ಸಂಡೂರು : ಬೆಳೆ ವಿಮೆ ತಿರಸ್ಕೃತ ಪ್ರಸ್ತಾವನೆಗಳ ಮರುಪರಿಶೀಲನೆ
ಸಂಡೂರು, 23 ಜೂನ್ (ಹಿ.ಸ.) : ಆ್ಯಂಕರ್ : ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ 2024ರ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ಬೆಳೆ ವಿಮೆ ಪ್ರಸ್ತಾವನೆಗಳಿಗೆ ಸಂಬ0ಧಿಸಿದ0ತೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗದರ್ಶನದಂತೆ ಬೆಳೆ ಸಮೀಕ್ಷೆಯ ದತ್ತಾಂಶಗಳನ್ನು ವಿಮೆ
ಸಂಡೂರು : ಬೆಳೆ ವಿಮೆ ತಿರಸ್ಕೃತ ಪ್ರಸ್ತಾವನೆಗಳ ಮರುಪರಿಶೀಲನೆ


ಸಂಡೂರು, 23 ಜೂನ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ 2024ರ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ಬೆಳೆ ವಿಮೆ ಪ್ರಸ್ತಾವನೆಗಳಿಗೆ ಸಂಬ0ಧಿಸಿದ0ತೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗದರ್ಶನದಂತೆ ಬೆಳೆ ಸಮೀಕ್ಷೆಯ ದತ್ತಾಂಶಗಳನ್ನು ವಿಮೆ ನೋಂದಣಿ ಪ್ರಸ್ತಾವನೆಗಳೊಂದಿಗೆ ಹೋಲಿಕೆ ಮಾಡಿ, ತಾಳೆಯಾದ ಅರ್ಜಿಗಳಿಗೆ ಈಗಾಗಲೇ ‘ಸಂರಕ್ಷಣೆ' ತಂತ್ರಾ0ಶದ ಮೂಲಕ ವಿಮಾ ಪರಿಹಾರವನ್ನು ಲೆಕ್ಕಹಾಕಲಾಗಿದೆ.

ದತ್ತಾಂಶಗಳು ತಾಳೆಯಾಗದ ಕೆಲವು ಪ್ರಸ್ತಾವನೆಗಳನ್ನು ತಾಲೂಕು ಮಟ್ಟದ ಅಧಿಕಾರಿಗಳ ಪರಿಶೀಲನೆಯ ನಂತರ, ವಿಮಾ ಸಂಸ್ಥೆಯು ಅಂತಿಮವಾಗಿ ತಿರಸ್ಕರಿಸಿದೆ. ಪ್ರಸ್ತುತ ಸಂಡೂರು ತಾಲ್ಲೂಕಿನಲ್ಲಿ ವಿಮಾ ಸಂಸ್ಥೆಯಿ0ದ ತಿರಸ್ಕೃತಗೊಂಡಿರುವ ಒಟ್ಟು 262 ಪ್ರಸ್ತಾವನೆಗಳ ವಿವರಗಳನ್ನು ಆಯಾ ರೈತ ಸಂಪರ್ಕ ಕೇಂದ್ರಗಳ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.

ತಿರಸ್ಕೃತಗೊಂಡಿರುವ ಪ್ರಸ್ತಾವನೆಗಳ ವಿವರ(2024-25 ಸಾಲಿನ) :

ಸಂಡೂರು ತಾಲ್ಲೂಕಿನಲ್ಲಿ ಮುಂಗಾರು-261, ಹಿಂಗಾರು- 01, ಬೇಸಿಗೆ-00, ಒಟ್ಟು ತಿರಸ್ಕೃತಗೊಂಡ ಪ್ರಸ್ತಾವನೆಗಳು-262.

ಯಾವ ರೈತರ ವಿಮಾ ಅರ್ಜಿಗಳು ತಿರಸ್ಕೃತಗೊಂಡಿವೆಯೋ, ಅವರು ಈ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು, ಒಂದು ವೇಳೆ ಆಕ್ಷೇಪಣೆಗಳಿದ್ದಲ್ಲಿ ಮರುಪರಿಶೀಲನೆಗಾಗಿ ಸಂಬ0ಧಪಟ್ಟ ರೈತ ಸಂಪರ್ಕ ಕೇಂದ್ರಗಳು ಅಥವಾ ಸಂಡೂರು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಮನವಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಜುಲೈ 09 ರ ವರೆಗೆ ಅವಧಿ ನಿಗದಿಪಡಿಸಲಾಗಿದೆ.

ಬೆಳೆ ವಿಮೆ ತಿರಸ್ಕೃತಗೊಂಡಿರುವ ಸಂಡೂರು ತಾಲ್ಲೂಕಿನ ರೈತರು ಈ ನಿಗದಿತ ಅವಧಿಯೊಳಗೆ ತಮ್ಮ ಆಕ್ಷೇಪಣೆ ಅರ್ಜಿಗಳನ್ನು ಸಲ್ಲಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕಾಗಿ ಸಂಡೂರಿನ ಸಹಾಯಕ ಕೃಷಿ ನಿರ್ದೇಶಕರಾದ ಬಿ. ಗಯಾ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande