
ಕೊಪ್ಪಳ, 26 ಜೂನ್ (ಹಿ.ಸ.) :
ಆ್ಯಂಕರ್ : ತೆಲಂಗಾಣ, ಆಂಧ್ರಪ್ರದೇಶ ಮುಖ್ಯಮಂತ್ರಿ ಜತೆಯಲ್ಲಿ ತುಂಗಭದ್ರಾ ಜಲಾಶಯದ ಸ್ಪಿಲ್ ವೇ ಗೇಟ್ ಲೋಕಾರ್ಪಣೆ ಮಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೊಪ್ಪಳ ಕಾರ್ಖಾನೆ ಧೂಳು ಬಾಧನೆಯ ಒಂದೆರೆಡು ಗ್ರಾಮಗಳಿಗೆ ಭೇಟಿ ಕೊಟ್ಟು ಅಲ್ಲಿನ ಜನರ ಸಮಸ್ಯೆ ಕೇಳುತ್ತಾರೆ ಎನ್ನುವ ನಂಬಿಕೆ ಜಂಟಿ ಕ್ರಿಯಾ ವೇದಿಕೆ ಇಟ್ಟುಕೊಂಡಿತ್ತು. ಮುನಿರಾಬಾದ್ ಸಮೀಪದ ಹಿರೇಬಗನಾಳ ಗ್ರಾಮವೊಂದಕ್ಕೆ ಭೇಟಿ ಕೊಟ್ಟಿದ್ದರೆ ಸಾಕಾಗಿತ್ತು. ಅಲ್ಲದೆ ಜಲಾಶಯದ ಮಾಲಿನ್ಯದ ಕುರಿತು, ಕಾರ್ಖಾನೆಗಳ ಮಿತಿ ಇಲ್ಲದ ನೀರು ಬಳಕೆಯ ಮೇಲೆ ಏನೊಂದೂ ಕ್ರಮ ತೆಗೆದುಕೊಳ್ಳುವ ಭರವಸೆ ನೀಡದ ಸರಕಾರ ಕೇವಲ ರಾಜಕೀಯ ಪ್ರಚಾರ ಮತ್ತು ಶಿಷ್ಟಾಚಾರಕ್ಕೆ ಸೀಮಿತವಾದ ಕಾರ್ಯಕ್ರಮ ಮಾಡಿತು ಎಂದು ಕ್ರಿಯಾ ಸಮಿತಿ ಅಸಮಾಧಾನ ಹೊರಹಾಗಿದೆ.
ತುಃಗಭದ್ರಾ ಅಚ್ಚುಕಟ್ಟು ಪ್ರದೇಶದ ಭೂಮಿಗೆ ಎರಡನೇ ಬೆಳೆಗೆ ನೀರು ಕೊಡುವ ಭರವಸೆ, ಕಾರ್ಖಾನೆಗಳಿಂದ ಮಾಲಿನ್ಯಗೊಂಡ ನದಿ, ಜಲಾಶಯ ನೀರು ಕುಡಿಯುವ ಜನರ ಸಮಸ್ಯೆ ಹಾಗೆ ಉಳಿದುಕೊಂಡಿತು ಎಂದು ಕ್ರಿಯಾ ಸಮಿತಿ ಕಳವಳ ವ್ಯಕ್ತಪಡಿಸಿದೆ.
ಕೊಪ್ಪಳ ತಾಲೂಕಿನ ಹಿನ್ನೀರಿನ ಭಾಗದ ಎಲ್ಲಾ ಗ್ರಾಮಗಳಿಗೆ ಏತ ನೀರಾವರಿ ಯೋಜನೆ ರೂಪಿಸಬಹುದಿತ್ತು ಎಂದು ಹೋರಾಟಗಾರರು ಅಸಂತೃಪ್ತಿ ವ್ಯಕ್ತಪಡಿಸಿದರು.
ಶುಕ್ರವಾರ ನಗರಸಭೆ ಆವರಣದಲ್ಲಿ 239 ದಿನಗಳಿಂದ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಸರ ಹಿತರಕ್ಷಣಾ ವೇದಿಕೆಯ ಜಂಟಿ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಯಶಸ್ವಿಯಾಯಿತು.
ಕೊಪ್ಪಳ-ಭಾಗ್ಯನಗರದ ಮೇಲೆ ಮಾಲಿನ್ಯ ಉಂಟುಮಾಡಲು 54 ಸಾವಿರ ಕೋಟಿ ಬೃಹತ್ ಬಂಡವಾಳ ಹೂಡಲು ಬರುತ್ತಿರುವ ಬಲ್ಡೋಟ ಬಿಎಸ್ಪಿಎಲ್ ವಿರೋಧಿಸಿ, ಬಲ್ಡೋಟ ಎ.ಐ.ಎಸ್.ಎಲ್ ಅಕ್ರಮವಾಗಿ ವಶಪಡಿಸಿಕೊಂಡ ನಗರ ಹತ್ತಿರದ 44.35ಎಕರೆ ಬಸಾಪುರ ಕೆರೆಯನ್ನು ಹೈಕೋರ್ಟ್ ಆದೇಶದಂತೆ ಜನ, ಜಾನುವಾರು ನೀರು ಕುಡಿಯಲು ಮುಕ್ತಗೊಳಿಸಿ, 2011ರಿಂದ ಬಲ್ಡೋಟ ಎಂ.ಎಸ್.ಪಿ.ಎಲ್ ಪೆಲ್ಲೆಟ್ ಘಟಕ ಬಂದ್ ಮಾಡಿ ಕೊಪ್ಪಳ ನಗರದ ಜನರ ಆರೋಗ್ಯ ಕಾಪಾಡಬೇಕೆಂದು ಅನಿರ್ದಿಷ್ಟಾವಧಿ ಧರಣಿ ನಡೆಯುತ್ತಿದೆ. ಶೀಘ್ರ ಸರ್ವಪಕ್ಷ, ಕ್ರಿಯಾ ಸಮಿತಿ ಮುಖಂಡರ ನಿಯೋಗ ಮುಖ್ಯಮಂತ್ರಿ ಭೇಟಿ ಮಾಡಲು ಅವಕಾಶ ಮಾಡದಿದ್ದರೆ ಹೋರಾಟದ ರೂಪುರೇಷೆ ಬದಲಾಯಿಸಿ, ಬೀದಿಗಿಳಿದು ಆಂದೋಲನ ಮಾಡಲಾಗುವುದು ಎಂದು ಸಮಿತಿ ತಿಳಿಸಿದೆ.
ಧರಣಿಯಲ್ಲಿ ಪ್ರಕಾಶಕ ಡಿ.ಎಂ.ಬಡಿಗೇರ, ಮಹಾಂತೇಶ ಕೊತಬಾಳ, ರಾಜಶೇಖರ ಏಳುಬಾವಿ, ಮಹಾದೇವಪ್ಪ ಮಾವಿನಮಡು, ಮಖ್ಬುಲ್ ರಾಯಚೂರು, ಶಿವಪ್ಪ ಜಲ್ಲಿ, ಕಾಶಪ್ಪ ಚಲುವಾದಿ, ಬಸವರಾಜ ಅವರಾದಿ, ಅಮರೇಶ ಎಂ. ಇತರರು ಪಾಲ್ಗೊಂಡರು
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್