ರಾಜೌರಿ-ಪುಂಚ್ನಲ್ಲಿ ಭಾರಿ ಮಳೆ ಅಬ್ಬರ: ಅಮರನಾಥ, ವೈಷ್ಣೋ ದೇವಿ ಯಾತ್ರೆ ಎರಡನೇ ದಿನವೂ ಸ್ಥಗಿತ
ಜಮ್ಮು, 20 ಜುಲೈ (ಹಿ.ಸ.): ಆ್ಯಂಕರ್: ಜಮ್ಮು ವಿಭಾಗದ ರಾಜೌರಿ ಹಾಗೂ ಪುಂಚ್ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಲ್ಲಿ ಎಂಟು ಮಂದಿ ಮೃತಪಟ್ಟಿದ್ದು, ಕನಿಷ್ಠ 12 ಮಂದಿ ನಾಪತ್ತೆಯಾಗಿದ್ದಾರೆ. ರಕ್ಷಣಾ ಸಿಬ್ಬಂದಿ ಎರಡನೇ ದಿನವೂ ಶೋಧ ಕಾರ್ಯ ಮುಂದುವರಿಸಿದ್ದಾರೆ. ಪ್ರವಾಹದಿಂ
ರಕ್ಷಣಾ ಕಾರ್ಯಾಚರಣೆ


ಜಮ್ಮು, 20 ಜುಲೈ (ಹಿ.ಸ.):

ಆ್ಯಂಕರ್:

ಜಮ್ಮು ವಿಭಾಗದ ರಾಜೌರಿ ಹಾಗೂ ಪುಂಚ್ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಲ್ಲಿ ಎಂಟು ಮಂದಿ ಮೃತಪಟ್ಟಿದ್ದು, ಕನಿಷ್ಠ 12 ಮಂದಿ ನಾಪತ್ತೆಯಾಗಿದ್ದಾರೆ. ರಕ್ಷಣಾ ಸಿಬ್ಬಂದಿ ಎರಡನೇ ದಿನವೂ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಪ್ರವಾಹದಿಂದ 145 ಮನೆಗಳು, ಶಾಲೆಗಳು, ಅಂಗಡಿಗಳು, ಕೃಷಿ ಭೂಮಿ ಹಾಗೂ ಸಾರ್ವಜನಿಕ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯಾಗಿದೆ. ಪುಂಚ್ ಜಿಲ್ಲೆ ಅತ್ಯಧಿಕ ಹಾನಿಗೊಳಗಾಗಿದ್ದು, ರಾಜೌರಿಯಲ್ಲೂ ರಸ್ತೆ, ವಾಹನಗಳು ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ದೊಡ್ಡ ಪ್ರಮಾಣದ ಹಾನಿಯಾಗಿದೆ.

ಎಸ್‌ಡಿಆರ್‌ಎಫ್, ಪೊಲೀಸರು ಹಾಗೂ ಆಡಳಿತದ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಭೂಕುಸಿತದಿಂದ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವು ರಸ್ತೆಗಳು ಬಂದ್ ಆಗಿವೆ.

ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಶ್ರೀ ಅಮರನಾಥ ಯಾತ್ರೆ ಮತ್ತು ಮಾತಾ ವೈಷ್ಣೋ ದೇವಿ ಯಾತ್ರೆಯನ್ನು ಸತತ ಎರಡನೇ ದಿನವೂ ಸ್ಥಗಿತಗೊಳಿಸಲಾಗಿದೆ.

ಜುಲೈ 23ರವರೆಗೆ ಜಮ್ಮು, ರಿಯಾಸಿ, ಉಧಂಪುರ, ರಾಂಬನ್, ಕಠುವಾ, ಸಾಂಬಾ, ಡೋಡಾ, ಕಿಶ್ತವಾರ್, ರಾಜೌರಿ ಹಾಗೂ ಪುಂಚ್ ಜಿಲ್ಲೆಗಳ ಕೆಲ ಭಾಗಗಳಲ್ಲಿ ಭಾರೀ ಮಳೆ, ಹಠಾತ್ ಪ್ರವಾಹ ಮತ್ತು ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande