ಮುಂಗಾರು ಅಧಿವೇಶನ ಯಶಸ್ವಿಗೆ ಸಂಸದರಿಂದ ಸಹಕಾರ ಕೋರಿದ ಲೋಕಸಭಾಧ್ಯಕ್ಷ
ನವದೆಹಲಿ, 20 ಜುಲೈ (ಹಿ.ಸ.): ಆ್ಯಂಕರ್:ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಎಲ್ಲಾ ಸಂಸದರು ಸಕಾರಾತ್ಮಕ ಸಹಕಾರ ಮತ್ತು ರಚನಾತ್ಮಕವಾಗಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ. ಸಂಸತ್ತು ಪ್ರಜಾಪ್ರಭುತ್ವದ ಅತ್ಯುನ್ನತ ವೇದಿಕೆಯಾಗಿದ್ದು, ಜನಹಿತ ಹಾಗೂ ರಾಷ್ಟ
LS committee meeting


ನವದೆಹಲಿ, 20 ಜುಲೈ (ಹಿ.ಸ.):

ಆ್ಯಂಕರ್:ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಎಲ್ಲಾ ಸಂಸದರು ಸಕಾರಾತ್ಮಕ ಸಹಕಾರ ಮತ್ತು ರಚನಾತ್ಮಕವಾಗಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.

ಸಂಸತ್ತು ಪ್ರಜಾಪ್ರಭುತ್ವದ ಅತ್ಯುನ್ನತ ವೇದಿಕೆಯಾಗಿದ್ದು, ಜನಹಿತ ಹಾಗೂ ರಾಷ್ಟ್ರಹಿತದ ವಿಷಯಗಳ ಕುರಿತು ಅರ್ಥಪೂರ್ಣ ಚರ್ಚೆ ಮತ್ತು ಪರಿಣಾಮಕಾರಿ ಶಾಸನ ಕಾರ್ಯಕ್ಕೆ ಈ ಅಧಿವೇಶನ ಮಹತ್ವದ ಅವಕಾಶವಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಂವಿಧಾನದ ಆಶಯ, ಸಂಸತ್ತಿನ ಸಂಪ್ರದಾಯ ಮತ್ತು ಗೌರವವನ್ನು ಕಾಪಾಡಿಕೊಂಡು ಎಲ್ಲ ಸದಸ್ಯರು ಸದನದ ಕಲಾಪದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಬಿರ್ಲಾ ಕರೆ ನೀಡಿದ್ದಾರೆ.

ಸಂಸದರ ಸಾಮೂಹಿಕ ಜವಾಬ್ದಾರಿಯಿಂದ ಹೆಚ್ಚು ಶಾಸನ ಮತ್ತು ಸಂಸತ್ತಿನ ಕಾರ್ಯಗಳನ್ನು ಪೂರ್ಣಗೊಳಿಸುವ ಮೂಲಕ ಜನರ ವಿಶ್ವಾಸವನ್ನು ಬಲಪಡಿಸಬಹುದು ಹಾಗೂ ಪ್ರಜಾಪ್ರಭುತ್ವ ಸಂಸ್ಥೆಗಳ ಘನತೆ ಹೆಚ್ಚಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande