
ಬಳ್ಳಾರಿ, 23 ಜೂನ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಜಿಲ್ಲೆಯ ವಿವಿಧ ತಾಲ್ಲೂಕುಗಳ ಹಸಿಮೆಣಸಿನಕಾಯಿ ಹಾಗೂ ದಾಳಿಂಬೆ ಬೆಳೆಗಾರರಿಂದ ವಿಮೆ ನೋಂದಣಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ತೋಟಗಾರಿಕೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಈ ಯೋಜನೆಯನ್ನು ಎಸ್ಬಿಐ ಜನರಲ್ ಇನ್ಶೂರನ್ಸ್ ಕಂಪನಿ ಲಿಮಿಟೆಡ್ ಸಂಸ್ಥೆಯ ಮೂಲಕ ಅನುಷ್ಠಾನಗೊಳಿಸಲಾಗುತ್ತಿದ್ದು, ಅರ್ಹ ರೈತರು ನಿಗದಿತ ಅವಧಿಯೊಳಗೆ ನೋಂದಾಯಿಸಿಕೊಳ್ಳಲು ಕೋರಲಾಗಿದೆ.
ವಿಮೆ ವ್ಯಾಪ್ತಿಗೆ ಒಳಪಡುವ ಬೆಳೆಗಳು ಮತ್ತು ಪ್ರದೇಶಗಳು :
ಹಸಿಮೆಣಸಿನಕಾಯಿ : ಬಳ್ಳಾರಿ ಮತ್ತು ಕುರುಗೋಡು ತಾಲ್ಲೂಕುಗಳ ಗ್ರಾಮ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳು.
ದಾಳಿಂಬೆ : ಕಂಪ್ಲಿ, ಸಂಡೂರು ಮತ್ತು ಸಿರುಗುಪ್ಪ ತಾಲ್ಲೂಕುಗಳ ಗ್ರಾಮ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳು.
ವಿವರಗಳು ಮತ್ತು ಪ್ರೀಮಿಯಂ ಮೊತ್ತ :
ಹಸಿಮೆಣಸಿನಕಾಯಿ : ವಿಮಾ ಮೊತ್ತ ಪ್ರತಿ ಹೆಕ್ಟೇರ್ಗೆ (ರೂ.ಗಳಲ್ಲಿ) ರೂ. 71,000/-, ಪ್ರತಿ ಹೆಕ್ಟೇರ್ಗೆ ರೈತರು ಪಾವತಿಸಬೇಕಾದ ಪ್ರೀಮಿಯಂ (ರೂ.ಗಳಲ್ಲಿ) ರೂ. 3,550/-, ವಿಮಾ ಮೊತ್ತ ಪಾವತಿಸಲು ಕೊನೆಯ ದಿನಾಂಕ – ಜುಲೈ 31.
ದಾಳಿಂಬೆ : ವಿಮಾ ಮೊತ್ತ ಪ್ರತಿ ಹೆಕ್ಟೇರ್ಗೆ (ರೂ.ಗಳಲ್ಲಿ) ರೂ. 1,27,000/-, ಪ್ರತಿ ಹೆಕ್ಟೇರ್ಗೆ ರೈತರು ಪಾವತಿಸಬೇಕಾದ ಪ್ರೀಮಿಯಂ (ರೂ.ಗಳಲ್ಲಿ) ರೂ. 6,350/-, ವಿಮಾ ಮೊತ್ತ ಪಾವತಿಸಲು ಕೊನೆಯ ದಿನಾಂಕ – ಜುಲೈ 31.
ಬೆಳೆ ವಿಮೆ ಕುರಿತು ಹೆಚ್ಚಿನ ವಿವರಗಳಿಗಾಗಿ ರೈತರು ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಅಥವಾ ಕೆಳಗಿನ ಕಚೇರಿ ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದಾಗಿದೆ
ಬಳ್ಳಾರಿ, ಕುರುಗೋಡು ಮತ್ತು ಕಂಪ್ಲಿ: ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ), ದೂ08392-278177, ಮೊ.9448511649.
ಸಂಡೂರು: ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ದೂ.08395-260389, ಮೊ.9740934208.
ಸಿರುಗುಪ್ಪ: ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ), ದೂ.08396-222066, ಮೊ.9448910277.
ರೈತರು ಯಾವುದೇ ಕೊನೆಯ ಕ್ಷಣದ ಗೊಂದಲಗಳನ್ನು ತಪ್ಪಿಸಲು ಜುಲೈ 31 ರೊಳಗಾಗಿ ತಮ್ಮ ಪ್ರೀಮಿಯಂ ಪಾವತಿಸಿ ಯೋಜನೆಯ ಸದ್ಬಳಕೆ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್