
ಕೋಲಾರ, ೨೦ ಜುಲೈ(ಹಿ.ಸ):
ಆ್ಯಂಕರ್: ಕರಾಟೆಯಂತಹ ಮಾರ್ಷಲ್ ಆರ್ಟ್ಸ್ ಕೇವಲ ಆತ್ಮರಕ್ಷಣೆಗಾಗಿ ಮಾತ್ರವಲ್ಲದೆ, ವಿದ್ಯಾರ್ಥಿಗಳಲ್ಲಿ ಮಾನಸಿಕ ದೃಢತೆ, ಏಕಾಗ್ರತೆ ಮತ್ತು ಧೈರ್ಯವನ್ನು ಬೆಳೆಸುತ್ತದೆ. ರಾಮು ಮಾರ್ಷಲ್ ಆರ್ಟ್ಸ್ ಅಕಾಡೆಮಿಯು ಮಕ್ಕಳಲ್ಲಿ ಉತ್ತಮ ಕ್ರೀಡಾಸ್ಪೂರ್ತಿಯನ್ನು ತುಂಬುವುದರ ಜೊತೆಗೆ ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕಲು ಉತ್ತಮ ವೇದಿಕೆಯನ್ನು ಕಲ್ಪಿಸಿದೆ. ಭಾಗವಹಿಸಿರುವ ಎಲ್ಲಾ ವಿದ್ಯಾರ್ಥಿಗಳು ಇನ್ನಷ್ಟು ಉನ್ನತ ಮಟ್ಟಕ್ಕೇರಲಿ ಎಂದು ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಗಣೇಶ್ ಶುಭ ಹಾರೈಸಿದರು.
ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಕೋಲಾರದ ರಾಮು ಮಾರ್ಷಲ್ ಆರ್ಟ್ಸ್ ಅಕಾಡೆಮಿಯಿಂದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಬೆಲ್ಟ್ ಪ್ರಮೋಷನ್ ಹಾಗೂ ಕರಾಟೆಯಲ್ಲಿ ಗಿನ್ನೀಸ್ ವರ್ಲ್ಡ್ ರೆಕಾರ್ಡ್ ಸಾಧಕರಾದ ಯಶವಂತ್, ಮೈದಿಲಿ, ಕುಶಾಲ, ಅಂಜನ್ ಮೂರ್ತಿ, ಸಾಯಿ ಅವೀಶ್, ಪವನ್ರಾಜ್ ರವರಿಗೆ ನೀಡಲಾದ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮ ಅಧ್ಯಕ್ಷತೆ ಮಾತನಾಡಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀನಿವಾಸ್ ಪ್ರತಿಭಾವಂತ ಕ್ರೀಡಾಪಟುಗಳಿಗೆ ಹಾಗೂ ಕ್ರೀಡಾ ಸಂಸ್ಥೆಗಳಿಗೆ ಇಲಾಖೆಯಿಂದ ಬೆಂಬಲ ನೀಡಲಾಗುವುದು. ಇಂದಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಮತ್ತು ತಂತ್ರಜ್ಞಾನಕ್ಕೆ ಸೀಮಿತವಾಗುತ್ತಿರುವ ಈ ಕಾಲಘಟ್ಟದಲ್ಲಿ, ದೈಹಿಕ ದೃಢತೆ ಮತ್ತು ಶಿಸ್ತನ್ನು ಕಲಿಸುವ ಕರಾಟೆಯಂತಹ ಕಲೆಗಳು ಅತ್ಯಾವಶ್ಯಕವಾಗಿವೆ. ರಾಮು ಮಾರ್ಷಲ್ ಆರ್ಟ್ಸ್ ಅಕಾಡೆಮಿಯ ಮುಖ್ಯ ತರಬೇತುದಾರರು ಮತ್ತು ಪೋಷಕರು ಮಕ್ಕಳ ಪ್ರಗತಿಗಾಗಿ ಮಾಡುತ್ತಿರುವ ಶ್ರಮ ಶ್ಲಾಘನೀಯ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮತ್ತು ನಿರಂತರ ಅಭ್ಯಾಸದ ಮೂಲಕ ರಾಷ್ಟ್ರಮಟ್ಟದಲ್ಲಿ ಜಿಲ್ಲೆಯ ಹೆಸರನ್ನು ತರಬೇಕು ಎಂದು
ಕೋಲಾರ ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ಸುಬ್ರಮಣಿ ಮಾತನಾಡಿ ಇಂದಿನ ದಿನಗಳಲ್ಲಿ ಸಮಾಜದಲ್ಲಿ ಮಕ್ಕಳಿಗೆ ಕೇವಲ ಬುದ್ಧಿವಂತಿಕೆ ಇದ್ದರೆ ಸಾಲದು, ದೈಹಿಕ ಮತ್ತು ಮಾನಸಿಕ ಸ್ಥೈರ್ಯವೂ ತುಂಬಾ ಮುಖ್ಯ. ಬೆಲ್ಟ್ ಪ್ರಮೋಷನ್ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಕಠಿಣ ಪರಿಶ್ರಮದಿಂದ ಈ ಹಂತಕ್ಕೆ ಬಂದಿದ್ದಾರೆ. ಇದು ಕೇವಲ ಒಂದು ಪ್ರಮಾಣಪತ್ರ ಅಥವಾ ಬೆಲ್ಟ್ ಅಲ್ಲ, ಬದಲಾಗಿ ಅವರ ಮುಂದಿನ ಭವಿಷ್ಯಕ್ಕೆ ಸಿಕ್ಕಿರುವ ಆತ್ಮವಿಶ್ವಾಸದ ಪ್ರತೀಕ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಬೆಲ್ಟ್ಗಳನ್ನು ಪಡೆದು ಹಾಗೂ ಪ್ರಮಾಣಪತ್ರಗಳನ್ನು ಸ್ವೀಕರಿಸಿದರು. ವಿದ್ಯಾರ್ಥಿಗಳ ಶಿಸ್ತು, ಪರಿಶ್ರಮ ಮತ್ತು ಆತ್ಮವಿಶ್ವಾಸವನ್ನು ಕಂಡು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮವು ಉತ್ತಮ ಸಂಘಟನೆ ಹಾಗೂ ಶಿಸ್ತಿನೊಂದಿಗೆ ನೆರವೇರಿತು.
ಕಾರ್ಯಕ್ರಮದಲ್ಲಿ ರಾಮು ಮಾರ್ಷಲ್ ಆರ್ಟ್ಸ್ ಸಂಸ್ಥಾಪಕ ಅಧ್ಯಕ್ಷ ಕರಾಟೆ ರಾಮು, ಶ್ರೀನಿವಾಸಪುರದ ತಾಲ್ಲೂಕು ಅಧ್ಯಕ್ಷ ನಾಗರಮುನಿ, ಬಂಗಾರಪೇಟೆ ಕರಾಟೆ ಶಿಕ್ಷಕರಾದ ಅಂಜನೇಯ ಮೂರ್ತಿ ಹಾಗೂ ಜನಪದ ಗಾಯಕ ಈನೆಲ ಈಜಲ ವೆಂಕಟಾಚಲಪತಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್