ಎಂಎಸ್ಪಿ ದುರ್ಬಳಕೆ ಯತ್ನ ; ಆಂಧ್ರದಿಂದ ಜೋಳ ತಂದು, ಕರ್ನಾಟಕದಲ್ಲಿ ಮಾರಾಟ
ಬಳ್ಳಾರಿ, 23 ಜೂನ್ (ಹಿ.ಸ.) : ಆ್ಯಂಕರ್ : ಆಂಧ್ರ ಪ್ರದೇಶದಲ್ಲಿ ಕಡಿಮೆ ಬೆಲೆಗೆ ಜೋಳವನ್ನು ಖರೀದಿ ಮಾಡಿದ್ದವರು ಕರ್ನಾಟಕದ ರೈತರ ಹೆಸರಲ್ಲಿ ಕರ್ನಾಟಕ ಸರ್ಕಾರದ ಎಂಎಸ್ಪಿ (ಕನಿಷ್ಠ ಮಾರಾಟ ದರ)ಕ್ಕೆ ಕರ್ನಾಟಕ ಸರ್ಕಾರಕ್ಕೆ ಮಾರಾಟ ಮಾಡಿ, ಹೆಚ್ಚಿನ ಹಣವನ್ನು ಗಳಿಕೆ ಮಾಡುವ ವ್ಯವಹಾರವನ್ನು ಅಧಿಕಾರಿಗಳು
ಎಂಎಸ್ಪಿ ದುರ್ಬಳಕೆ ಯತ್ನ :  ಆಂಧ್ರದಿಂದ ಜೋಳ ತಂದು, ಕರ್ನಾಟಕದಲ್ಲಿ ಮಾರಾಟ


ಎಂಎಸ್ಪಿ ದುರ್ಬಳಕೆ ಯತ್ನ :  ಆಂಧ್ರದಿಂದ ಜೋಳ ತಂದು, ಕರ್ನಾಟಕದಲ್ಲಿ ಮಾರಾಟ


ಎಂಎಸ್ಪಿ ದುರ್ಬಳಕೆ ಯತ್ನ :  ಆಂಧ್ರದಿಂದ ಜೋಳ ತಂದು, ಕರ್ನಾಟಕದಲ್ಲಿ ಮಾರಾಟ


ಎಂಎಸ್ಪಿ ದುರ್ಬಳಕೆ ಯತ್ನ :  ಆಂಧ್ರದಿಂದ ಜೋಳ ತಂದು, ಕರ್ನಾಟಕದಲ್ಲಿ ಮಾರಾಟ


ಬಳ್ಳಾರಿ, 23 ಜೂನ್ (ಹಿ.ಸ.) :

ಆ್ಯಂಕರ್ : ಆಂಧ್ರ ಪ್ರದೇಶದಲ್ಲಿ ಕಡಿಮೆ ಬೆಲೆಗೆ ಜೋಳವನ್ನು ಖರೀದಿ ಮಾಡಿದ್ದವರು ಕರ್ನಾಟಕದ ರೈತರ ಹೆಸರಲ್ಲಿ ಕರ್ನಾಟಕ ಸರ್ಕಾರದ ಎಂಎಸ್ಪಿ (ಕನಿಷ್ಠ ಮಾರಾಟ ದರ)ಕ್ಕೆ ಕರ್ನಾಟಕ ಸರ್ಕಾರಕ್ಕೆ ಮಾರಾಟ ಮಾಡಿ, ಹೆಚ್ಚಿನ ಹಣವನ್ನು ಗಳಿಕೆ ಮಾಡುವ ವ್ಯವಹಾರವನ್ನು ಅಧಿಕಾರಿಗಳು ಪತ್ತೆ ಮಾಡಿ, ಜೋಳವನ್ನು ವಶಕ್ಕೆ ಪಡೆದು ವ್ಯಾಪಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

ಆಂಧ್ರ ಪ್ರದೇಶದ ಗುಂಟೂರು ಭಾಗದಲ್ಲಿ ಪ್ರತಿ ಕ್ವಿಂಟಲ್ ಜೋಳಕ್ಕೆ ರೂಪಾಯಿ 2,000 ಕ್ಕಿಂತ ಕಡಿಮೆ ಬೆಲೆ ಇದೆ. ಆಂಧ್ರ ಪ್ರದೇಶದಲ್ಲಿ ಕಡಿಮೆ ಬೆಲೆಗೆ ಜೋಳವನ್ನು ಖರೀದಿ ಮಾಡುವ ವ್ಯಾಪಾರಿಗಳು, ಬಳ್ಳಾರಿ ಜಿಲ್ಲೆಯ ರೈತರ ಪಹಣಿ ಮತ್ತು ಖಾತೆಗಳನ್ನು ನೀಡಿ, ಕರ್ನಾಟಕ ಸರ್ಕಾರದ ಎಂಎಸ್ಪಿ (ಕನಿಷ್ಠ ಮಾರಾಟ ದರ)ಕ್ಕೆ ಕರ್ನಾಟಕ ಸರ್ಕಾರಕ್ಕೆ ಮಾರಾಟ ಮಾಡುವುದು ನಿರಂತರ ನಡೆದಿದೆ. ಕರ್ನಾಟಕದಲ್ಲಿ ಜೋಳದ ಎಂಎಸ್ಪಿ ಪ್ರತಿ ಕ್ವಿಂಟಾಲ್ಗೆ ರೂ. 3,700/- ಆಗಿದ್ದು, ಭಾರಿ ಲಾಭದ ವಹಿವಾಟು ನಡೆದಿದೆ.

ಈ ಕುರಿತು ಮಾಹಿತಿ ಪಡೆದಿದ್ದ ಅಸಿಸ್ಟೆಂಟ್ ಕಮಿಷನರ್ ಎಚ್.ಡಿ. ರಾಜೇಶ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡವು, ಮಂಗಳವಾರ ಬೆಳಗ್ಗೆ ಅಸುಂಡಿ ಗ್ರಾಮದ ಖಾಸಗಿ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹ ಮಾಡಿ ಇರಿಸಲಾಗಿದ್ದ 480 ಚೀಲ ಜೋಳವನ್ನು ಪತ್ತೆ ಮಾಡಿ, ವಶಕ್ಕೆ ಪಡೆದು, ದಾಸ್ತಾನು ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಅಸಿಸ್ಟೆಂಟ್ ಕಮಿಷನರ್ ಎಚ್.ಡಿ. ರಾಜೇಶ್ ಅವರು, ವಶಕ್ಕೆ ಪಡೆದ ಜೋಳವನ್ನು ಪರಿಶೀಲಿಸಿದ್ದು, ಜೋಳದ ಮೂಲವು ಆಂಧ್ರ ಪ್ರದೇಶ ಎನ್ನುವುದು ಖಚಿತವಾಗಿದೆ. ಕರ್ನಾಟಕದ ಅದರಲ್ಲೂ ಗಡಿ ಭಾಗದಲ್ಲಿ ಇರುವ ರೈತರ ಹೆಸರಿನಲ್ಲಿ ಸರ್ಕಾರಕ್ಕೆ ಪಹಣಿ ಮತ್ತು ಬ್ಯಾಂಕ್ ಖಾತೆಯನ್ನು ನೀಡಿ, ಎಂಎಸ್ಪಿ ಬೆಲೆಯಲ್ಲಿ ಜೋಳವನ್ನು ಮಾರಾಟ ಮಾಡಲಾಗುತ್ತಿತ್ತು ಎನ್ನುವುದು ಖಚಿತವಾಗಿದೆ.

ಈ ಕುರಿತು ಪರಮದೇವನಹಳ್ಳಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande