ಜಾಂಜಿಬಾರ್ ಅಧ್ಯಕ್ಷರೊಂದಿಗೆ ಜೈಶಂಕರ್ ಮಾತುಕತೆ
ನವದೆಹಲಿ, 19 ಜುಲೈ (ಹಿ.ಸ.): ಆ್ಯಂಕರ್: ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಟಾಂಜಾನಿಯಾದ ಸಂಯುಕ್ತ ಗಣರಾಜ್ಯದ ಜಾಂಜಿಬಾರ್ ಅಧ್ಯಕ್ಷ ಹಾಗೂ ಕ್ರಾಂತಿಕಾರಿ ಮಂಡಳಿಯ ಅಧ್ಯಕ್ಷ ಡಾ. ಹುಸೇನ್ ಅಲಿ ಮ್ವಿನಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ದ್ವಿಪಕ್ಷೀಯ ಸಹಕಾರ ಕುರಿತು ಚರ್ಚಿಸಿದರು. ಭೇಟಿಯ ವೇಳೆ ಉನ
Met


ನವದೆಹಲಿ, 19 ಜುಲೈ (ಹಿ.ಸ.):

ಆ್ಯಂಕರ್:

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಟಾಂಜಾನಿಯಾದ ಸಂಯುಕ್ತ ಗಣರಾಜ್ಯದ ಜಾಂಜಿಬಾರ್ ಅಧ್ಯಕ್ಷ ಹಾಗೂ ಕ್ರಾಂತಿಕಾರಿ ಮಂಡಳಿಯ ಅಧ್ಯಕ್ಷ ಡಾ. ಹುಸೇನ್ ಅಲಿ ಮ್ವಿನಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ದ್ವಿಪಕ್ಷೀಯ ಸಹಕಾರ ಕುರಿತು ಚರ್ಚಿಸಿದರು.

ಭೇಟಿಯ ವೇಳೆ ಉನ್ನತ ಶಿಕ್ಷಣ, ಸಾಮರ್ಥ್ಯ ವೃದ್ಧಿ, ಕುಡಿಯುವ ನೀರು, ಆರೋಗ್ಯ, ಕೃತಕ ಬುದ್ಧಿಮತ್ತೆ (ಎಐ), ಡಿಜಿಟಲ್ ತಂತ್ರಜ್ಞಾನ ಸೇರಿದಂತೆ ಹಲವು ಆದ್ಯತೆಯ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಕುರಿತು ಉಭಯ ನಾಯಕರು ಚರ್ಚಿಸಿದರು.

ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಜೈಶಂಕರ್, ಜಾಂಜಿಬಾರ್‌ನಲ್ಲಿರುವ ಐಐಟಿ ಮದ್ರಾಸ್‌ನ ವಿದೇಶಿ ಕ್ಯಾಂಪಸ್ ಭಾರತ–ಆಫ್ರಿಕಾ ನಡುವಿನ ಬಲವಾದ ಸಹಭಾಗಿತ್ವ ಹಾಗೂ ಆಫ್ರಿಕಾದ ಶಿಕ್ಷಣ ಮತ್ತು ಅಭಿವೃದ್ಧಿ ಆದ್ಯತೆಗಳತ್ತ ಭಾರತದ ಬದ್ಧತೆಯ ಪ್ರತೀಕವಾಗಿದೆ ಎಂದು ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande