ಫಿಫಾ ವಿಶ್ವಕಪ್ : ದಕ್ಷಿಣ ಆಫ್ರಿಕಾ ಮಣಿಸಿದ ಕೆನಡಾ ಅಂತಿಮ-16ಕ್ಕೆ
ಇಂಗಲ್ವುಡ್, 29 ಜೂನ್ (ಹಿ.ಸ.) : ಆ್ಯಂಕರ್ : ಸಹ ಆತಿಥೇಯ ರಾಷ್ಟ್ರ ಕೆನಡಾ, ಫಿಫಾ ವಿಶ್ವಕಪ್-2026ರ ಪ್ರೀ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 1–0 ಗೋಲುಗಳಿಂದ ಮಣಿಸಿ ಮೊದಲ ಬಾರಿಗೆ ವಿಶ್ವಕಪ್ನ ಅಂತಿಮ-16 ಹಂತಕ್ಕೆ ಐತಿಹಾಸಿಕವಾಗಿ ಪ್ರವೇಶಿಸಿದೆ. ಪಂದ್ಯದ ಹೆಚ್ಚುವರಿ ಅವಧಿಯಲ್ಲಿ
ಸ್ಟಾಪೇಜ್ ಟೈಮ್ನಲ್ಲಿ ನಾಯಕನ ಗೋಲು


ಇಂಗಲ್ವುಡ್, 29 ಜೂನ್ (ಹಿ.ಸ.) :

ಆ್ಯಂಕರ್ : ಸಹ ಆತಿಥೇಯ ರಾಷ್ಟ್ರ ಕೆನಡಾ, ಫಿಫಾ ವಿಶ್ವಕಪ್-2026ರ ಪ್ರೀ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 1–0 ಗೋಲುಗಳಿಂದ ಮಣಿಸಿ ಮೊದಲ ಬಾರಿಗೆ ವಿಶ್ವಕಪ್ನ ಅಂತಿಮ-16 ಹಂತಕ್ಕೆ ಐತಿಹಾಸಿಕವಾಗಿ ಪ್ರವೇಶಿಸಿದೆ. ಪಂದ್ಯದ ಹೆಚ್ಚುವರಿ ಅವಧಿಯಲ್ಲಿ ನಾಯಕ ಸ್ಟೀಫನ್ ಯೂಸ್ಟಾಕಿಯೊ ಬಾರಿಸಿದ ಏಕೈಕ ಗೋಲು ಕೆನಡಾದ ಗೆಲುವಿನ ರೂವಾರಿಯಾಯಿತು.

ಆರಂಭದಿಂದಲೇ ಉಭಯ ತಂಡಗಳು ಸಮಬಲದ ಹೋರಾಟ ನಡೆಸಿದವು. ಮಧ್ಯಭಾಗದ ನಿಯಂತ್ರಣಕ್ಕಾಗಿ ಎರಡೂ ತಂಡಗಳು ಪೈಪೋಟಿ ನಡೆಸಿದರೂ ಮೊದಲಾರ್ಧದಲ್ಲಿ ಯಾವುದೇ ತಂಡಕ್ಕೂ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಕೆನಡಾಕ್ಕೆ ದೊರೆತ ಕೆಲ ಉತ್ತಮ ಅವಕಾಶಗಳನ್ನು ದಕ್ಷಿಣ ಆಫ್ರಿಕಾದ ಗೋಲ್ಕೀಪರ್ ರೋನ್ವೆನ್ ವಿಲಿಯಮ್ಸ್ ಹಾಗೂ ರಕ್ಷಣಾ ಆಟಗಾರರು ಯಶಸ್ವಿಯಾಗಿ ವಿಫಲಗೊಳಿಸಿದರು.

ಎರಡನೇ ಅರ್ಧದಲ್ಲೂ ಕೆನಡಾ ಹೆಚ್ಚು ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಟಾನಿ ಒಲುವಾಸೆಯಿ ಹಾಗೂ ಜೊನಾಥನ್ ಡೇವಿಡ್ ಗೋಲು ಗಳಿಸಲು ಪ್ರಯತ್ನಿಸಿದರೂ ಯಶಸ್ಸು ಸಿಗಲಿಲ್ಲ. ಪಂದ್ಯ ಹೆಚ್ಚುವರಿ ಅವಧಿಗೆ ಸಾಗುವ ಹಂತದಲ್ಲಿದ್ದಾಗ, ಸ್ಟಾಪೇಜ್ ಟೈಮ್ನಲ್ಲಿ ನಾಯಕ ಸ್ಟೀಫನ್ ಯೂಸ್ಟಾಕಿಯೊ ಪೆನಾಲ್ಟಿ ಪ್ರದೇಶದ ಹೊರಗಿನಿಂದ ಬಾರಿಸಿದ ಪ್ರಬಲ ಶಾಟ್ ನೇರವಾಗಿ ಗೋಲುಪೆಟ್ಟಿಗೆ ಸೇರಿ ಕೆನಡಾಕ್ಕೆ ಅಮೂಲ್ಯ ಮುನ್ನಡೆ ತಂದುಕೊಟ್ಟಿತು.

ಹಿನ್ನಡೆಯಾದ ಬಳಿಕ ದಕ್ಷಿಣ ಆಫ್ರಿಕಾ ಕೊನೆಯ ಕ್ಷಣಗಳಲ್ಲಿ ಸಮಬಲ ಸಾಧಿಸಲು ಸತತ ಪ್ರಯತ್ನ ನಡೆಸಿದರೂ, ಕೆನಡಾದ ರಕ್ಷಣಾ ವಿಭಾಗ ಸಂಘಟಿತ ಪ್ರದರ್ಶನ ನೀಡಿ ಎಲ್ಲಾ ದಾಳಿಗಳನ್ನು ವಿಫಲಗೊಳಿಸಿತು. ಅಂತಿಮ ಸೀಟಿಯೊಂದಿಗೆ ಕೆನಡಾ 1–0 ಅಂತರದ ಐತಿಹಾಸಿಕ ಗೆಲುವು ದಾಖಲಿಸಿತು.

ಪಂದ್ಯದ ಬಳಿಕ ಮಾತನಾಡಿದ ಕೆನಡಾ ಮುಖ್ಯ ಕೋಚ್ ಜೆಸ್ಸಿ ಮಾರ್ಷ್, ಕಳೆದ ಎರಡು ವರ್ಷಗಳಿಂದ ತಂಡ ನಡೆಸಿದ ಕಠಿಣ ಪರಿಶ್ರಮ ಮತ್ತು ಯೋಜಿತ ಸಿದ್ಧತೆಯ ಫಲವಾಗಿ ಈ ಐತಿಹಾಸಿಕ ಸಾಧನೆ ಸಾಧ್ಯವಾಗಿದೆ ಎಂದು ಆಟಗಾರರನ್ನು ಶ್ಲಾಘಿಸಿದರು.

ಈ ಜಯದೊಂದಿಗೆ ಕೆನಡಾ ಜುಲೈ 4ರಂದು ನಡೆಯಲಿರುವ ಅಂತಿಮ-16ರ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ಅಥವಾ ಮೊರಾಕ್ಕೊ ತಂಡಗಳಲ್ಲಿ ಒಂದನ್ನು ಎದುರಿಸಲಿದೆ. ವಿಶ್ವಕಪ್ನಲ್ಲಿ ಮೊದಲ ಬಾರಿಗೆ ಅಂತಿಮ-16 ಹಂತ ತಲುಪಿರುವ ಕೆನಡಾ, ಇದೀಗ ಕ್ವಾರ್ಟರ್ಫೈನಲ್ ಪ್ರವೇಶಿಸುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande