
ಸಿಂಧನೂರು, 23 ಜೂನ್ (ಹಿ.ಸ.) :
ಆ್ಯಂಕರ್ : ಸಿಂಧನೂರು ತಾಲೂಕಿನ ಬಂಗಾಲಿ ಕ್ಯಾಂಪಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಅರ್.ಎಚ್.ಕ್ಯಾಂಪ್ 2ರ ನಿವಾಸಿ ಹನುಮೇಶ ಸರ್ಕಾರ, ಅರ್.ಎಚ್ ಕ್ಯಾಂಪಿನ ನಿವಾಸಿ ಸ್ವಾಗತ್ ಎನ್ನುವವರಿಂದ 3 ಕೆಜಿ 90 ಗ್ರಾಂ ಹಾಗೂ ಅದೇ ಕ್ಯಾಂಪಿನ ಮಣಿಶಂಕರ ಸರ್ಕಾರ್ ಮತ್ತು ಶಿವುಕುಮಾರ ಮಂಡಲ್ ಬೇರೆ ಕಡೆಯಿಂದ ತಂದು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಪತ್ತೆ ಮಾಡಿದ್ದಾರೆ.
ಈ ನಾಲ್ಕು ಜನರ ವಿರುದ್ದ ಕೇಸ್ ದಾಖಲಿಸಿ ಮೂವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ಎಸ್ಪಿ ಅರುಣ್ಷಾಂಗಿರಿ ಸಿಂಧನೂರು ಗ್ರಾಮೀಣ ಪೊಲೀಸರ ಪತ್ತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗಾಂಜಾ ಪ್ರಕರಣ ಪತ್ತೆಗಾಗಿ ರಚಿಸಲಾಗಿದ್ದ ತನಿಖಾ ತಂಡದಲ್ಲಿ ಸಿಂಧನೂರು ಗ್ರಾಮೀಣ ಸಿಪಿಐ ವಿನಾಯಕ, ಸಿಬ್ಬಂದಿಗಳಾದ ದೇವರಾಜ, ಶಂಕರ್, ಮಹೇಶ, ತಿಪ್ಪಣ್ಣ,ಅಯ್ಯಮ್ಮ, ಹಫಿಜುಲ್ಲಾ, ಅಮರೇಗೌಡ ತನಿಖಾ ತಂಡ ಗಾಂಜಾ ಪೆಡ್ಲರ್ ಗಳ ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್