ಜೂ.27 ರಂದು ಕನಕದಾಸರ ಸಂಗೀತ-ನೃತ್ಯ ರೂಪಕ ‘ಮುತ್ತು ಬಂದಿದೆ ಕೇರಿಗೆ’ ಪ್ರದರ್ಶನ
ಬಳ್ಳಾರಿ, 23 ಜೂನ್ (ಹಿ.ಸ.) : ಆ್ಯಂಕರ್ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ‘ಸಂತಕವಿ ಕನಕದಾಸ ಮತ್ತು ತತ್ತ್ವಪದಕಾರರ ಅಧ್ಯಯನ ಕೇಂದ್ರ, ಬೆಂಗಳೂರು ಹಾಗೂ ಬಳ್ಳಾರಿಯ ‘ರಂಗಜಂಗಮ ಸಂಸ್ಥೆ (ರಿ) ಡಿ. ಕಗ್ಗಲ್'' ಇವರ ಸಹಯೋಗದಲ್ಲಿ ಜೂ.27 ರಂದು ಸಂಜೆ 06.30 ಗಂಟೆಗೆ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂ
ಜೂ.27 ರಂದು ಕನಕದಾಸರ  ಸಂಗೀತ-ನೃತ್ಯ ರೂಪಕ ‘ಮುತ್ತು ಬಂದಿದೆ ಕೇರಿಗೆ’ ಪ್ರದರ್ಶನ


ಬಳ್ಳಾರಿ, 23 ಜೂನ್ (ಹಿ.ಸ.) :

ಆ್ಯಂಕರ್ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ‘ಸಂತಕವಿ ಕನಕದಾಸ ಮತ್ತು ತತ್ತ್ವಪದಕಾರರ ಅಧ್ಯಯನ ಕೇಂದ್ರ, ಬೆಂಗಳೂರು ಹಾಗೂ ಬಳ್ಳಾರಿಯ ‘ರಂಗಜಂಗಮ ಸಂಸ್ಥೆ (ರಿ) ಡಿ. ಕಗ್ಗಲ್' ಇವರ ಸಹಯೋಗದಲ್ಲಿ ಜೂ.27 ರಂದು ಸಂಜೆ 06.30 ಗಂಟೆಗೆ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಸಂತಕವಿ ಕನಕದಾಸರ ಕುರಿತ ವಿಶೇಷ ಸಂಗೀತ-ನೃತ್ಯ ರೂಪಕ ‘ಮುತ್ತು ಬಂದಿದೆ ಕೇರಿಗೆ’ ಕಾರ್ಯಕ್ರಮ ಆಯೋಜಿಸಲಾಗಿದೆ.

ಕನಕದಾಸರ ಮಹತ್ವದ ಕೀರ್ತನೆ ಹಾಗೂ ಕಾವ್ಯ ಭಾಗಗಳನ್ನು ಆಯ್ದು, ಅವರ ತತ್ತ್ವಾದರ್ಶಗಳನ್ನು ಜನತೆಗೆ ತಲುಪಿಸುವ ಉದ್ದೇಶದಿಂದ ಈ ರೂಪಕವನ್ನು ಸಿದ್ಧಪಡಿಸಲಾಗಿದೆ.

ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿರುವ ಸ್ನೇಹ ಕಪ್ಪಣ್ಣ ಅವರ ನೃತ್ಯ ಸಂಯೋಜನೆ ಹಾಗೂ ಪ್ರಸಿದ್ಧ ಸಂಗೀತ ತಜ್ಞ ಡಾ. ಪ್ರವೀಣ್ ಡಿ.ರಾವ್ ಅವರ ಸಂಗೀತ ಸಂಯೋಜನೆ ಈ ಕಾರ್ಯಕ್ರಮಕ್ಕಿದೆ. ಕಾ.ತ.ಚಿಕ್ಕಣ್ಣ ಅವರ ಪರಿಕಲ್ಪನೆ ಹಾಗೂ ಸಾಹಿತ್ಯ ಒಳಗೊಂಡಿದ್ದು, ಶ್ರೀನಿವಾಸ ಜಿ. ಕಪ್ಪಣ್ಣ ಅವರು ಸಮನ್ವಯ ಹಾಗೂ ತಾಂತ್ರಿಕ ನಿರ್ದೇಶನ ನೀಡಿದ್ದಾರೆ.

‘ಭ್ರಮರಿ ಡ್ಯಾನ್ಸ್ ರೆಪರ್ಟರಿ' ಕಲಾವಿದರು ಈ ನೃತ್ಯ ರೂಪಕವನ್ನು ಪ್ರಸ್ತುತಪಡಿಸಲಿದ್ದಾರೆ.

ಕಾರ್ಯಕ್ರಮಕ್ಕೆ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಸಮಿತಿಯ ರಾಜ್ಯ ಅಧ್ಯಕ್ಷ ಹೆಚ್.ಎಂ. ರೇವಣ್ಣ, ಸಂತಕವಿ ಕನಕದಾಸ ಮತ್ತು ತತ್ತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ, ಹಿರಿಯ ರಂಗಸಂಘಟಕರಾದ ಶ್ರೀನಿವಾಸ ಜಿ. ಕಪ್ಪಣ್ಣ ಸೇರಿದಂತೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೋ, ಲೋಕೇಶ್ ವಿ., ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಡಾ.ಪಿ.ಎಲ್. ಗಾದಿಲಿಂಗನಗೌಡ, ಸಂತಕವಿ ಕನಕದಾಸ ಮತ್ತು ತತ್ತ್ವಪದಕಾರರ ಅಧ್ಯಯನ ಕೇಂದ್ರದ ಸದಸ್ಯ ಡಾ.ದಸ್ತಗಿರಿಸಾಬ್, ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಶಿವನಾಯಕ ದೊರೆ, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಸದಸ್ಯ ಪ್ರೊ.ಶಾಂತನಾಯ್ಕ ಸೇರಿದಂತೆ ಮುಂತಾದ ಗಣ್ಯರು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿರಲಿದ್ದಾರೆ.

ಕನಕದಾಸರ ಮಾನವತಾವಾದ, ಸಾಮಾಜಿಕ ಕಾಳಜಿ ಹಾಗೂ ಧಾರ್ಮಿಕ ಚಿಂತನೆಗಳನ್ನು ಸಾರುವ ಈ ಅಪೂರ್ವ ನೃತ್ಯ ರೂಪಕವನ್ನು ಕಣ್ತುಂಬಿಕೊಳ್ಳಲು ಬಳ್ಳಾರಿಯ ಕಲಾಭಿಮಾನಿಗಳು ಮತ್ತು ಸಾರ್ವಜನಿಕರು ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಸಂಚಾಲಕ ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ಹಾಗೂ ಸಂತಕವಿ ಕನಕದಾಸ ಮತ್ತು ತತ್ತ್ವಪದಕಾರರ ಅಧ್ಯಯನ ಕೇಂದ್ರದ ಸದಸ್ಯ ಕಾರ್ಯದರ್ಶಿ ಕರಿಯಪ್ಪ ಎನ್. ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande