ಬಳ್ಳಾರಿ : ಪಲ್ಸ್ ಪೋಲಿಯೋ ಬೂತ್ ದಿನದಂದು ಶೇ.97.3 ರಷ್ಟು ಪ್ರಗತಿ: ಡಿಹೆಚ್ಓ
ಬಳ್ಳಾರಿ, 29 ಜೂನ್ (ಹಿ.ಸ.): ಆ್ಯಂಕರ್ : ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಅಂಗವಾಗಿ ಜೂನ್ 28ರ ಪೋಲಿಯೋ ಭಾನುವಾರದಂದು ಬಳ್ಳಾರಿ ಜಿಲ್ಲೆಯಲ್ಲಿ ಮೊದಲ ದಿನವೇ ಶೇಕಡಾ 97.3 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ತಿಳಿಸಿದ್ದಾ
ಬಳ್ಳಾರಿ : ಪಲ್ಸ್ ಪೋಲಿಯೋ ಬೂತ್ ದಿನದಂದು ಶೇ.97.3 ರಷ್ಟು ಪ್ರಗತಿ: ಡಿಹೆಚ್ಓ


ಬಳ್ಳಾರಿ, 29 ಜೂನ್ (ಹಿ.ಸ.):

ಆ್ಯಂಕರ್ : ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಅಂಗವಾಗಿ ಜೂನ್ 28ರ ಪೋಲಿಯೋ ಭಾನುವಾರದಂದು ಬಳ್ಳಾರಿ ಜಿಲ್ಲೆಯಲ್ಲಿ ಮೊದಲ ದಿನವೇ ಶೇಕಡಾ 97.3 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ತಿಳಿಸಿದ್ದಾರೆ.

ಜಿಲ್ಲೆಯ ಬಳ್ಳಾರಿ, ಸಂಡೂರು, ಸಿರುಗುಪ್ಪ, ಕುರುಗೋಡು ಮತ್ತು ಕಂಪ್ಲಿ ತಾಲ್ಲೂಕುಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಬೂತ್ ದಿನದಂದು, 5 ವರ್ಷದೊಳಗಿನ ಒಟ್ಟು 1,99,934 ಮಕ್ಕಳ ಗುರಿಯಲ್ಲಿ 1,94,579 ಮಕ್ಕಳಿಗೆ ಯಶಸ್ವಿಯಾಗಿ ಲಸಿಕೆ ಹಾಕಲಾಗಿದೆ. ಉಳಿದಿರುವ 5,355 ಮಕ್ಕಳಿಗೆ ಜುಲೈ 1 ರವರೆಗೆ ನಡೆಯಲಿರುವ ಮನೆ-ಮನೆ ಲಸಿಕಾ ಕಾರ್ಯಕ್ರಮದಲ್ಲಿ ಪೋಲಿಯೋ ಹನಿಗಳನ್ನು ಹಾಕಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಾಲ್ಲೂಕುವಾರು ಲಸಿಕಾ ಪ್ರಗತಿ ವಿವರ:

ಬಳ್ಳಾರಿ: 95,879-ಲಸಿಕಾ ಗುರಿ, 91,990-ಸಾಧನೆ(ಮಕ್ಕಳ ಸಂಖ್ಯೆ), ಶೇ.95.9-ಪ್ರಗತಿ.

ಕಂಪ್ಲಿ: 14,627-ಲಸಿಕಾ ಗುರಿ, 14,921-ಸಾಧನೆ(ಮಕ್ಕಳ ಸಂಖ್ಯೆ), ಶೇ.102-ಪ್ರಗತಿ.

ಕುರುಗೋಡು: 17,241-ಲಸಿಕಾ ಗುರಿ, 17,062-ಸಾಧನೆ(ಮಕ್ಕಳ ಸಂಖ್ಯೆ), ಶೇ.99-ಪ್ರಗತಿ.

ಸಂಡೂರು: 35,818-ಲಸಿಕಾ ಗುರಿ, 34,993-ಸಾಧನೆ(ಮಕ್ಕಳ ಸಂಖ್ಯೆ), ಶೇ.98.8-ಪ್ರಗತಿ.

ಸಿರುಗುಪ್ಪ: 36,369-ಲಸಿಕಾ ಗುರಿ, 35,613-ಸಾಧನೆ(ಮಕ್ಕಳ ಸಂಖ್ಯೆ), ಶೇ.97.9-ಪ್ರಗತಿ.

ಒಟ್ಟು: 1,99,934-ಲಸಿಕಾ ಗುರಿ, 1,94,579-ಸಾಧನೆ(ಮಕ್ಕಳ ಸಂಖ್ಯೆ), ಶೇ.97.3-ಪ್ರಗತಿ.

ಕಂಪ್ಲಿಯಲ್ಲಿ ಗುರಿ ಮೀರಿದ ಸಾಧನೆ:

ವಿಶೇಷವೆಂದರೆ, ಜಿಲ್ಲೆಯ ಕಂಪ್ಲಿ ತಾಲ್ಲೂಕಿನಲ್ಲಿ ನಿಗದಿಪಡಿಸಿದ್ದ ಗುರಿಗಿಂತಲೂ ಹೆಚ್ಚು ಅಂದರೆ ಶೇ.102 ರಷ್ಟು ಮಕ್ಕಳಿಗೆ ಲಸಿಕೆ ನೀಡುವ ಮೂಲಕ ದಾಖಲೆಯ ಸಾಧನೆ ಮಾಡಲಾಗಿದೆ. ಕುರುಗೋಡು ಹಾಗೂ ಸಂಡೂರು ತಾಲ್ಲೂಕುಗಳು ಸಹ ಕ್ರಮವಾಗಿ ಶೇ.99 ಹಾಗೂ ಶೇ. 98.8 ರಷ್ಟು ಪ್ರಗತಿ ಸಾಧಿಸಿ ಮುಂಚೂಣಿಯಲ್ಲಿವೆ.

ವ್ಯಾಪಕ ಸಿದ್ಧತೆ ಮತ್ತು ತಂಡಗಳ ಕಾರ್ಯವೈಖರಿ:

ಜಿಲ್ಲೆಯಾದ್ಯಂತ ಯಾವುದೇ ಮಗು ಲಸಿಕೆಯಿಂದ ವಂಚಿತವಾಗಬಾರದು ಎಂಬ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಜಿಲ್ಲೆಯಲ್ಲಿ 335 ಕ್ಲಿಷ್ಟಕರ ಪ್ರದೇಶಗಳನ್ನು ಗುರುತಿಸಿ, ಅಲ್ಲಿ ಲಸಿಕೆ ಹಾಕಲು 236 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಒಟ್ಟು 977 ಬೂತ್ಗಳು ಹಾಗೂ 615 ಮನೆ ಭೇಟಿ ತಂಡಗಳು ಕಾರ್ಯನಿರ್ವಹಿಸಿದವು.

ಸಂತೆ, ಮಾರುಕಟ್ಟೆ, ಬಸ್ ನಿಲ್ದಾಣಗಳಂತಹ ಜನನಿಬಿಡ ಪ್ರದೇಶಗಳಿಗಾಗಿ 50 ತಂಡಗಳನ್ನು ಹಾಗೂ ಇಟ್ಟಿಗೆ ಭಟ್ಟಿ, ಕಟ್ಟಡ ಕಾಮಗಾರಿ ಪ್ರದೇಶ, ಕಬ್ಬು ಕಡಿಯುವ ಸ್ಥಳ ಮತ್ತು ಕುರಿಹಟ್ಟಿಗಳಂತಹ ವಲಸೆ ಕಾರ್ಮಿಕರ ಪ್ರದೇಶಗಳಿಗಾಗಿ 15 ಸಂಚಾರಿ (ಮೊಬೈಲ್) ತಂಡಗಳನ್ನು ನಿಯೋಜಿಸಲಾಗಿತ್ತು.

ಈ ಬೃಹತ್ ಅಭಿಯಾನದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ನಸಿರ್ಂಗ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಕರು ವ್ಯಾಕ್ಸಿನೇಟರ್ಗಳಾಗಿ ಸಕ್ರಿಯವಾಗಿ ಭಾಗವಹಿಸಿದ್ದರು. ಇವರ ಕಾರ್ಯದ ಉಸ್ತುವಾರಿಗಾಗಿ 188 ಮೇಲ್ವಿಚಾರಕರು ಹಾಗೂ ಜಿಲ್ಲಾ ಮಟ್ಟದ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ನೋಡಲ್ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ.

ಶಾಸಕರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮಾರ್ಗದರ್ಶನದಲ್ಲಿ, ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಈ ಮೈಲಿಗಲ್ಲು ತಲುಪಲು ಸಾಧ್ಯವಾಗಿದೆ. ಈ ಯಶಸ್ಸಿಗೆ ಶ್ರಮಿಸಿದ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿ ಹಾಗೂ ಸ್ವಯಂಸೇವಕರಿಗೆ ಜಿಲ್ಲಾ ಆಡಳಿತದ ಪರವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ಬಾಬು ಅವರು ಅಭಿನಂದನೆ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande