
ಬಳ್ಳಾರಿ, 29 ಜೂನ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಹಾಗೂ ಕುರುಗೋಡು ತಾಲ್ಲೂಕಿನ ರೈತರು ಪ್ರಸಕ್ತ ಸಾಲಿಗೆ ‘ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ'ಯಡಿ ಕೃಷಿ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಗರ್ಜಪ್ಪ ಅವರು ತಿಳಿಸಿದ್ದಾರೆ.
ನೈಸರ್ಗಿಕ ವಿಕೋಪಗಳಿಂದಾಗಿ ಬೆಳೆ ಹಾನಿಯಾದರೆ, ಈ ವಿಮಾ ಯೋಜನೆಯು ರೈತರಿಗೆ ಭಾರಿ ಅನುಕೂಲ ಹಾಗೂ ಆರ್ಥಿಕ ಭದ್ರತೆ ನೀಡಲಿದೆ.
ಬೆಳೆಗಳು ಮತ್ತು ನಿಗದಿಪಡಿಸಲಾದ ಪ್ರೀಮಿಯಂ ವಿವರ (ಪ್ರತಿ ಎಕರೆಗೆ) :
ಜುಲೈ 31 ರೊಳಗಾಗಿ ನೋಂದಾಯಿಸಬೇಕಾದ ಬೆಳೆಗಳು :
ಸೂರ್ಯಕಾಂತಿ: ಮಳೆಯಾಶ್ರಿತ – 390 ರೂ., ನೀರಾವರಿ – 469 ರೂ.
ಹತ್ತಿ: ಮಳೆಯಾಶ್ರಿತ – 1208 ರೂ., ನೀರಾವರಿ – 1748 ರೂ.
ಮುಸುಕಿನ ಜೋಳ: ಮಳೆಯಾಶ್ರಿತ – 546 ರೂ. ನೀರಾವರಿ – 617 ರೂ.
ಜೋಳ: ಮಳೆಯಾಶ್ರಿತ – 359 ರೂ., ನೀರಾವರಿ – 426 ರೂ.
ಆಗಸ್ಟ್ 14 ರೊಳಗಾಗಿ ನೋಂದಾಯಿಸಬೇಕಾದ ಬೆಳೆಗಳು :
ನೀರಾವರಿ ಭತ್ತ: 879 ರೂ.
ಮಳೆಯಾಶ್ರಿತ ಬೆಳೆಗಳು: ಸಜ್ಜೆ (282 ರೂ.), ನವಣೆ (261 ರೂ.), ತೊಗರಿ (466 ರೂ.), ಹುರುಳಿ (380 ರೂ.) ಮತ್ತು ನೆಲಗಡಲೆ/ಶೇಂಗಾ (529 ರೂ.).
ನೀರಾವರಿ ಬೆಳೆಗಳು: ತೊಗರಿ (488 ರೂ.) ಮತ್ತು ಸಜ್ಜೆ (350 ರೂ.).
ಮೇಲೆ ತಿಳಿಸಲಾದ ಬೆಳೆಗಳ ವಿಮೆ ನೋಂದಣಿಯನ್ನು ಆಯಾ ಹೋಬಳಿ ಹಾಗೂ ಗ್ರಾಮ ಪಂಚಾಯಿತಿಗಳಿಗೆ ನಿಗದಿಪಡಿಸಿದ ನಿಗದಿತ ಘಟಕಗಳಲ್ಲಿ ಮಾಡಲಾಗುತ್ತದೆ. ರೈತರು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ, ಗ್ರಾಮ ಒನ್ ಕೇಂದ್ರ ಅಥವಾ ತಾವು ವ್ಯವಹಾರ ನಡೆಸುವ ಬ್ಯಾಂಕುಗಳನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಬಳ್ಳಾರಿ ಇವರನ್ನು ಸಂಪರ್ಕಿಸಲು ಕೋರಲಾಗಿದೆ. ಅರ್ಹ ರೈತರು ಕೊನೆಯ ದಿನಾಂಕದ ಸದುಪಯೋಗ ಪಡೆದುಕೊಂಡು ವಿಮೆಗೆ ನೋಂದಾಯಿಸಿಕೊಳ್ಳಬೇಕು ಎಂದು ಅವರು ಕೋರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್