
ಕೊಪ್ಪಳ, 21 ಜುಲೈ (ಹಿ.ಸ.)
ಆ್ಯಂಕರ್ : 2025-26ನೇ ಶೈಕ್ಷಣಿಕ ಸಾಲಿಗೆ ಕೊಪ್ಪಳ ಜಿಲ್ಲೆಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಕೊಪ್ಪಳ ಇಲ್ಲಿ ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಡಿಪ್ಲೋಮಾ ಕೋರ್ಸಗಳಾದ ಡಿಪ್ಲೋಮಾ ಇನ್ ಟೂಲ್ & ಡೈ ಮೇಕಿಂಗ್, ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್, ಲ್ಯಾಟರಲ್ ಎಂಟ್ರಿ ಗೆ ಬಾಕಿ ಉಳಿದಿರುವ ಸೀಟುಗಳಿಗೆ ಆನ್ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿವಾರು ಖಾಲಿ ಸ್ಥಾನಗಳ ವಿವರ: ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್(ಡಿಟಿಡಿಎಂ) ಕೋರ್ಸ್ನಲ್ಲಿ 5 ಸ್ಥಾನಗಳು ಮತ್ತು ಡಿಪ್ಲೋಮಾ ಇನ್ ಮೆಕ್ಯಾಟ್ರಾನಿಕ್ಸ್ (ಡಿಎಂಸಿಹೆಚ್) ಕೋರ್ಸ್ನಲ್ಲಿ 2 ಸ್ಥಾನಗಳು ಖಾಲಿಯಿದ್ದು, ತರಬೇತಿಯ ಅವಧಿಯು 3+1 ವರ್ಷ ಆಗಿರುತ್ತದೆ. ಈ ಎರಡು ತರಬೇತಿಗಾಗಿ ಎಸ್.ಎಸ್.ಎಲ್.ಸಿ., ಪಿಯುಸಿ ಅಥವಾ ಐಟಿಐ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಲ್ಯಾಟರಲ್ ಎಂಟ್ರಿ ಕೋರ್ಸ್ನಲ್ಲಿ 11 ಸ್ಥಾನಗಳು ಖಾಲಿಯಿದ್ದು, ಅವಧಿಯು 2+1 ವರ್ಷ ಆಗಿರುತ್ತದೆ. ಈ ತರಬೇತಿಗೆ ಪಿಯುಸಿ ಅಥವಾ ಐಟಿಐ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಈ ಡಿಪ್ಲೋಮಾ ಕೋರ್ಸ ಪ್ರವೇಶಕ್ಕೆ ಆನ್ಲೈನ್ ಮೂಲಕ ಪ್ರವೇಶಾತಿ ಪ್ರಕ್ರಿಯೆ ಜುಲೈ 22 ರಿಂದ ಜಿಟಿಟಿಸಿ, ದದೇಗಲ್, ಕೊಪ್ಪಳ ಕೇಂದ್ರದಲ್ಲಿ ಅವಕಾಶ ಕಲ್ಪಿಸಲಾಗಿದೆ, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಗದಗ ರೋಡ್ ದದೇಗಲ್ ಕೊಪ್ಪಳ ಇಲ್ಲಿ ಖುದ್ದಾಗಿ ಬಂದು ಅಥವಾ ಅಂತರ್ಜಾಲ http://gttc-hrms.karnataka.gov.inadmission ನಲ್ಲಿ ಜುಲೈ 31ರ ಒಳಗಾಗಿ ಅರ್ಜಿ ಸಲ್ಲಿಸಬೇಕು. 2026-27ನೇ ಶೈಕ್ಷಣಿಕ ಸಾಲಿನಲ್ಲಿ ಎಐಸಿಟಿಯ ಅನುಮೋದಿತ ಜಿಟಿಟಿಸಿ ಕೇಂದ್ರವಾದ ಈ ಕಾಲೇಜಿನಲ್ಲಿ ಮೆರಿಟ್ ಕಮ್ ರೋಸ್ಟರ್ ಆದರದ ಮೇಲೆ 2026-27ನೇ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿಗಳಿಗೆ ಡಿಪ್ಲೋಮಾ ಪ್ರಥಮ ಸೆಮಿಸ್ಟರ್ ಪ್ರವೇಶ ಪಡೆಯಲು ಸಹ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಜಿಟಿಟಿಸಿ ಕಾರ್ಯಾಲಯ ಅಥವಾ ಕೊಪ್ಪಳ ಜಿಟಿಟಿಸಿ ಪ್ರಾಂಶುಪಾಲರಾದ ಮೌನೇಶ್ ರಾಥೋಡ್ ಮೊ.ಸಂ: 7507094445ಗೆ ಸಂಪರ್ಕಿಸಬಹುದು.
ಜಿಟಿಟಿಸಿ ಎಂದರೇನು: ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ)ಯು, 1972ರಲ್ಲಿ ಸ್ಥಾಪನೆಗೊಂಡು, ರಾಜ್ಯಾದ್ಯಂತ 28 ಡಿಪ್ಲೋಮಾ ಕಾಲೇಜುಗಳನ್ನು ಹೊಂದಿದ್ದು, ಡಿಪ್ಲೋಮಾ ಮತ್ತು ಪೋಸ್ಟ್ ಡಿಪ್ಲೋಮಾ ಹಾಗೂ ಎಮ್.ಟೆಕ್ ಕೋರ್ಸ್ಗಳನ್ನು ನಡೆಸುವ ``ಎಐಸಿಟಿಇ'' ಯಿಂದ ಅನುಮೋದನೆಗೊಂಡು ಅತ್ಯುನ್ಯತ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿದೆ. ಕರ್ನಾಟಕ ಸರಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಆಶ್ರಯದಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.
ಜಿಟಿಟಿಸಿ ಡಿಪ್ಲೋಮಾ ಕೋರ್ಸ್ಗಳ ವಿಶೇಷತೆ: ಜಿಟಿಟಿಸಿ ಡಿಪ್ಲೋಮಾ ಕೋರ್ಸ್ಗಳನ್ನು ಕ್ಲಾಸ್ರೂಮ್ ತರಬೇತಿಗಳಿಗಷ್ಟೆ ಸೀಮಿತಗೊಳಿಸದೆ ಪ್ರಾಯೋಗಿಕ ಹಾಗೂ ರಚನಾತ್ಮಕ ಕಲಿಕೆಗೆ ಒತ್ತು ನೀಡಿ ರೂಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಪಠ್ಯಕ್ರಮಗಳ ಜೊತೆಗೆ ಅತ್ಯಾದುನಿಕ ಯಂತ್ರೋಪಕರಣಗಳಾದ ಸಿ.ಎನ್.ಸಿ ಯಂತ್ರಗಳು, ರೋಬೋಟ್ಗಳು, 3ಡಿ ಮುದ್ರಕಗಳು, ಸಿ.ಎಮ್.ಎಮ್ ಇತ್ಯಾದಿಗಳನ್ನು ಬಳಸಿ ಪಾಠ ಮಾಡಲಾಗುತ್ತದೆ. ಕೈಗಾರಿಕೆ ಮತ್ತು ಕಂಪನಿಗಳ ಸಮಾಲೋಚನೆಯೊಂದಿಗೆ ಪಠ್ಯಕ್ರಮವನ್ನು ಇಂದಿನ ಮಾರುಕಟ್ಟೆಗಳ ಅಗತ್ಯಗಳಿಗನುಗುಣವಾಗಿ ವಿನ್ಯಾಸಗೊಳಿಸಲಾಗಿದೆ.
ಜಿಟಿಟಿಸಿ ಡಿಪ್ಲೋಮಾ, ಪಿ.ಡಿ.ಟಿ.ಡಿ ಮತ್ತು ಎಮ್.ಟೆಕ್ ಇನ್ ಟೂಲ್ ಇಂಜಿನಿಯರಿಂಗ್ವಿದ್ಯಾರ್ಥಿಗಳಿಗೆ ಇದುವರೆಗೂ ಕೈಗಾರಿಕೆಗಳಲ್ಲಿ ಉತ್ತಮ ಉದ್ಯೋಗವಕಾಶಗಳಿವೆ, ದೇಶ, ವಿದೇಶಗಳಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಇರುವ ಬೇಡಿಕೆಯೇ ಇದಕ್ಕೆ ಸಾಕ್ಷಿಯಾಗಿದೆ.
“ಜಿಟಿಟಿಸಿ ಪ್ರಾರಂಭದಿಂದ ಇಲ್ಲಿಯವರೆಗೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗವಕಾಶವನ್ನು ಪಡೆದುಕೊಳ್ಳಲು ನೆರವಾಗಿದೆ” ಜಿಟಿಟಿಸಿ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿದವರಿಗೆ ಲ್ಯಾಟರಲ್ ಎಂಟ್ರಿ ಮೂಲಕ ಇಂಜಿನಿಯರಿಂಗ್ ಕೋರ್ಸ್ಗಳಿಗೆ ದ್ವಿತೀಯ ವರ್ಷಕ್ಕೆ ನೇರ ಪ್ರವೇಶ ಹೊಂದಲು ಅವಕಾಶವಿರುತ್ತದೆ. ಎಸ್.ಸಿ/ಎಸ್.ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಸೌಲಭ್ಯವಿರುತ್ತದೆ. ಕೈಗಾರಿಕ ಪ್ರಾಯೋಜಿತ ಅಭ್ಯರ್ಥಿಗಳಿಗೆ ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಕೋರ್ಸ್ನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಎಸ್.ಎಸ್.ಎಲ್.ಸಿ ನಂತರ ವಿದ್ಯಾರ್ಥಿಗಳಿಗೆ ಜಿಟಿಟಿಸಿ ಕಾಲೇಜು ಉತ್ತಮ ಅವಕಾಶ ಕಲ್ಪಿಸಿಕೊಡುತ್ತದೆ ಮತ್ತು ತರಬೇತಿ ಪಡೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಶೇ. 100ರಷ್ಟು ಉದ್ಯೋಗ ಅವಕಾಶವಿರುತ್ತದೆ, ಜಿಟಿಟಿಸಿ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿದವರಿಗೆ ಲ್ಯಾಟರಲ್ ಎಂಟ್ರಿ ಮೂಲಕ ಇಂಜಿನಿಯರಿಂಗ್ ಕೋರ್ಸ್ಗಳಿಗೆ ದ್ವಿತೀಯ ವರ್ಷಕ್ಕೆ ನೇರ ಪ್ರವೇಶ ಹೊಂದಲು ಅವಕಾಶವಿರುತ್ತದೆ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಸೌಲಭ್ಯವನ್ನು ಒದಗಿಸಿಕೊಡಲಾಗುತ್ತದೆ ಎಂದು ಕೊಪ್ಪಳ ಜಿ.ಟಿ.ಟಿ.ಸಿ ಪ್ರಾಂಶುಪಾಲರಾದ ಮೌನೇಶ್ ರಾಥೋಡ್ ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್