಕೊರತೆ ಎದುರಾಗಬಹುದಾದ ೧೩೦ ಗ್ರಾಮಗಳು ಹಾಗೂ ೪೯ ನಗರ ವಾರ್ಡ್ಗಳನ್ನು ಗುರುತಿಸಿ ಮೈಕ್ರೋ ಲೆವೆಲ್ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದ್ದು, ಮುಂಜಾಗ್ರತೆಯಾಗಿ ೧೫೦ ಹೆಚ್ಚಿನ ಇಳುವರಿ ನೀಡುವ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದೆ. ೨೦೨೬-೨೭ ಸಾಲಿನ ಟಾಸ್ಕ್ ಫೋರ್ಸ್ ಅಡಿಯಲ್ಲಿ ಮಂಜೂರಾದ ೪೦೦ ಲಕ್ಷ ಅನುದಾನದಲ್ಲಿ ೧೬೩ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ೬೩ ಹೊಸ ಕೊಳವೆಬಾವಿಗಳಲ್ಲಿ ೪೬ ಸಫಲವಾಗಿ ವಿದ್ಯುದ್ದೀಕರಣದೊಂದಿಗೆ ನೀರು ಪೂರೈಸಲಾಗುತ್ತಿದೆ.

ವಿಶೇಷವಾಗಿ ಕೆ.ಸಿ. ವ್ಯಾಲಿ ಯೋಜನೆಯಿಂದ ಪೂರೈಕೆಯಾಗುತ್ತಿರುವ ನೀರಿನ ಪ್ರಮಾಣ ೨೯೦ ಎಂಎಲ್ಡಿ ಯಿಂದ ೨೧೦ ಎಂಎಲ್ಡಿಗೆ ೧೭೦ ಎಂಎಲ್ಡಿ ಕುಸಿದಿದ್ದು, ತಾಲೂಕುವಾರು ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಇರಬಾರದು ಎಂದು ಎಚ್ಚರಿಕೆ ನೀಡಿದರು.

ಆರಂಭಿಕ ಮಂಜೂರಾತಿ ಅನುಪಾತದಂತೆ ಕೋಲಾರ, ಶ್ರೀನಿವಾಸಪುರ, ಮಾಲೂರು ಹಾಗೂ ಬಂಗಾರಪೇಟೆ ತಾಲೂಕುಗಳ ಕೆರೆಗಳಿಗೆ ನೀರನ್ನು ಸಮಾನವಾಗಿ ಹಂಚಿಕೆ ಮಾಡಬೇಕು. ಯಾವುದೇ ಅಧಿಕಾರಿಗಳು ಸ್ವಯಂಪ್ರೇರಿತವಾಗಿ ನೀರು ಸ್ಥಗಿತಗೊಳಿಸಿದರೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಜಿಲ್ಲೆಯ ಒಟ್ಟು ೩,೨೩೨ ಕೆರೆಗಳ ಪೈಕಿ ೯೯೫ ಕೆರೆಗಳು ಸಂಪೂರ್ಣ ಖಾಲಿಯಿದ್ದು, ಕೇವಲ ೨೩ ಕೆರೆಗಳು ಮಾತ್ರ ಪೂರ್ಣ ತುಂಬಿವೆ. ೧೪೨ ಎಂ.ಸಿ.ಎಫ್.ಟಿ ನೀರು ಲಭ್ಯವಿರುವ ಯರಗೋಳ ಜಲಾಶಯದಿಂದ ಕೋಲಾರ, ಮಾಲೂರು ಹಾಗೂ ಬಂಗಾರಪೇಟೆ ನಗರಸಭೆಗಳ ವಾರ್ಡ್ಗಳಿಗೆ ತಡೆರಹಿತ ನೀರು ಸರಬರಾಜು ಮಾಡಲು ಮತ್ತು ೧೮೬ ಗ್ರಾಮಗಳಿಗೆ ನೀರೊದಗಿಸುವ ಮಾರ್ಕಂಡೇಯ ಯೋಜನೆಯ ಪಂಪ್ ಮೋಟಾರ್ ಹಾಗೂ ಟ್ರಾನ್ಸ್ಫಾರ್ಮರ್ ದುರಸ್ತಿಗೆ ತಕ್ಷಣ ಅನುದಾನ ಬಿಡುಗಡೆ ಮಾಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿರುವ ೨,೧೦,೧೪೩ ಜಾನುವಾರುಗಳು ಹಾಗೂ ೫,೪೫,೭೯೭ ಕುರಿ-ಮೇಕೆಗಳ ರಕ್ಷಣೆಗೆ ವಾರಕ್ಕೆ ಅಗತ್ಯವಿರುವ ೧೦,೭೩೬ ಮೆಟ್ರಿಕ್ ಟನ್ ಒಣ ಮೇವಿನ ಪೂರೈಕೆಗೆ ಧಕ್ಕೆಯಾಗದಂತೆ, ಪ್ರಸ್ತುತ ಲಭ್ಯವಿರುವ ೩,೨೭,೭೨೪ ಟನ್ ಮೇವಿನಿಂದ ಮುಂದಿನ ೩೧ ವಾರಗಳಿಗೆ ಧೈರ್ಯವಾಗಿ ನಿರ್ವಹಿಸಬಹುದಾಗಿದೆ. ರಾಜ್ಯ ಸರ್ಕಾರದಿಂದ ಉಚಿತವಾಗಿ ಸರಬರಾಜಾಗುವ ೧,೭೫,೦೦೦ ಫೋಡರ್ ಮಿನಿಕಿಟ್ಗಳನ್ನು ನೀರಾವರಿ ಸೌಲಭ್ಯವಿರುವ ರೈತರಿಗೆ ವಿತರಿಸಿ ೬ ಲಕ್ಷ ಟನ್ ಹಸಿರು ಮೇವು ಉತ್ಪಾದಿಸಲು ಮತ್ತು ಕೆಎಂಎಫ್ ವತಿಯಿಂದ ಶೇ. ೫೦ ಸಬ್ಸಿಡಿ ನೀಡಿ ಮೇವು ಬೆಳೆಸಲು ಪ್ರೋತ್ಸಾಹಿಸಲಾಗುತ್ತಿದೆ.

ಕಂದಾಯ ಇಲಾಖಾ ಪ್ರಗತಿ ಪರಿಶೀಲಿಸಿದ ಅವರು, 'ಭೂಸುರಕ್ಷಾ' ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೆ ೨,೦೭,೨೫,೦೫೩ ಪುಟಗಳ ಕಂದಾಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಿಸಲಾಗಿದೆ ಎಂದು ತಿಳಿಸಿದರು. ಜಿಲ್ಲೆಯ ೨,೮೩,೮೦೮ ಮೃತ ಭೂಮಾಲೀಕರ ಪ್ರಕರಣಗಳಲ್ಲಿ ೧,೯೨,೩೯೬ ಇ-ಪೌತಿ ಖಾತೆಗಳು ಬಾಕಿ ಇದ್ದು, ವಾರಸುದಾರರ ಒಟಿಪಿ (ಔಖಿP) ಸಿಗದಿರುವುದು ಅಥವಾ ತಾಂತ್ರಿಕ ತೊಡಕುಗಳಿದ್ದಲ್ಲಿ ಸಾರ್ವಜನಿಕರನ್ನು ಅಲೆಸದೆ, ಕಂದಾಯ ಅಧಿಕಾರಿಗಳು ನೇರವಾಗಿ ಗ್ರಾಮಗಳಿಗೆ ತೆರಳಿ 'ಮಹಜರು' ನಡೆಸಿ ಡಿಸೆಂಬರ್ ೨೦೨೬ ರೊಳಗೆ ಎಲ್ಲಾ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು ಎಂದು ತಹಸೀಲ್ದಾರ್ಗಳಿಗೆ ಅಂತಿಮ ಗಡುವು ನೀಡಿದರು. ಅಲ್ಲದೆ ಜಿಲ್ಲಾಧಿಕಾರಿಗಳ ಹಾಗೂ ತಹಸೀಲ್ದಾರ್ಗಳ ಪಿ.ಡಿ ಖಾತೆಯಲ್ಲಿ ಲಭ್ಯವಿರುವ ೧,೨೩೬.೪೪ ಲಕ್ಷ ಎಸ್ಡಿಆರ್ಎಫ್/ಎಸ್ಡಿಎಮ್ಎಫ್ ಅನುದಾನವನ್ನು ಬರ ನಿರ್ವಹಣೆಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸೂಚಿಸಿದರು.

ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಜಿಲ್ಲೆಯ ನೈಜ ಪರಿಸ್ಥಿತಿಯನ್ನು ಅರಿಯಲು ನರಸಾಪುರ ಬಳಿಯ ಕೃಷಿ ತಾಕುಗಳಿಗೆ ಪ್ರತ್ಯಕ್ಷ ಭೇಟಿ ನೀಡಿದ ಉಪಮುಖ್ಯಮಂತ್ರಿಗಳು, ಬಿತ್ತನೆಯಾಗದೆ ಒಣಗುತ್ತಿರುವ ಭೂಮಿಯನ್ನು ವೀಕ್ಷಿಸಿದರು. ತದನಂತರ ಚಿಕ್ಕನಹಳ್ಳಿ ಗ್ರಾಮದ ಸಂಪೂರ್ಣ ಬತ್ತಿಹೋಗಿರುವ ಕೆರೆಗೆ ಭೇಟಿ ನೀಡಿ, ಸ್ಥಳೀಯ ರೈತರು ಹಾಗೂ ಗ್ರಾಮಸ್ಥರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿ, ಸರ್ಕಾರ ಸದಾ ನಿಮ್ಮೊಂದಿಗೆ ಇರಲಿದೆ ಎಂದು ಧೈರ್ಯ ತುಂಬಿದರು.

ಸಭೆಯಲ್ಲಿ ಬಂಗಾರಪೇಟೆ ಶಾಸಕರಾದ ಎಸ್. ಎನ್. ನಾರಾಯಣಸ್ವಾಮಿ., ಕೆಜಿಎಫ್ ಶಾಸಕಿ ಡಾ. ರೂಪಕಲಾ ಶಶಿಧರ್, ಮಾಲೂರು ಶಾಸಕ ಕೆ. ವೈ ನಂಜೇಗೌಡ, ಕೋಲಾರ ಶಾಸಕ ಡಾ. ಕೊತ್ತೂರು. ಜಿ ಮಂಜುನಾಥ್, ಶ್ರೀನಿವಾಸಪುರ ಶಾಸಕ ಜಿ. ಕೆ. ವೆಂಕಟಾಶಿವಾರೆಡ್ಡಿ, ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್, ವಿಧಾನ ಪರಿಷತ್ ಶಾಸಕರಾದ ಎಂ ಎಲ್ ಅನಿಲ್ ಕುಮಾರ್, ಮಾವು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಮುದ್ದು ಗಂಗಾಧರ್ ಭಾಗವಹಿಸಿದ್ದರು.

ಕಾರ್ಮಿಕ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಲ್ಮಾ ಕೆ. ಫಹೀಮ್, ಕಂದಾಯ ಇಲಾಖೆ(ವಿಪತ್ತು ನಿರ್ವಹಣೆ )ಸರ್ಕಾರದ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾನ್, ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ, ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್ ಪಿ ಬಾಗೇವಾಡಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕನಿಕಾ ಸಿಕ್ರಿವಾಲ್ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande