ಕೊಪ್ಪಳ : ನಾಳೆಯಿಂದ ಜುಲೈ 1ರವರೆಗೆ ಪಲ್ಸ್ ಪೋಲಿಯೋ
ಕೊಪ್ಪಳ, 27 ಜೂನ್ (ಹಿ.ಸ.) : ಆ್ಯಂಕರ್ : ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿದೆ ಜಿಲ್ಲೆಯಾದ್ಯಂತ ನಾಳೆಯಿಂದ ಜುಲೈ 1ರವರೆಗೆ ಒಂದನೇ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಬಿಒಪಿವಿ (ಪೋಲಿಯೋ ಲಸಿಕೆ) ನೀ
ಕೊಪ್ಪಳ : ನಾಳೆಯಿಂದ ಜುಲೈ 1ರವರೆಗೆ ಪಲ್ಸ್ ಪೋಲಿಯೋ


ಕೊಪ್ಪಳ, 27 ಜೂನ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿದೆ ಜಿಲ್ಲೆಯಾದ್ಯಂತ ನಾಳೆಯಿಂದ ಜುಲೈ 1ರವರೆಗೆ ಒಂದನೇ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಬಿಒಪಿವಿ (ಪೋಲಿಯೋ ಲಸಿಕೆ) ನೀಡುವುದರ ಮೂಲಕ ನಡೆಸಲಾಗುತ್ತಿದೆ.

ಈ ಕಾರ್ಯಕ್ರಮದ ಮೊದಲನೇ ದಿನ 877 ಪೋಲಿಯೋ ಬೂತ್ಗಳಲ್ಲಿ ಲಸಿಕೆ ನೀಡಲಾಗುವುದು. ಅಲ್ಲದೆ ಜಿಲ್ಲೆಯ ವಿವಿಧ ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳಲ್ಲಿ ಮತ್ತು ಸರ್ಕಲಗಳಲ್ಲಿ ಒಟ್ಟು 59 ಟ್ರಾನ್ಸಿಟ್ ಪೋಲಿಯೋ ಬೂತ್ ಗಳನ್ನು ಮಾಡಲಾಗಿದ್ದು, ಪ್ರಯಾಣ ಮಾಡುವ 0 ರಿಂದ 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲಾಗುವುದು ಮತ್ತು ಜಿಲ್ಲೆಯಾದ್ಯಂತ 19 ಮೊಬೈಲ್ ತಂಡಗಳ ಮೂಲಕ ಈಗಾಗಲೆ ಗುರುತಿಸಿರುವ ಹೈರಿಸ್ಕ್ ಏರಿಯಾಗಳಲ್ಲಿ ಇರುವ ಮಕ್ಕಳಿಗೆ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಜಿಲ್ಲೆಯ ಸಾರ್ವಜನಿಕರು ತಮ್ಮ 0 ರಿಂದ 5 ವರ್ಷದೊಳಗಿನ ಮಕ್ಕಳಿಗೆ ಈ ಹಿಂದೆ ಎಷ್ಟೆ ಬಾರಿ ಪೋಲಿಯೋ ಲಸಿಕೆ ಹಾಕಿಸಿದ್ದರೂ ಸಹ ಈ ದಿನದಂದು (ಜೂ. 28 ಪೋಲಿಯೋ ಭಾನುವಾರ) ತಮ್ಮ ಮನೆಯ ಹತ್ತಿರವೇ ಇರುವ ಪೋಲಿಯೋ ಬೂತ್ಗೆ ಭೇಟಿ ನೀಡಿ ಮತ್ತೊಮ್ಮೆ ಪೋಲಿಯೋ ಲಸಿಕೆ ಹಾಕಿಸುವಂತೆ ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande