ಬಳ್ಳಾರಿ : ತಾರಾನಾಥ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದ ಸುವರ್ಣ ಸಂಭ್ರಮ
ಬಳ್ಳಾರಿ, 21 ಜುಲೈ (ಹಿ.ಸ.) ಆ್ಯಂಕರ್: ನಗರದ ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯು ಸರ್ಕಾರದ ಸುಪರ್ದಿಗೆ ಒಳಪಟ್ಟು 50 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಸಂಸ್ಥೆಯ ‘ಸುವರ್ಣ ಸಂಭ್ರಮ''ಕ್ಕೆ ಜುಲೈ 23 ರಂದು ಬೆಳಿಗ್ಗೆ 10 ಗಂಟೆಗೆ ಅದ್ದೂರಿ
ಬಳ್ಳಾರಿ : ತಾರಾನಾಥ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದ ಸುವರ್ಣ ಸಂಭ್ರಮ


ಬಳ್ಳಾರಿ, 21 ಜುಲೈ (ಹಿ.ಸ.)

ಆ್ಯಂಕರ್: ನಗರದ ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯು ಸರ್ಕಾರದ ಸುಪರ್ದಿಗೆ ಒಳಪಟ್ಟು 50 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಸಂಸ್ಥೆಯ ‘ಸುವರ್ಣ ಸಂಭ್ರಮ'ಕ್ಕೆ ಜುಲೈ 23 ರಂದು ಬೆಳಿಗ್ಗೆ 10 ಗಂಟೆಗೆ ಅದ್ದೂರಿ ಚಾಲನೆ ದೊರೆಯಲಿದೆ.

1947ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ಕಳೆದ ಎಂಟು ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಯುರ್ವೇದ ಶಿಕ್ಷಣ ನೀಡಿ, ಲಕ್ಷಾಂತರ ರೋಗಿಗಳಿಗೆ ಚಿಕಿತ್ಸೆ ಒದಗಿಸಿದೆ. ಸಂಸ್ಥೆಯ ಈ ಅಮೂಲ್ಯ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರವು ಜುಲೈ 23, 1976ರಂದು ಇದನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಅಂದಿನಿಂದ ಕಲ್ಯಾಣ ಕರ್ನಾಟಕ ಭಾಗ ಮಾತ್ರವಲ್ಲದೆ, ನೆರೆಯ ಆಂಧ್ರಪ್ರದೇಶದ ಜನತೆಗೂ ಇದು ಪ್ರಮುಖ ಆರೋಗ್ಯ ಕೇಂದ್ರವಾಗಿ ಸೇವೆ ಸಲ್ಲಿಸುತ್ತಿದೆ.

*ಕೆ.ಎಮ್.ಆರ್.ಡಿ.ಸಿ ಅನುದಾನದಿಂದ ಮೂಲಸೌಕರ್ಯ ಅಭಿವೃದ್ಧಿ:*

ಪ್ರಸ್ತುತ ಸಂಸ್ಥೆಯಲ್ಲಿ ‘ಕರ್ನಾಟಕ ಮೈನಿಂಗ್ ರೀಜನ್ ಡೆವಲಪ್ಮೆಂಟ್ ಕಾರ್ಪೊರೇಷನ್' ಅನುದಾನದಡಿ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಮತ್ತು ಉನ್ನತೀಕರಣ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಸಂಸ್ಥೆಯ ಬೆಳವಣಿಗೆಗೆ ಹೊಸ ಆಯಾಮ ನೀಡುತ್ತಿವೆ.

*ಜುಲೈ 23 ರಂದು ಹಲವು ಕಾರ್ಯಕ್ರಮಗಳು:

ಸುವರ್ಣ ಸಂಭ್ರಮದ ಉದ್ಘಾಟನೆ: ಸಂಸ್ಥೆಯ ನಿವೃತ್ತ ಪ್ರಾಂಶುಪಾಲರಾದ ಡಾ. ಸೈಯದ್ ಅತ್ತಾರ ಫಾತಿಮಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ವೈದ್ಯರತ್ನ ತಾರಾನಾಥರ ಪುತ್ಥಳಿ ಅನಾವರಣದ ಭೂಮಿಪೂಜೆ: ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದೊಂದಿಗೆ ನಡೆಯಲಿದ್ದು, ಸಂಘದ ಅಧ್ಯಕ್ಷ ಡಾ. ಮಾರಿದೇವ ಶರ್ಮಾ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ರಾಜ್ಯಮಟ್ಟದ ಶೈಕ್ಷಣಿಕ ಸಂವಾದ: ಸಂಸ್ಥೆಯ ಸ್ನಾತಕೋತ್ತರ ಪಂಚಕರ್ಮ ವಿಭಾಗದ ವತಿಯಿಂದ “ಬಸ್ತಿ – ಅರ್ಧ ಚಿಕಿತ್ಸೆಯೇ ಅಥವಾ ಪೂರ್ಣ ಚಿಕಿತ್ಸೆಯೇ?” ಎಂಬ ವಿಷಯದ ಕುರಿತು ಸಂವಾದ ನಡೆಯಲಿದೆ. ಇದರಲ್ಲಿ ರಾಜ್ಯದ 25 ಆಯುರ್ವೇದ ಮಹಾವಿದ್ಯಾಲಯಗಳ ಪಂಚಕರ್ಮ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಶೈಕ್ಷಣಿಕ ಹಾಗೂ ವೈಜ್ಞಾನಿಕ ಅಭಿಪ್ರಾಯ ಮಂಡಿಸಲಿದ್ದಾರೆ.

ಈ ಸಂಭ್ರಮದ ಗೌರವಾಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಜಾನಕಿ ವೈ. ಎಸ್. ಅವರು ವಹಿಸಲಿದ್ದು, ಆಯೋಜನಾ ಅಧ್ಯಕ್ಷರಾಗಿ ಡಾ. ರಾಜಶೇಖರ್ ಎಸ್. ಗಾಣಿಗೇರ, ಕಾರ್ಯದರ್ಶಿಯಾಗಿ ಡಾ. ಸಂತೋಷ್ ಎಲ್. ಯಡಹಳ್ಳಿ ಹಾಗೂ ಸಹ-ಕಾರ್ಯದರ್ಶಿಗಳಾಗಿ ಡಾ. ವಿಜಯಮಹಾಂತೇಶ್ ಹೂಗಾರ್ ಮತ್ತು ಡಾ. ಶಿಲ್ಪಶ್ರೀ ಕಾರ್ಯನಿರ್ವಹಿಸುತ್ತಿದ್ದಾರೆ.

ಸಂಸ್ಥೆಯ ಐವತ್ತು ವರ್ಷಗಳ ಸರ್ಕಾರಿ ಸೇವೆ ಹಾಗೂ ಶೈಕ್ಷಣಿಕ ಪಯಣವನ್ನು ಸ್ಮರಿಸುವ ಈ ಸುವರ್ಣ ಸಂಭ್ರಮವು ಮಹಾವಿದ್ಯಾಲಯದ ಇತಿಹಾಸದಲ್ಲಿ ಪ್ರಮುಖ ಮೈಲಿಗಲ್ಲಾಗಲಿದೆ ಎಂದು ಪ್ರಾಚಾರ್ಯರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande