
ಹುಬ್ಬಳ್ಳಿ, 26 ಜೂನ್ (ಹಿ.ಸ.) :
ಆ್ಯಂಕರ್ : ಮೊಹರಂ ಹಬ್ಬದ ಅಂಗವಾಗಿ ಹುಬ್ಬಳ್ಳಿಯ ದೇಸಾಯಿ ಓಣಿಯಲ್ಲಿರುವ ಖಾದರಿಯ ಸುನ್ನಿ ಮಸೀದ್ ಜಮಾತ್ ವತಿಯಿಂದ ಶುಕ್ರವಾರ ಸಿಹಿ ತಂಪು ಪಾನೀಯ (ಸುರಕುಂಬ) ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಸಮಾಜಮುಖಿ ಕಾರ್ಯಕರ್ತ ಪ್ರಕಾಶ್ ಬೆಂಡಿಗೇರಿ ಉದ್ಘಾಟಿಸಿ ಸಾರ್ವಜನಿಕರಿಗೆ ಸಿಹಿ ತಂಪು ಪಾನೀಯವನ್ನು ವಿತರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೊಹರಂ ಹಬ್ಬವು ಶಾಂತಿ, ಸಹೋದರತ್ವ ಮತ್ತು ಸೌಹಾರ್ದತೆಯ ಸಂದೇಶ ಸಾರುವ ಹಬ್ಬವಾಗಿದ್ದು, ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಸೌಹಾರ್ದ ಮತ್ತು ಭಾವೈಕ್ಯತೆಯನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಸವರಾಜ್ ಚನ್ನೋಜಿ, ಅಬ್ದುಲ್ ಸತ್ತಾರ್, ಮಂಜುನಾಥ ನಾಯ್ಕರ್, ಜಮಾದಾರ್ ಸಲೀಂ ಮಿಸ್ತ್ರಿಕೋಟಿ, ಅಬ್ದುಲ್ ಗಫಾರ್ ಜಮಾದಾರ್, ಅಬ್ದುಲ್ ಸತ್ತಾರ್, ಮಸೀದಿಯ ಮುತುವಲ್ಲಿಗಳು ಹಾಗೂ ಜಮಾತಿನ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.