ಕೃಷಿ ವಿವಿ: ಸಿದ್ದರಾಮ ಕಟ್ಟಿಮನಿ ಅಮಾನತು
ರಾಯಚೂರು, 22 ಜುಲೈ (ಹಿ.ಸ.): ಆ್ಯಂಕರ್: ರಾಯಚೂರು ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ಸಹ ಪ್ರಾಧ್ಯಾಪಕರೊಬ್ಬರ ಮೇಲೆ ಹಲ್ಲೆ, ಜೀವ ಬೆದರಿಕೆ ಹಿನ್ನೆಲೆಯಲ್ಲಿ ಶಿಕ್ಷಣ ನಿರ್ದೇಶನಾಲ ಯದ ಸಹಾಯಕ ಆಡಳಿತಾಧಿಕಾರಿ ಸಿದ್ದರಾಮ ಕಟ್ಟಿಮನಿ ಅವರ ಅಮಾನತು ಮಾಡಿ ಕುಲಸಚಿವರು ಆದೇಶಿಸಿದ್ದಾರೆ. ಕೃಷಿ ವಿವಿ ಗಂಗ
ಕೃಷಿ ವಿವಿ: ಸಿದ್ದರಾಮ ಕಟ್ಟಿಮನಿ ಅಮಾನತು


ರಾಯಚೂರು, 22 ಜುಲೈ (ಹಿ.ಸ.):

ಆ್ಯಂಕರ್: ರಾಯಚೂರು ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ಸಹ ಪ್ರಾಧ್ಯಾಪಕರೊಬ್ಬರ ಮೇಲೆ ಹಲ್ಲೆ, ಜೀವ ಬೆದರಿಕೆ ಹಿನ್ನೆಲೆಯಲ್ಲಿ ಶಿಕ್ಷಣ ನಿರ್ದೇಶನಾಲ ಯದ ಸಹಾಯಕ ಆಡಳಿತಾಧಿಕಾರಿ ಸಿದ್ದರಾಮ ಕಟ್ಟಿಮನಿ ಅವರ ಅಮಾನತು ಮಾಡಿ ಕುಲಸಚಿವರು ಆದೇಶಿಸಿದ್ದಾರೆ.

ಕೃಷಿ ವಿವಿ ಗಂಗಾವತಿಯ ಕೃಷಿ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಡಾ.ಡಿ.ಕೆ.ಹಾದಿಮನಿ ಅವರು ಜು.16 ರಂದು ರಾಯಚೂರಿನ ಕೃಷಿ ಆಡಳಿತ ಭವನಕ್ಕೆ ಕರ್ತವ್ಯದ ಮೇಲೆ ಆಗಮಿಸಿದಾಗ ಶಿಕ್ಷಣ ನಿರ್ದೇಶನಾಲಯದ ಸಹಾಯಕ ಆಡಳಿತಾಧಿಕಾರಿ ಯಾಗಿರುವ ಸಿದ್ದರಾಮ ಕಟ್ಟಿಮನಿ ಅವರ ಪತ್ನಿ ಹಾಗೂ ಪತ್ನಿಯ ಸಹೋದರಿ ಕು. ವಿಜಯಲಕ್ಷ್ಮಿ, ಹೆಸರು ತಿಳಿಯದ ಮತ್ತೊಬ್ಬ ವ್ಯಕ್ತಿ ಕಚೇರಿ ಅವಧಿಯಲ್ಲಿ ಮಾರಣಾಂತಿಕ ಹಲ್ಲೆ ಮಾಡಿ, ಚಪ್ಪಲಿಯಿಂದ ಹೊಡೆದಿರುವುದಾಗಿ ಪಶ್ಚಿಮ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ಅಲ್ಲದೆ, ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದನೆ, ಮೊಬೈಲ್, ಚಿನ್ನದ ಸರ ಕದ್ದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಈ ಕುರಿತು ಎಫ್ ಐಆರ್ ಪ್ರತಿಯನ್ನು ಕಚೇರಿಗೆ ಸಲ್ಲಿಸಲಾಗಿತ್ತು. ಅಲ್ಲದೇ, ಶಿಕ್ಷಕ ಸಂಘದ ಪ್ರತಿನಿಧಿಯವರು ಸಹ ಈ ಕುರಿತು ದೂರನ್ನು ಸಲ್ಲಿಸಿದ್ದರು.

ಘಟನೆ ವೇಳೆ ಇತರ ಅಧಿಕಾರಿಗಳು, ಸಿಬ್ಬಂದಿಗಳಿದ್ದರು ಅವರೆಲ್ಲರ ಸಮ್ಮುಖದಲ್ಲಿ ನಡೆದ ಘಟನೆಯ ತೀವ್ರತೆ ಅರಿತು. ಸಮಗ್ರ ವಾಗಿ ಪರಿಶೀಲನೆ ಮತ್ತು ಇಲಾಖಾ ವಿಚಾರಣೆ ನಡೆಸುವುದು ಅಗತ್ಯವೆಂದು ಪರಿಗಣಿಸಿ ಇಲಾಖಾ ವಿಚಾರಣೆ ಸಹ ನಡೆಸಲು ನಿರ್ಧರಿಸಿ. ಆರೋಪಿತ ಅಧಿಕಾರಿ ಸಿದ್ದರಾಮ ಕಟ್ಟಿಮನಿ ಅವರ ಅಮಾನತ್ತು ಆದೇಶ ಹೊರಡಿಸಲಾಗಿದೆ. ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೇ ಯಾವುದೇ ಕಾರಣಕ್ಕೂ ಕೇಂದ್ರ ಸ್ಥಾನ ಬಿಟ್ಟು ತೆರಳತಕ್ಕ ದ್ದಲ್ಲ ಎಂದು ಕುಲಸಚಿವರು ಆದೇಶದಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande