ಬಿಹಾರದ ಮಹಿಳೆ ಕಾಣೆ ; ಪತ್ತೆಗೆ ಮನವಿ
ಸಂಡೂರು, 29 ಜೂನ್ (ಹಿ.ಸ.) : ಆ್ಯಂಕರ್ : ದೋಣಿಮಲೈ ಟೌನ್ ಶಿಪ್ ನಾರ್ಥ್ ಬ್ಲಾಕ್ ನಲ್ಲಿ ವಾಸವಾಗಿದ್ದ ಬಿಹಾರ್ ರಾಜ್ಯದ ನಲಂದ ಜಿಲ್ಲೆಯ ರೈತಾಲ್ ಗ್ರಾಮದ ನಿವಾಸಿಯಾದ ರಾಣಿ ಕುಮಾರಿ (21) ಜೂನ್ 24 ರಂದು ಮನೆಯಿಂದ ಹೋರ ಹೋದವಳು ಮನೆಗೆ ಹಿಂದುರುಗಿಲ್ಲ. ಈ ಕುರಿತು ಸಂಡೂರು ಪೆÇಲೀಸ್ ಠಾಣೆಯಲ್ಲಿ ಪ್ರಕರ
Bihar woman missing: Appeal to find her


ಸಂಡೂರು, 29 ಜೂನ್ (ಹಿ.ಸ.) :

ಆ್ಯಂಕರ್ : ದೋಣಿಮಲೈ ಟೌನ್ ಶಿಪ್ ನಾರ್ಥ್ ಬ್ಲಾಕ್ ನಲ್ಲಿ ವಾಸವಾಗಿದ್ದ ಬಿಹಾರ್ ರಾಜ್ಯದ ನಲಂದ ಜಿಲ್ಲೆಯ ರೈತಾಲ್ ಗ್ರಾಮದ ನಿವಾಸಿಯಾದ ರಾಣಿ ಕುಮಾರಿ (21) ಜೂನ್ 24 ರಂದು ಮನೆಯಿಂದ ಹೋರ ಹೋದವಳು ಮನೆಗೆ ಹಿಂದುರುಗಿಲ್ಲ.

ಈ ಕುರಿತು ಸಂಡೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ಮನವಿ ಮಾಡಿದ್ದಾರೆ.

ಕಾಣೆಯಾದ ಮಹಿಳೆಯ ಚಹರೆ ಗುರುತು:

ಎತ್ತರ 5 ಅಡಿ, ಸಾಧಾರಣ ಮೈಕಟ್ಟು, ಕೋಲು ಮುಖ, ಬೆಳ್ಳನೆ ಮೈಬಣ್ಣ, ತಲೆಯಲ್ಲಿ ಸುಮಾರು ಮೂರು ಇಂಚು ಕಪ್ಪು ಕೂದಲು ಹೊಂದಿದ್ದು, ಮನೆಯಿಂದ ಹೊರಡುವಾಗ ಬಿಳಿ ಬಣ್ಣದ ಹೂವಿನ ಡಿಸೈನ್ ಇರುವ ಕೆಂಪು ಬಣ್ಣದ ಟಾಪ್ ಮತ್ತು ಪೈಜಾಮ್ ಧರಿಸಿದ್ದಾಳೆ. ಹಿಂದಿ ಭಾಷೆ ಮಾತನಾಡುತ್ತಾಳೆ.

ಕಾಣೆಯಾದ ಮಹಿಳೆಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ, ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಕರೆಮಾಡಿ ಮಾಹಿತಿ ನೀಡಬಹುದಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande