
ಸಿರುಗುಪ್ಪ, 23 ಜೂನ್ (ಹಿ.ಸ.) :
ಆ್ಯಂಕರ್ : ಸಿರುಗುಪ್ಪ ಜೆಸ್ಕಾಂ ವ್ಯಾಪ್ತಿಯಲ್ಲಿ 110 ಕೆವಿ ದಡೇಸುಗೂರು-ಸಿರುಗುಪ್ಪ ಮಾರ್ಗದಲ್ಲಿ ಹೊಸ ಗೋಪುರ (ಟವರ್ ಸಂಖ್ಯೆ-41) ನಿರ್ಮಾಣ ಹಾಗೂ ಹಳೆಯ ಗೋಪುರ (ಟವರ್ ಸಂಖ್ಯೆ-75) ತೆರವುಗೊಳಿಸುವ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂ.24 ರಂದು ಬೆಳಿಗ್ಗೆ 08 ರಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ಕಾಮಗಾರಿಯಿಂದಾಗಿ 110 ಕೆವಿ ದಡೇಸುಗೂರು-ಸಿರುಗುಪ್ಪ ಲೈನ್ ವ್ಯಾಪ್ತಿಗೆ ಒಳಪಡುವ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳು ಹಾಗೂ ವಿದ್ಯುತ್ ಗ್ರಾಹಕರಿಗೆ ನಿಗದಿತ ಅವಧಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್