ಹಂಪಿ ವಿಶ್ವವಿದ್ಯಾಲಯದಲ್ಲಿ ಕೋಲಾರದ ಸಾಹಿತಿ ಎಸ್.ಸಿ.ಶೈಲಜಾ ಅಶ್ವಥ್ ರವರ ಕೃತಿ ಬಿಡುಗಡೆ
ಹಂಪಿ ವಿಶ್ವವಿದ್ಯಾಲಯದಲ್ಲಿ ಕೋಲಾರದ ಸಾಹಿತಿ ಎಸ್.ಸಿ.ಶೈಲಜಾ ಅಶ್ವಥ್ ರವರ ಕೃತಿ ಬಿಡುಗಡೆ
ಕೋಲಾರ ಜಿಲ್ಲೆಯ ಸಾಹಿತಿ ಎಸ್.ಸಿ.ಶೈಲಜಾ ರವರು ರಚಿಸಿರುವ ಕೃಷಿ ಕೂಲಿ ಕಾರ್ಮಿಕ ಮಹಿಳೆ ಪುಸ್ತಕವನ್ನು ಹಂಪಿ ವಿಶ್ವವಿದ್ಯಾಲಯದಲ್ಲಿ ಬಿಡುಗಡೆ ಮಾಡಲಾಯಿತು.


ಕೋಲಾರ ೨೬ ಜೂನ್(ಹಿ.ಸ) :

ಆ್ಯಂಕರ್ : ಸಾಮಾಜಿಕ, ಆರ್ಥಿಕ, ಶೋಷಿತ ಮಹಿಳೆಯರ ಬದುಕು, ಬವಣೆ, ಶ್ರಮ, ಹೋರಾಟ ಮತ್ತು ಅವರು ಎದುರಿಸುತ್ತಿರುವ ಸವಾಲುಗಳನ್ನು ದಾಖಲಿಸುವ ಉದ್ದೇಶದಿಂದ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಒನಕೆ ಓಬವ್ವೆ ಅಧ್ಯಯನ ಪೀಠ ಬದುಕಿನ ಬೆಂಕಿಯಲ್ಲಿ ಬೆಂದವರ ಚರಿತೆ ಶೀರ್ಷಿಕೆ ಅಡಿಯಲ್ಲಿ ಹನ್ನೊಂದು ಕೃತಿಗಳನ್ನು ಕೂಡಲ್ಗಿ ಶಾಸಕ ಡಾ.ಎಸ್.ಟಿ. ಶ್ರೀನಿವಾಸ್ ಬಿಡುಗಡೆಗೊಳಿಸಿದರು.

ಕೋಲಾರ ಜಿಲ್ಲೆಯ ಸಾಹಿತಿ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಯೋಜಕ ರಾಜ್ಯ ಸಂಯೋಜಕಿ ಎಸ್.ಸಿ.ಶೈಲಜಾ ಆಶ್ವಥ್ ರವರ ೨ನೇ ಕೃತಿಯಾದ ಕೃಷಿ ಕೂಲಿ ಕಾರ್ಮಿಕ ಮಹಿಳೆ ಎಂಬ ಪುಸ್ತಕವನ್ನು ಸಹ ಬಿಡುಗಡೆಯಾಯಿತು. ಸಾಹಿತ್ಯ ಕ್ಷೇತ್ರದಲ್ಲಿ ಹೋರಾಟಗಾರ್ತಿಯಾದ ಎಸ್.ಸಿ. ಶೈಲಜಾ ಅಶ್ವಥ್ ರವರಿಗೆ ಸಂದ ಗೌರವ ಕೋಲಾರ ಜಿಲ್ಲೆಗೆ ಸಲ್ಲುತ್ತದೆ.

ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ, ಕುಲಸಚಿವ ವಿರುಪಾಕ್ಷಿ ಪೂಜಾರಳ್ಳಿ, ವನಕೆ ಓಬವ್ವೆ ಅಧ್ಯಯನ ಪೀಠದ ಸಂಚಾಲಕರಾದ ಡಾ.ಎನ್. ಚಿನ್ನಸ್ವಾಮಿ ಸೊಸಲೆ, ಪ್ರಸಾರಂಗದ ನಿರ್ದೇಶಕ ಡಾ.ಪಿ. ಮಹದೇವಯ್ಯ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಯೋಜಕ ರಾಜ್ಯಾಧ್ಯಕ್ಷರಾದ ಡಾ. ಅಶ್ವಥ್ ಅಂತ್ಯಜ, ಉಪನ್ಯಾಸಕರಾದ ಆರ್.ಎ.ಪೃತ್ವಿಜ, ಆರ್.ಎ. ಸಂಕೇತ, ನೇತ್ರಾವತಿ, ಮಮತ, ದರ್ಶಿತ್, ಲಾಸ್ಯ, ಕೀರ್ತಿ ಮುಂತಾದವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande