
ಕೋಲಾರ, ೨೦ ಜುಲೈ (ಹಿ.ಸ):
ಆ್ಯಂಕರ್ : ಉಡುಪಿಯ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜಗದ್ಗುರು ಶಂಕರಾಚಾರ್ಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವವರ ವಿರುದ್ದ ಮತ್ತು ಸಾಮಾಜಿಕ ಜಾಲತಾಣದಲ್ಲಿ ಶಂಕರಾಚಾರ್ಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ವಿವೇಕ್ ಸೂರ್ಯ ವಿರುದ್ದ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಕೋಲಾರ ಶೃಂಗೇರಿ ಶ್ರೀಶಂಕರ ಮಠ ಹಾಗೂ ಸೇವಾ ಟ್ರಸ್ಟ್ ನಗರ ಠಾಣೆಯಲ್ಲಿ ದೂರು ದಾಖಲಿಸಿತು.
ನಗರಠಾಣೆ ಪಿಎಸ್ಐ ಅವರಿಗೆ ದೂರು ನೀಡಿ ಮಾತನಾಡಿದ ಟ್ರಸ್ಟ್ನ ಪದಾಧಿಕಾರಿಗಳು, ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಂಕರಾಚಾರ್ಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ, ಬೇಷರತ್ ಕ್ಷಮೆಗೆ ನಿರಾಕರಿಸಿರುವುದು ಖಂಡನೀಯವಾಗಿದ್ದು, ಬಇವರ ವಿರುದ್ದ ಕಾನೂನು ರೀತ್ಯ ಕ್ರಮವಹಿಸಲು ಒತ್ತಾಯಿಸಲಾಯಿತು.
ಅದೇ ರೀತಿ ವಿವೇಕ್ ಸೂರ್ಯ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣ ಹಾಗೂ ಇತರೆ ಸಾರ್ವಜನಿಕ ವೇದಿಕೆಗಳಲ್ಲಿ ಜಗದ್ಗುರು ಶ್ರೀಶಂಕರಾಚಾರ್ಯರ ಕುರಿತು ನಿರಂತರವಾಗಿ ಅವಹೇಳನಕಾರಿ,ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ, ಇದರಿಮದಾಗಿ ಸಮಾಜದಲ್ಲಿ ಅಶಾಂತಿ,ವೈಮನ್ಸು, ಸಾರ್ವಜನಿಕ ಸೌಹಾರ್ದತೆಗೆ ಧಕ್ಕೆ ಎದುರಾಗಿದ್ದು, ಸದರಿ ವ್ಯಕ್ತಿಯ ವಿರುದ್ದ ಕ್ರಮಕ್ಕೆ ಒತ್ತಾಯಿಸಿದರು.
ಸದರಿ ವಿವೇಕ್ ಸೂರ್ಯ ಹೇಳಿಕೆಗಳನ್ನು ನೀಡುವುದನ್ನು ಸಮರ್ಥಿಸಿಕೊಂಡು `ತಾಕತ್ತಿದ್ದರೆ ನನ್ನ ವಿರುದ್ದಪ್ರಕರಣ ದಾಖಲಿಸಿ' ಎಂಬ ಅರ್ಥದಲ್ಲಿ ಸಾರ್ವಜನಿಕರಿಗೆ ಸವಾಲು ಹಾಕುತ್ತಿದ್ದು, ಇದು ಕಾನೂನಿನ ಬಗ್ಗೆ ಅಗೌರವ ತೋರಿಸುವ ಮತ್ತು ಜನರನ್ನು ಪ್ರಚೋದಿಸುವ ಕೃತ್ಯವಾಗಿದೆ ಎಂದು ಪೊಲೀಸರ ಗಮನಕ್ಕೆ ತಂದಿದ್ದಾರೆ. ವಿವೇಕ್ ಸೂರ್ಯ ವಿಷ್ಣು ಕಂಚಿಪುರಂನ ವರದರಾಜಸ್ವಾಮಿ ದೇವಾಲಯದ ಹತ್ತಿರ ವಾಸವಾಗಿರುವ ನಿವಾಸಿಯಾಗಿದ್ದು, ಅವರ ಈ ಅವಹೇಳನಕಾರಿ ಹೇಳಿಕೆಗಳು ಭಾರತೀಯ ನ್ಯಾಯಸಂಹಿತೆ-೨೦೨೩ ಹಗೂ ಅನ್ವಯವಾಗುವ ಇತರೆ ಕಾನೂನುಗಳ ಅಡಿಯಲ್ಲಿ ಪರಿಶೀಲನೆಗೆ ಒಳಪಡುವ ಸ್ವರೂಪದ್ದಾಗಿದ್ದು, ಸಾರ್ವಜನಿಕ ಶಾಂತಿಗೆ ಭಂಘ ತರುವ ಆತನ ಹೇಳಿಕೆಗಳ ವಿರುದ್ದ ತನಿಖೆ ನಡೆಸಬೇಕು.
ಇಂತಹ ಸಮಾಜಕ್ಕೆ ಮಾರಕವಾದ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳದಿದ್ದರೆ ಅವರು ನಿರಂತರವಾಗಿ ಸಮಾಜದ ಶಾಂತಿ ಕದಡುವ ಕೃತ್ಯಗಳನ್ನು ನಡೆಸುತ್ತಲೇ ಇರುತ್ತಾರೆ, ಈ ವ್ಯಕ್ತಿಯನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಲು ಒತ್ತಾಯಿಸಲಾಯಿತು.
ಶೃಂಗೇರಿ ಶಂಕರಸೇವಾ ಟ್ರಸ್ಟ್ ಅಧ್ಯಕ್ಷ ಡಾ.ಎಂ.ವಿ.ಜಯರಾಂ, ಪದಾಧಿಕಾರಿಗಳಾದ ಮುರಳಿ ಪ್ರಕಾಶ್, ಶಂಕರಮಠದ ಧರ್ಮಾಧಿಕಾರಿ ಜೆ.ಎನ್.ರಾಮಕೃಷ್ಣ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿ ಆನಂದಮೂರ್ತಿ, ಉದಯಕುಮಾರ್, ವಿಷ್ಣು, ಆನಂದ್, ಶ್ರೀಕಂಠನ್, ವರುಣ್ ಕುಮಾರ್, ಶ್ರೀವತ್ಸ, ರುಕ್ಮಿಣಿ, ರಾಘವಯ್ಯಶೆಟ್ಟಿ,ವಿ.ಎಸ್.ರಮೇಶ್, ಜಗದೀಶ್ ಅಯ್ಯರ್,ರಾಜೇಂದ್ರ ಪೊಲೀಸರಿಗೆ ದೂರು ನೀಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್