ಬಳ್ಳಾರಿ ನಗರ : ನಾಳೆ ವಿದ್ಯುತ್ ವ್ಯತ್ಯಯ
ಬಳ್ಳಾರಿ, 22 ಜುಲೈ (ಹಿ.ಸ.) ಆ್ಯಂಕರ್ : ಬಳ್ಳಾರಿ ನಗರ ಜೆಸ್ಕಾಂ ವ್ಯಾಪ್ತಿಯ ಜಿಲ್ಲಾ ಕೋರ್ಟ್ ಸಂಕೀರ್ಣದ ವಿದ್ಯುತ್ ಲೈನಿನ ನಿರ್ವಹಣೆ ಕಾರ್ಯ ಕೈಗೊಳ್ಳುತ್ತಿರುವುರಿಂದ 11 ಕೆ.ವಿ. ಫೀಡರನಲ್ಲಿ ವಿದ್ಯುತ್ ಕಡಿತಗೊಳಿಸುವ ಅವಶ್ಯಕತೆ ಇದ್ದು, ಈ ಕೆಳಕಂಡ ಪ್ರದೇಶಗಳಲ್ಲಿ ಜು.23 ರಂದು ಬೆಳಿಗ್ಗೆ 09 ರಿಂದ
ಬಳ್ಳಾರಿ ನಗರ : ನಾಳೆ ವಿದ್ಯುತ್ ವ್ಯತ್ಯಯ


ಬಳ್ಳಾರಿ, 22 ಜುಲೈ (ಹಿ.ಸ.)

ಆ್ಯಂಕರ್ : ಬಳ್ಳಾರಿ ನಗರ ಜೆಸ್ಕಾಂ ವ್ಯಾಪ್ತಿಯ ಜಿಲ್ಲಾ ಕೋರ್ಟ್ ಸಂಕೀರ್ಣದ ವಿದ್ಯುತ್ ಲೈನಿನ ನಿರ್ವಹಣೆ ಕಾರ್ಯ ಕೈಗೊಳ್ಳುತ್ತಿರುವುರಿಂದ 11 ಕೆ.ವಿ. ಫೀಡರನಲ್ಲಿ ವಿದ್ಯುತ್ ಕಡಿತಗೊಳಿಸುವ ಅವಶ್ಯಕತೆ ಇದ್ದು, ಈ ಕೆಳಕಂಡ ಪ್ರದೇಶಗಳಲ್ಲಿ ಜು.23 ರಂದು ಬೆಳಿಗ್ಗೆ 09 ರಿಂದ 5 ಗಂಟೆಯವರೆಗೆ ವಿದ್ಯುತ್ ಸರಬರಾಜುನಲ್ಲಿ ವ್ಯತ್ಯಯವಾಗಲಿದೆ.

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ಫೀಡರ್ ಎಫ್-6 ರ ವ್ಯಾಪ್ತಿಯ ತಾಳೂರು ರೋಡ್, ಸ್ನೇಹ ಕಾಲೋನಿ, ಶ್ರೀನಗರ, ರೇಣುಕಾ ನಗರ, ಭಗತ್ಸಿಂಗ್ ನಗರ, ಕನ್ನಡ ನಗರ, ಮಹಾನಂದಿ ಕೊಟ್ಟಂ, ಪಾರ್ವತಿ ನಗರ. ಎಫ್-14 ರ ವ್ಯಾಪ್ತಿಯ ಜಿಲ್ಲಾ ಕೋರ್ಟ್ ಸಂಕೀರ್ಣದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಹಾಗಾಗಿ ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಜೆಸ್ಕಾಂ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande