ಸಂಡೂರು : ಮುಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿ ಆರಂಭ
ಸಂಡೂರು, 24 ಜೂನ್ (ಹಿ.ಸ.) : ಆ್ಯಂಕರ್ : ಪ್ರಸ್ತಕ ಸಾಲಿನ ಮುಂಗಾರು ಹಂಗಾಮಿಗೆ ‘ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆ''ಯಡಿ ಕೃಷಿ ಬೆಳೆಗಳ ವಿಮೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಸಂಡೂರು ತಾಲೂಕಿನ ರೈತರು ನೈಸರ್ಗಿಕ ವಿಕೋಪಗಳಿಂದ ಎದುರಾಗಬಹುದಾದ ನಷ್ಟವನ್ನು ತಪ್ಪಿಸ
ಸಂಡೂರು : ಮುಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿ ಆರಂಭ


ಸಂಡೂರು, 24 ಜೂನ್ (ಹಿ.ಸ.) :

ಆ್ಯಂಕರ್ : ಪ್ರಸ್ತಕ ಸಾಲಿನ ಮುಂಗಾರು ಹಂಗಾಮಿಗೆ ‘ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆ'ಯಡಿ ಕೃಷಿ ಬೆಳೆಗಳ ವಿಮೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.

ಸಂಡೂರು ತಾಲೂಕಿನ ರೈತರು ನೈಸರ್ಗಿಕ ವಿಕೋಪಗಳಿಂದ ಎದುರಾಗಬಹುದಾದ ನಷ್ಟವನ್ನು ತಪ್ಪಿಸಲು ನಿಗದಿತ ಅವಧಿಯೊಳಗೆ ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದು ಸಂಡೂರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಮೊಹಮ್ಮದ್ ರಫಿಯುಲ್ಲರಝ್ವಿ ಅವರು ಕೋರಿದ್ದಾರೆ.

ಆಲಿಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆಯಂತಹ ನೈಸರ್ಗಿಕ ಪ್ರಕೃತಿ ವಿಕೋಪಗಳಿಂದ ಬೆಳೆ ಹಾನಿಯಾದ ಸಂದರ್ಭದಲ್ಲಿ ಈ ವಿಮಾ ಯೋಜನೆ ರೈತರಿಗೆ ಆಸರೆಯಾಗಲಿದೆ. ಒಂದು ವೇಳೆ ಇಂತಹ ಘಟನೆಗಳು ಸಂಭವಿಸಿದರೆ, 72 ಗಂಟೆಗಳೊಳಗಾಗಿ ಕೃಷಿ ಇಲಾಖೆಗೆ ಅಥವಾ ವಿಮಾ ಕಂಪನಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಇದು ಪರಿಹಾರ ಪಡೆಯಲು ಅತ್ಯಗತ್ಯವಾದ ಹಂತವಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿವಿಧ ಬೆಳೆಗಳು ಮತ್ತು ನೋಂದಣಿಗೆ ಕೊನೆಯ ದಿನಾಂಕಗಳ ವಿವರ:

ಜುಲೈ 15 ರೊಳಗೆ ನೋಂದಾಯಿಸಬೇಕಾದ ಬೆಳೆಗಳು (ಪ್ರತಿ ಎಕರೆಗೆ ವಿಮಾ ಕಂತು): ಎಳ್ಳು (ಮಳೆಯಾಶ್ರಿತ)- ರೂ.268.

ಜುಲೈ 31 ರೊಳಗೆ ನೋಂದಾಯಿಸಬೇಕಾದ ಬೆಳೆಗಳು (ಪ್ರತಿ ಎಕರೆಗೆ ವಿಮಾ ಕಂತು): ಮಳೆಯಾಶ್ರಿತ ಸೂರ್ಯಕಾಂತಿ – ರೂ.390, ನೀರಾವರಿ ಸೂರ್ಯಕಾಂತಿ – ರೂ.469, ಮಳೆಯಾಶ್ರಿತ ಜೋಳ – ರೂ.359, ನೀರಾವರಿ ಜೋಳ – ರೂ.426.

ಮಳೆಯಾಶ್ರಿತ ಮೆಕ್ಕೆಜೋಳ – ರೂ.546, ನೀರಾವರಿ ಮೆಕ್ಕೆಜೋಳ – ರೂ.617, ಹತ್ತಿ (ನೀರಾವರಿ) – ರೂ.1,748, ಕೆಂಪು ಮೆಣಸಿನಕಾಯಿ (ನೀರಾವರಿ) – ರೂ.2,519, ಈರುಳ್ಳಿ (ನೀರಾವರಿ) – ರೂ.1,900

ಆಗಸ್ಟ್ 14 ರೊಳಗೆ ನೋಂದಾಯಿಸಬೇಕಾದ ಬೆಳೆಗಳು (ಪ್ರತಿ ಎಕರೆಗೆ ವಿಮಾ ಕಂತು): ರಾಗಿ (ಮಳೆಯಾಶ್ರಿತ) – ರೂ.404, ಮಳೆಯಾಶ್ರಿತ ಸಜ್ಜೆ – ರೂ.282, ನೀರಾವರಿ ಸಜ್ಜೆ – ರೂ.350, ನವಣೆ (ಮಳೆಯಾಶ್ರಿತ) – ರೂ.261, ಮಳೆಯಾಶ್ರಿತ ತೊಗರಿ – ರೂ.466, ನೀರಾವರಿ ತೊಗರಿ – ರೂ.488, ಮಳೆಯಾಶ್ರಿತ ನೆಲಗಡಲೆ (ಶೇಂಗಾ) – ರೂ.529, ನೀರಾವರಿ ನೆಲಗಡಲೆ (ಶೇಂಗಾ) – ರೂ.485, ಹುರುಳಿ (ಮಳೆಯಾಶ್ರಿತ) – ರೂ.380 ಆಗಿರುತ್ತದೆ.

ನೋಂದಣಿ ಎಲ್ಲಿ ಮಾಡಿಸಬೇಕು?:

ಬೆಳೆ ವಿಮೆ ನೋಂದಣಿಗಾಗಿ ರೈತರು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಿಗೆ ಅಥವಾ ತಾವು ವ್ಯವಹಾರ ನಡೆಸುವ ಬ್ಯಾಂಕುಗಳಿಗೆ ಸಂಪರ್ಕಿಸಬಹುದು.

ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ ಅಥವಾ ಸಂಡೂರು ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಇಲ್ಲಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande