ವೀರಸೇನಾ ರೆಡ್ಡಿಗೆ ಅಂತಿಮ ನಮನ ಸಲ್ಲಿಸಿದ ಕಾಂಗ್ರೆಸ್ಸಿಗರು
ಬಳ್ಳಾರಿ, 23 ಜೂನ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಮುಖಂಡ, ವಣೇನೂರು ಗ್ರಾಮ ನಿವಾಸಿ, ಗುತ್ತಿಗೆದಾರ ವಿರಸೇನಾರೆಡ್ಡಿ (58) ಅವರ ಅಂತಿಮ ದರ್ಶನವನ್ನು ಪಡೆದ ಕಾಂಗ್ರೆಸ್ ಮುಖಂಡರು, ಕುಟುಂಬಕ್ಕೆ ಸಾಂತ್ವನ ಹೇಳಿ, ಸಂತಾಪ ಸೂಚಿಸಿ, ಗೌರವ ನಮನ ಸಲ್ಲಿಸಿದ್ದಾರೆ. ರಾಜ್ಯ
ಅಪಘಾತದಲ್ಲಿ ಮೃತ ವೀರಸೇನಾ ರೆಡ್ಡಿಗೆ ಅಂತಿಮ ನಮನ ಸಲ್ಲಿಸಿದ ಕಾಂಗ್ರೆಸ್ಸಿಗರು

ಬಳ್ಳಾರಿ, 23 ಜೂನ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಮುಖಂಡ, ವಣೇನೂರು ಗ್ರಾಮ ನಿವಾಸಿ, ಗುತ್ತಿಗೆದಾರ ವಿರಸೇನಾರೆಡ್ಡಿ (58) ಅವರ ಅಂತಿಮ ದರ್ಶನವನ್ನು ಪಡೆದ ಕಾಂಗ್ರೆಸ್ ಮುಖಂಡರು, ಕುಟುಂಬಕ್ಕೆ ಸಾಂತ್ವನ ಹೇಳಿ, ಸಂತಾಪ ಸೂಚಿಸಿ, ಗೌರವ ನಮನ ಸಲ್ಲಿಸಿದ್ದಾರೆ.

ರಾಜ್ಯ ಸಭಾ ಸದಸ್ಯರು, ಏಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಡಾ. ಸಯ್ಯದ್ ನಾಸೀರ್ ಹುಸೇನ್, ಮುಖಂಡರಾದ ಅಲ್ಲಂ ವೀರಭದ್ರಪ್ಪ, ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಪಿ. ಗಾದೆಪ್ಪ, ಕಾರ್ಪೊರೇಟರುಗಳು, ಕಾಂಗ್ರೆಸ್ನ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಮುಖಂಡರು ವಣೇನೂರು ಗ್ರಾಮಕ್ಕೆ ಮಂಗಳವಾರ ಬೆಳಗ್ಗೆ ಹೋಗಿ, ಅಂತಿಮ ದರ್ಶನ ಪಡೆದು, ಕುಟುಂಬಕ್ಕೆ ಸಾಂತ್ವನ ಹೇಳಿ, ಸಂತಾಪ ಸೂಚಿಸಿ, ಗೌರವ ನಮನ ಸಲ್ಲಿಸಿದ್ದಾರೆ.

ಹೊಸ ಮೋಕಾದ ಸಮೀಪ ಸೋಮವಾರ ಮಧ್ಯಾಹ್ನ 3.30ರ ಸುಮಾರಿಗೆ ಆಟೋ - ದ್ವಿಚಕ್ರ ವಾಹನ ನಡುವೆ ನಡೆದ ರಸ್ತೆ ಅಪಘಾತದಲ್ಲಿ ವೀರಸೇನಾರೆಡ್ಡಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದನ್ನು ನಾವಿಲ್ಲ ಸ್ಮರಿಸಬಹುದು.

ಮೃತರ ಅಂತ್ಯಕ್ರಿಯೆಯು ಕುಟುಂಬದ ಸದಸ್ಯರು, ಆಪ್ತರು, ಗುರು - ಹಿರಿಯರು ಮತ್ತು ಅಭಿಮಾನಿಗಳು - ಗೆಳೆಯರು, ಬಂಧುವರ್ಗದ ಸಮ್ಮುಖದಲ್ಲಿ ಮಂಗಳವಾರ ಮಧ್ಯಾಹ್ನ ನೆರವೇರಿತು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

 rajesh pande