ಹೊರಗುತ್ತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬಳ್ಳಾರಿ, 26 ಜೂನ್ (ಹಿ.ಸ.) : ಆ್ಯಂಕರ್ : 2026-27ನೇ ಸಾಲಿನಲ್ಲಿ ಬಿ.ಆರ್.ಸಿ ಪೂರ್ವವಲಯ ವ್ಯಾಪ್ತಿಯಲ್ಲಿ ಸಿಡಬ್ಲ್ಯೂಎಸ್ಎನ್ (ವಿಶೇಷ ಅಗತ್ಯವುಳ್ಳ) ಮಕ್ಕಳಿಗೆ ಫಿಸಿಯೋಥೆರಪಿ ಚಿಕಿತ್ಸೆ ನೀಡಲು ಹಾಗೂ ವೈದ್ಯರ ಸಹಾಯಕ್ಕಾಗಿ ಹೊರಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಹುದ್ದೆಗಳನ್ನು ಭರ್ತಿ ಮಾಡಲು
ಹೊರಗುತ್ತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನ


ಬಳ್ಳಾರಿ, 26 ಜೂನ್ (ಹಿ.ಸ.) :

ಆ್ಯಂಕರ್ : 2026-27ನೇ ಸಾಲಿನಲ್ಲಿ ಬಿ.ಆರ್.ಸಿ ಪೂರ್ವವಲಯ ವ್ಯಾಪ್ತಿಯಲ್ಲಿ ಸಿಡಬ್ಲ್ಯೂಎಸ್ಎನ್ (ವಿಶೇಷ ಅಗತ್ಯವುಳ್ಳ) ಮಕ್ಕಳಿಗೆ ಫಿಸಿಯೋಥೆರಪಿ ಚಿಕಿತ್ಸೆ ನೀಡಲು ಹಾಗೂ ವೈದ್ಯರ ಸಹಾಯಕ್ಕಾಗಿ ಹೊರಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಬಳ್ಳಾರಿ ಪೂರ್ವವಲಯದ ಕ್ಷೇತ್ರ ಸಮನ್ವಯಾಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ:

ಫಿಸಿಯೋಥೆರಪಿಸ್ಟ್ (01 ಹುದ್ದೆ): ಬ್ಯಾಚಲರ್ ಆಫ್ ಫಿಸಿಯೋಥೆರಪಿ ಅಥವಾ ಡಿಪೆÇ್ಲೀಮಾ ಆಫ್ ಫಿಸಿಯೋಥೆರಪಿ ಪದವಿ ಹೊಂದಿರಬೇಕು.

ಮಹಿಳಾ ಸಹಾಯಕಿ (01 ಹುದ್ದೆ): ಕನಿಷ್ಠ 7ನೇ ತರಗತಿ ಉತ್ತೀರ್ಣರಾಗಿರಬೇಕು.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜೂ.30 ರ ಒಳಗಾಗಿ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸಬೇಕಾದ ವಿಳಾಸ:

ಕ್ಷೇತ್ರ ಸಮನ್ವಯಾಧಿಕಾರಿಗಳು, ಬಿಆರ್ಸಿ ಕಚೇರಿ, ಪೂರ್ವವಲಯ ಬಳ್ಳಾರಿ.

ಹುದ್ದೆಗಳ ನೇಮಕಾತಿ ಹಾಗೂ ಇತರ ನಿಯಮಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ.9916356333, 9480695074 ಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande