ಗಾಜಿಯಾಬಾದ್–ನವದೆಹಲಿ ರೈಲು ಮಾರ್ಗದಲ್ಲಿ ಸರಕು ರೈಲು ಹಳಿ ತಪ್ಪಿ 53 ರೈಲುಗಳ ಸಂಚಾರ ವ್ಯತ್ಯಯ
ನವದೆಹಲಿ, 21 ಜುಲೈ (ಹಿ.ಸ.): ಆ್ಯಂಕರ್: ಗಾಜಿಯಾಬಾದ್–ನವದೆಹಲಿ ರೈಲು ವಿಭಾಗದಲ್ಲಿ ಮಂಗಳವಾರ ಸರಕು ರೈಲಿನ ಆರು ತುಂಬಿದ ಬೋಗಿಗಳು ಹಳಿ ತಪ್ಪಿದ ಪರಿಣಾಮ ಉತ್ತರ ರೈಲ್ವೆಯ ಪ್ರಮುಖ ಮಾರ್ಗಗಳಲ್ಲಿ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ. ಈ ಘಟನೆದಿಂದ ಒಟ್ಟು 53 ರೈಲುಗಳ ಸಂಚಾರಕ್ಕೆ ತೀವ್ರ ಪರಿಣಾಮ ಉಂಟಾಗಿದ
ಸಾಂಕೇತಿಕ


ನವದೆಹಲಿ, 21 ಜುಲೈ (ಹಿ.ಸ.):

ಆ್ಯಂಕರ್:

ಗಾಜಿಯಾಬಾದ್–ನವದೆಹಲಿ ರೈಲು ವಿಭಾಗದಲ್ಲಿ ಮಂಗಳವಾರ ಸರಕು ರೈಲಿನ ಆರು ತುಂಬಿದ ಬೋಗಿಗಳು ಹಳಿ ತಪ್ಪಿದ ಪರಿಣಾಮ ಉತ್ತರ ರೈಲ್ವೆಯ ಪ್ರಮುಖ ಮಾರ್ಗಗಳಲ್ಲಿ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ. ಈ ಘಟನೆದಿಂದ ಒಟ್ಟು 53 ರೈಲುಗಳ ಸಂಚಾರಕ್ಕೆ ತೀವ್ರ ಪರಿಣಾಮ ಉಂಟಾಗಿದ್ದು, ಹಲವು ರೈಲುಗಳನ್ನು ರದ್ದುಪಡಿಸಲಾಗಿದೆ ಹಾಗೂ ಕೆಲವು ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ.

ಉತ್ತರ ರೈಲ್ವೆ ನೀಡಿದ ಮಾಹಿತಿಯಂತೆ, ಘಟನೆ ನಡೆದ ತಕ್ಷಣವೇ ವಿಭಾಗೀಯ ರೈಲು ವ್ಯವಸ್ಥಾಪಕ (ಡಿಆರ್‌ಎಂ), ಹೆಚ್ಚುವರಿ ವಿಭಾಗೀಯ ರೈಲು ವ್ಯವಸ್ಥಾಪಕ (ಎಡಿಆರ್‌ಎಂ) ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪುನಃಸ್ಥಾಪನಾ ಕಾರ್ಯದ ಮೇಲ್ವಿಚಾರಣೆ ನಡೆಸಿದರು. ಹಳಿ ತಪ್ಪಿದ ಬೋಗಿಗಳನ್ನು ತೆರವುಗೊಳಿಸಿ ರೈಲು ಸಂಚಾರವನ್ನು ಶೀಘ್ರ ಪುನರಾರಂಭಿಸಲು ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ಘಟನೆಯ ಪರಿಣಾಮ 24 ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ, 16 ಪ್ರಯಾಣಿಕರ ರೈಲುಗಳನ್ನು ಸಂಪೂರ್ಣ ರದ್ದುಪಡಿಸಲಾಗಿದೆ, ಐದು ರೈಲುಗಳನ್ನು ಭಾಗಶಃ ರದ್ದುಪಡಿಸಲಾಗಿದೆ ಹಾಗೂ ಎಂಟು ರೈಲುಗಳ ಸಂಚಾರವನ್ನು ನಿಯಂತ್ರಿಸಲಾಗಿದೆ.

ಸಂಪೂರ್ಣ ರದ್ದಾದ ರೈಲುಗಳಲ್ಲಿ ಗಾಜಿಯಾಬಾದ್–ದೆಹಲಿ, ದೆಹಲಿ–ಶಾಹಿಬಾಬಾದ್, ಶಾಹಿಬಾಬಾದ್–ದೆಹಲಿ, ದೆಹಲಿ–ಗಾಜಿಯಾಬಾದ್, ಗಾಜಿಯಾಬಾದ್–ನವದೆಹಲಿ ಸೇರಿದಂತೆ ಉಪನಗರ ಮಾರ್ಗದ ಹಲವು ರೈಲುಗಳು ಸೇರಿವೆ. ಜೊತೆಗೆ ಕೆಲವು ರೈಲುಗಳನ್ನು ಗಾಜಿಯಾಬಾದ್‌ನಿಂದಲೇ ಆರಂಭಿಸಲಾಗಿದ್ದು, ಕೆಲವು ರೈಲುಗಳ ಸಂಚಾರವನ್ನು ಗಾಜಿಯಾಬಾದ್ ಅಥವಾ ನವದೆಹಲಿವರೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಸಹಾರನ್‌ಪುರ–ದೆಹಲಿ ಪ್ಯಾಸೆಂಜರ್ ರೈಲನ್ನು ಶಾಹಿಬಾಬಾದ್–ದೆಹಲಿ ಸರಾಯಿ ರೋಹಿಲ್ಲಾ ಮಾರ್ಗದ ಮೂಲಕ ಸಂಚರಿಸುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ.

ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ ಎಂದು ಉತ್ತರ ರೈಲ್ವೆ ಸ್ಪಷ್ಟಪಡಿಸಿದೆ. ಪ್ರಯಾಣಿಕರು ಪ್ರಯಾಣಕ್ಕೆ ಮುನ್ನ ತಮ್ಮ ರೈಲಿನ ನವೀಕೃತ ವೇಳಾಪಟ್ಟಿ ಮತ್ತು ಸಂಚಾರ ಸ್ಥಿತಿಯನ್ನು ಪರಿಶೀಲಿಸಿಕೊಂಡು ಪ್ರಯಾಣಿಸುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande