ಮೊಹರಂ ತ್ಯಾಗ, ಸತ್ಯ ಮತ್ತು ಮಾನವೀಯತೆಯ ಸಂಕೇತ ; ಮುಸ್ಲಿಂ ರಿಗೆ ಶುಭಾಶಯಗಳ ಮಹಾಪೂರ
ವಿಜಯಪುರ, 26 ಜೂನ್ (ಹಿ.ಸ.) : ಆಂಕರ್ : ತ್ಯಾಗ, ಸತ್ಯ, ಶಾಂತಿ ಮತ್ತು ಮಾನವೀಯತೆಯ ಮಹತ್ವವನ್ನು ಸಾರುವ ಪವಿತ್ರ ಮೊಹರಂ ಹಬ್ಬದ ಅಂಗವಾಗಿ ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಶುಭಾಶಯಗಳನ್ನು ಶಾಸಕ ಶಿವಾನಂದ ಪಾಟೀಲ್ ಕೋರಿದರು. ಮೊಹರಂ ಕೇವಲ ಧಾರ್ಮಿಕ ಆಚರಣೆಯಲ್ಲ, ಅದು ಅನ್ಯಾಯದ ವಿರುದ್ಧದ ಹೋರಾಟ, ಸತ
ಮೊಹರಂ


ವಿಜಯಪುರ, 26 ಜೂನ್ (ಹಿ.ಸ.) :

ಆಂಕರ್ : ತ್ಯಾಗ, ಸತ್ಯ, ಶಾಂತಿ ಮತ್ತು ಮಾನವೀಯತೆಯ ಮಹತ್ವವನ್ನು ಸಾರುವ ಪವಿತ್ರ ಮೊಹರಂ ಹಬ್ಬದ ಅಂಗವಾಗಿ ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಶುಭಾಶಯಗಳನ್ನು ಶಾಸಕ ಶಿವಾನಂದ ಪಾಟೀಲ್ ಕೋರಿದರು.

ಮೊಹರಂ ಕೇವಲ ಧಾರ್ಮಿಕ ಆಚರಣೆಯಲ್ಲ, ಅದು ಅನ್ಯಾಯದ ವಿರುದ್ಧದ ಹೋರಾಟ, ಸತ್ಯದ ಪರವಾದ ನಿಲುವು ಹಾಗೂ ಮಾನವೀಯ ಮೌಲ್ಯಗಳ ಪ್ರತೀಕವಾಗಿದೆ. ಧರ್ಮ, ನ್ಯಾಯ ಮತ್ತು ಶಾಂತಿಯ ರಕ್ಷಣೆಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ಹಜರತ್ ಇಮಾಮ್ ಹಸನ್ ಮತ್ತು ಇಮಾಮ್ ಹುಸೇನ್ ಅವರ ತ್ಯಾಗದ ಸಂದೇಶವು ಇಂದಿಗೂ ಜಗತ್ತಿಗೆ ಮಾರ್ಗದರ್ಶಿಯಾಗಿದೆ.

ಸಮಾಜದಲ್ಲಿ ಶಾಂತಿ, ಸಹಬಾಳ್ವೆ, ಸಹೋದರತ್ವ ಮತ್ತು ಸೌಹಾರ್ದತೆಯ ಭಾವನೆಗಳನ್ನು ಮತ್ತಷ್ಟು ಬಲಪಡಿಸುವ ಶಕ್ತಿ ಮೊಹರಂ ಹಬ್ಬಕ್ಕಿದೆ. ಧರ್ಮದ ಹೆಸರಿನಲ್ಲಿ ವಿಭಜನೆಗಿಂತ ಮಾನವೀಯತೆಯ ಮೌಲ್ಯಗಳಿಗೆ ಆದ್ಯತೆ ನೀಡುವ ಸಂದೇಶವನ್ನು ಈ ಪವಿತ್ರ ದಿನ ಸಾರುತ್ತದೆ.

ಎಲ್ಲಾ ಸಮುದಾಯದ ಜನರು ಪರಸ್ಪರ ಗೌರವ, ಪ್ರೀತಿ ಮತ್ತು ಸಾಮರಸ್ಯದಿಂದ ಬದುಕುವ ಮೂಲಕ ಶಾಂತಿಯುತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂಬ ಆಶಯ ಮೊಹರಂ ಹಬ್ಬದ ಸಂದರ್ಭದಲ್ಲಿ ವ್ಯಕ್ತವಾಗಿದೆ.

ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿರುವ ಈ ಪವಿತ್ರ ದಿನವು ನಾಡಿನ ಜನರಲ್ಲಿ ಶಾಂತಿ, ನೆಮ್ಮದಿ ಮತ್ತು ಭಾವೈಕ್ಯತೆಯನ್ನು ತರಲಿ ಎಂದು ಶುಭ ಹಾರೈಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande