ಪ್ರೇಯಸಿ ಮಾತಾಡ್ತಿಲ್ಲ ಎಂದು ಮನನೊಂದ 41 ವರ್ಷದ ವ್ಯಕ್ತಿ ಆತ್ಮಹತ್ಯೆ
ಬೆಂಗಳೂರು, 20 ಜುಲೈ (ಹಿ.ಸ.): ಆ್ಯಂಕರ್: ಕಳೆದ ಒಂದು ವಾರದಿಂದ ಗರ್ಲ್ ಫ್ರೆಂಡ್ ಮಾತನಾಡ್ತಿಲ್ಲ ಅಂತ 41 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ವೈಯಾಲಿಕಾವಲ್ನ ಪ್ಯಾಲೇಸ್ ಗುಟ್ಟಹಳಿಯಲ್ಲಿ ಘಟನೆ ನಡೆದಿದೆ. ಡಾರ್ಜಿಲಿಂಗ್ ಮೂಲದ ಸುದೀಪ್ (41) ಆತ್ಮಹತ್ಯೆ ಮಾಡಿಕೊಂಡ ವ್ಯ
Bengaluru Suicide


ಬೆಂಗಳೂರು, 20 ಜುಲೈ (ಹಿ.ಸ.):

ಆ್ಯಂಕರ್:

ಕಳೆದ ಒಂದು ವಾರದಿಂದ ಗರ್ಲ್ ಫ್ರೆಂಡ್ ಮಾತನಾಡ್ತಿಲ್ಲ ಅಂತ 41 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ವೈಯಾಲಿಕಾವಲ್ನ ಪ್ಯಾಲೇಸ್ ಗುಟ್ಟಹಳಿಯಲ್ಲಿ ಘಟನೆ ನಡೆದಿದೆ. ಡಾರ್ಜಿಲಿಂಗ್ ಮೂಲದ ಸುದೀಪ್ (41) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರರುತಿಸಲಾಗಿದೆ. ಪ್ರೇಯಸಿ ಕಳೆದ ಒಂದು ವಾರದಿಂದ ಸುದೀಪ್ ಜೊತೆ ಮಾತು ಬಿಟ್ಟಿದ್ದು, ಮೊಬೈಲ್ ನಂಬರ್ ಕೂಡಾ ಬ್ಲಾಕ್ ಮಾಡಿದ್ದಾಳೆ ಕಾರಣ ಸುದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜನನಿಬಿಡ ಪ್ರದೇಶದಲ್ಲೇ ದೇವಸ್ಥಾನದ ಎದುರಿನ ಮರವೊಂದಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೂಟ್ ಕೇಸಲ್ಲಿ ನಗದು ಹಣ ಇಟ್ಟು ಆತ್ಮಹತ್ಯೆ ಮಾಡಿಕೊಂಡಿಕೊಂಡಿದ್ದಾನೆ. ಇನ್ನೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ವೈಯಾಲಿಕಾವಲ್ ಪೊಲೀಸರು, ಮೃತದೇಹವನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ

ಹಿಂದೂಸ್ತಾನ್ ಸಮಾಚಾರ್ / NAVEEN PARADESHII


 rajesh pande