
ಬೆಂಗಳೂರು, 29 ಜೂನ್ (ಹಿ.ಸ.) :
ಆ್ಯಂಕರ್ : ಪಿಸಿಎ ದತ್ತಿ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ ಎರಡನೇ ದಿನವೂ ಯಶಸ್ವಿಯಾಗಿ ಮುಂದುವರಿಯಿತು.
ಅಭಿಯಾನದ ಅಂಗವಾಗಿ ಟ್ರಸ್ಟ್ನ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ, ಐದು ವರ್ಷದೊಳಗಿನ ಯಾವುದೇ ಮಗು ಜೀವ ರಕ್ಷಕ ಪೋಲಿಯೊ ಲಸಿಕೆಯಿಂದ ವಂಚಿತವಾಗದಂತೆ ಜಾಗೃತಿ ಮೂಡಿಸಿದರು. ಪೋಷಕರೊಂದಿಗೆ ಸಂವಾದ ನಡೆಸಿ, ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಲಸಿಕೆ ಹಾಕಿಸುವಂತೆ ಮನವಿ ಮಾಡಿದರು.
ಜುಲೈ 1ರೊಳಗೆ ಇನ್ನೂ ಲಸಿಕೆ ಪಡೆಯದ ಐದು ವರ್ಷದೊಳಗಿನ ಮಕ್ಕಳನ್ನು ಸಮೀಪದ ಆರೋಗ್ಯ ಕೇಂದ್ರ ಅಥವಾ ಅಂಗನವಾಡಿ ಕೇಂದ್ರಕ್ಕೆ ಕರೆದೊಯ್ದು ಪೋಲಿಯೊ ಲಸಿಕೆ ಹಾಕಿಸಬೇಕು ಎಂದು ಪಿಸಿಎ ದತ್ತಿ ಟ್ರಸ್ಟ್ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಪ್ರತಿಯೊಂದು ಮಗು ಅಮೂಲ್ಯ. ಪ್ರತಿಯೊಂದು ಹನಿ ಲಸಿಕೆ ಮಹತ್ವದ್ದು. ಆರೋಗ್ಯವಂತ ಹಾಗೂ ಪೋಲಿಯೊ ಮುಕ್ತ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸೋಣ ಎಂದು ಟ್ರಸ್ಟ್ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.