ಜಿಲ್ಲಾ ಯುವ ಕಾಂಗ್ರೆಸ್ ನಿಂದ ನೀಟ್ ಬಗ್ಗೆ ಕಾರ್ಯಾಗಾರ
ಜಿಲ್ಲಾ ಯುವ ಕಾಂಗ್ರೆಸ್ ನಿಂದ ನೀಟ್ ಬಗ್ಗೆ ಕಾರ್ಯಾಗಾರ
ಯುವ ಕಾಂಗ್ರೆಸ್ನಿ0ದ ಜುಲೈ ೨೨ ರಂದು ಕೋಲಾರದಲ್ಲಿ ನೀಟ್ ಬಗ್ಗೆ ನಡೆಯಲಿರುವ ಕಾರ್ಯಾಗಾರದ ಬಗ್ಗೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಫ್ರೀದ್ ಮಾಹಿತಿ ನಿಡಿದರು.


ಕೋಲಾರ, ೨೦ ಜುಲೈ (ಹಿ.ಸ):

ಆ್ಯಂಕರ್: ನಗರದ ಮದರ್ ತೆರೇಸಾ ಕಾಲೇಜಿನಲ್ಲಿ ಜುಲೈ ೨೨ ರಂದು ಬುಧವಾರ ೧೨ ಗಂಟೆಗೆ ಕೋಲಾರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ಛಾತ್ರೋಂಕಿ ಗುಂಜ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಆಫ್ರಿದ್ ಮಾಹಿತಿ ನೀಡಿದರು

ವಿದ್ಯಾರ್ಥಿಗಳ ಪರ ಇಡೀ ದೇಶದಲ್ಲಿ ಧ್ವನಿ ಎತ್ತಿ ಹೋರಾಟ ಮಾಡುತ್ತಿರುವ ದೇಶದ ವಿಪಕ್ಷ ನಾಯಕ ರಾಹುಲ್ ಗಾಂಧಿರವರು ಛಾತ್ರೊಂಕಿ ಗುಂಜ್ ಕಾರ್ಯಕ್ರಮ ಎಲ್ಲಾ ಜಿಲ್ಲೆಗಳಲ್ಲೂ ಮಾಡಲು ಆದೇಶ ಮಾಡಿದ್ದಾರೆ. ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ರವರ ಮಾರ್ಗದರ್ಶನದಲ್ಲಿ ಕೋಲಾರದಲ್ಲಿ ಛಾತ್ರೊಂಕಿ ಗುಂಜ್ ಕಾರ್ಯಕ್ರಮ ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದ್ದು ನೀಟ್ ಪತ್ರಿಕೆ ಸೋರಿಕೆ ಮಾಡಿದ ಕೇಂದ್ರ ಸರ್ಕಾರದ ವಿರುದ್ಧ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಯುವಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮನವಿ ಮಾಡಿದರು

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಹಿರಿಯ ಕಾಂಗ್ರೆಸ್ ಮುಖಂಡ ಶ್ರೀಕೃಷ್ಣ, ಜೈದೀಪ್, ಮಂಜು, ಸಿ.ಪಿ ಹರೀಶ್, ಸುಧೀರ್ ಮುಂತಾದವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande