ಶತಾಯುಷಿ ತಿಪ್ಪಮ್ಮ ತಳದಳ್ಳಿ ನಿಧನ
ಇದ್ದಾರೆ
Centenarian Thippamma Taladalli passes away


ಹಗರಿಬೊಮ್ಮನಹಳ್ಳಿ, 26 ಜೂನ್ (ಹಿ.ಸ.) :

ಆ್ಯಂಕರ್ : ತಾಲೂಕಿನ ಕಿತ್ನೂರು ಗ್ರಾಮದ ಹಾಲುಮತ ಕುರುಬ ಸಮಾಜದ ಶತಾಯುಷಿ ತಿಪ್ಪಮ್ಮ ತಳದಳ್ಳಿ (100) ಇವರು ವಯೋಸಜವಾಗಿ ಅನಾರೋಗ್ಯದಿಂದ ಕೊಪ್ಪಳದ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಶುಕ್ರವಾರ ಮಧ್ಯಾನ್ಹ ನಿಧನರಾಗಿದ್ದಾರೆ.

ಮೃತರಿಗೆ ಮೂರು ಜನ ಪುತ್ರರು,ಇಬ್ಬರು ಪುತ್ರಿಯರು ಇದ್ದಾರೆ.

ಮೃತರ ಅಂತ್ಯಕ್ರಿಯೆ ಕಿತ್ನೂರು ಗ್ರಾಮದಲ್ಲಿ ಜೂ.27 ರಂದು ಶನಿವಾರ ಬೆಳ್ಳಿಗ್ಗೆ 10.35ಕ್ಕೆ ನೆರವೇರಲಿದೆ.

ಮೃತ ತಿಪ್ಪಮ್ಮ ತಳದಳ್ಳಿ ಇವರು ತುಂಗಭದ್ರಾ ಡ್ಯಾಂ ನಿರ್ಮಾಣದ ಸಂದರ್ಭದಲ್ಲಿ ಕಿತ್ನೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸ್ಥಳಾಂತರ ಮಾಡುವ ಸಂದರ್ಭದಲ್ಲಿದ್ದ ಸಂದಿಗ್ಧ ಪರಿಸ್ಥಿತಿ ಹಾಗೂ ನೂರಾರು ಎಕರೆ ಫಲವತ್ತಾದ ಭೂಮಿ ಕಳೆದುಕೊಂಡಿದ್ದ ನಿರಾಶ್ರಿತರಿಗೆ ಸರಕಾರ ಕೊಟ್ಟ ಅತ್ಯಲ್ಪ ಪರಿಹಾರದ ಕುರಿತು ಸಮಗ್ರ ಮಾಹಿತಿಯನ್ನು ತಿಪ್ಪಮ್ಮ ತಳದಳ್ಳಿ ಕುಟುಂಬದವರ ಜತೆ ಹಂಚಿಕೊಳ್ಳುತ್ತಿದ್ದರು. ಸ್ಥಳಾಂತರಗೊಳ್ಳುವುದಕ್ಕೂ ಮುಂಚೆ ಹಳೆಯ ಊರುಗಳ ಜಾತ್ರೆ ಹಾಗೂ ಧಾರ್ಮಿಕ ಸಂಪ್ರದಾಯಗಳ ಬಗ್ಗೆ ಮಾಹಿತಿಯುಳ್ಳವರಾಗಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande