‘ಮನದ ಮಾತು’ ರಾಷ್ಟ್ರ ನಿರ್ಮಾಣಕ್ಕೆ ಜನಭಾಗಿತ್ವದ ಪ್ರೇರಕ ವೇದಿಕೆ : ನಿತಿನ್ ನವೀನ್
ನವದೆಹಲಿ, 28 ಜೂನ್ (ಹಿ.ಸ.) : ಆ್ಯಂಕರ್ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಭಾನುವಾರ ನವದೆಹಲಿಯ ತಮ್ಮ ನಿವಾಸದಲ್ಲಿ ಬಿಜೆಪಿ ಕೇಂದ್ರ ಕಚೇರಿ ಹಾಗೂ ದೆಹಲಿ ರಾಜ್ಯ ಘಟಕದ ಸಿಬ್ಬಂದಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ‘ಮನದ ಮಾತು’ ಕಾರ್ಯಕ್ರಮದ 135ನೇ ಸಂಚಿಕೆಯನ್ನು ಆಲಿಸಿದರು.
ಮನ್ ಕೀ ಬಾತ ಆಲಿಸಿದ ನಿತಿನ್ ನವೀನ್


ನವದೆಹಲಿ, 28 ಜೂನ್ (ಹಿ.ಸ.) :

ಆ್ಯಂಕರ್ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಭಾನುವಾರ ನವದೆಹಲಿಯ ತಮ್ಮ ನಿವಾಸದಲ್ಲಿ ಬಿಜೆಪಿ ಕೇಂದ್ರ ಕಚೇರಿ ಹಾಗೂ ದೆಹಲಿ ರಾಜ್ಯ ಘಟಕದ ಸಿಬ್ಬಂದಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ‘ಮನದ ಮಾತು’ ಕಾರ್ಯಕ್ರಮದ 135ನೇ ಸಂಚಿಕೆಯನ್ನು ಆಲಿಸಿದರು.

ಈ ಕುರಿತು ಅವರು ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಪ್ರತಿಕ್ರಿಯಿಸಿ, ‘ಮನದ ಮಾತು’ ಕಾರ್ಯಕ್ರಮವು ದೇಶದ ಜನರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮೀಯ ಸಂವಾದದ ಪರಿಣಾಮಕಾರಿ ವೇದಿಕೆಯಾಗಿದ್ದು, ಸಮಾಜದಲ್ಲಿನ ಪ್ರೇರಣಾದಾಯಕ ಪ್ರಯತ್ನಗಳಿಗೆ ಹೊಸ ಗುರುತನ್ನು ನೀಡುವುದರ ಜೊತೆಗೆ ಪ್ರತಿಯೊಬ್ಬ ನಾಗರಿಕನನ್ನೂ ರಾಷ್ಟ್ರಹಿತಕ್ಕಾಗಿ ಸಕಾರಾತ್ಮಕವಾಗಿ ಕೊಡುಗೆ ನೀಡಲು ನಿರಂತರವಾಗಿ ಪ್ರೇರೇಪಿಸುತ್ತಿದೆ ಎಂದು ಹೇಳಿದರು.

ಈ ಸಂಚಿಕೆಯಲ್ಲಿ ಪ್ರಧಾನಿ ಅವರು ಆತ್ಮನಿರ್ಭರ ಭಾರತದ ಹೆಚ್ಚುತ್ತಿರುವ ಸಾಮರ್ಥ್ಯ, ಸ್ವದೇಶಿ ರಕ್ಷಣಾ ಹಾಗೂ ವಿಮಾನಯಾನ ಕ್ಷೇತ್ರದ ಸಾಧನೆಗಳು, ಯೋಗದ ಜಾಗತಿಕ ಪ್ರತಿಷ್ಠೆ, ಪರಿಸರ ಸಂರಕ್ಷಣೆ, ಭಾರತೀಯ ಜ್ಞಾನ ಪರಂಪರೆ ಹಾಗೂ ‘ವೋಕಲ್ ಫಾರ್ ಲೋಕಲ್’ ಅಭಿಯಾನದಂತಹ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಜನಭಾಗಿತ್ವದ ಮಹತ್ವವನ್ನು ಒತ್ತಿಹೇಳಿದ್ದಾರೆ ಎಂದು ನಿತಿನ್ ನವೀನ್ ತಿಳಿಸಿದರು.

ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಸಕಾರಾತ್ಮಕ ಪ್ರಯತ್ನಗಳನ್ನು ದೇಶದ ಮುಂದಿಡುವ ಮೂಲಕ ಜನರಲ್ಲಿ ಆತ್ಮವಿಶ್ವಾಸ, ಸೇವಾಭಾವ ಮತ್ತು ರಾಷ್ಟ್ರಪ್ರೇಮವನ್ನು ಬೆಳೆಸುವಲ್ಲಿ ‘ಮನದ ಮಾತು’ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande