
ಕೋಲಾರ,ಜೂನ್ ೨೯ (ಹಿ.ಸ) :
ಆ್ಯಂಕರ್ : ತಾಲೂಕಿನ ಕ್ಯಾಲನೂರು ಗ್ರಾಮದ ಹಿರಿಯ ವಕೀಲ ಎಸ್.ಮಧುಕರ್ ಅವರನ್ನು ಕೇಂದ್ರ ಸರ್ಕಾರದ ವಕೀಲರನ್ನಾಗಿ ಕೇಂದ್ರ ಕಾನೂನು ಸಚಿವಾಲಯ ನೇಮಕಗೊಳಿಸಿ ಆದೇಶಿಸಿದೆ.
ಸುಮಾರು ೧೬ ವರ್ಷದಿಂದ ಬೆಂಗಳೂರಿನ ಹೈಕೋರ್ಟ್ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಧುಕರ್ ಪತ್ನಿ ಹಂಸ ಕೂಡ ನ್ಯಾಯವಾದಿಯಾಗಿದ್ದಾರೆ. ಮಧುಕರ್ ಅವರು ಡಾ.ಕೆ.ಎಸ್.ಶಂಕರ್ ರಾವ್ ಮತ್ತು ವರಲಕ್ಷ್ಮೀ ದಂಪತಿ ಪುತ್ರ ಆಗಿದ್ದಾರೆ. ಉತ್ತಮವಾಗಿ ವಾದ ಮಂಡನೆ ಮಾಡುವ ಮೂಲಕ ಕೇಂದ್ರ ಸರ್ಕಾರದ ಎಲ್ಲ ಪ್ರಕರಣಗಳನ್ನು ಗೆಲ್ಲುವುದರೊಂದಿಗೆ ಕಕ್ಷೀದಾರರಿಗೆ ನ್ಯಾಯ ಒದಗಿಸವುದಾಗಿ ವಕೀಲ ಮಧುಕರ್ ಪ್ರತಿಕ್ರಿಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್