
ಸಂಡೂರು, 23 ಜೂನ್ (ಹಿ.ಸ.) :
ಆ್ಯಂಕರ್ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಪ್ರಕಟಣೆ ಹೊರಡಿಸಲಾಗಿದ್ದು, ಇಲ್ಲಿನ ವಿವಿಧ ಕೇಂದ್ರಗಳಲ್ಲಿ ಒಟ್ಟು 6 ಅಂಗನವಾಡಿ ಕಂ-ಕ್ರಷ್ ಕಾರ್ಯಕರ್ತೆ ಹಾಗೂ 6 ಅಂಗನವಾಡಿ ಕಂ-ಕ್ರಷ್ ಸಹಾಯಕಿ ಗೌರವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆಫ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹತೆಗಳು :
ಅರ್ಜಿ ಸಲ್ಲಿಸುವ ಮಹಿಳಾ ಅಭ್ಯರ್ಥಿಗಳು ಕಡ್ಡಾಯವಾಗಿ ಅದೇ ಗ್ರಾಮದ, ವಾರ್ಡಿನ ಅಥವಾ ಆಯಾ ಸ್ಥಳೀಯ ಅಂಗನವಾಡಿ ಕಂ-ಕ್ರಷ್ ಕೇಂದ್ರದ ಸರ್ವೆ ವ್ಯಾಪ್ತಿಯಲ್ಲಿ ವಾಸವಾಗಿರಬೇಕು.
ಅರ್ಜಿ ಸಲ್ಲಿಸಲು ಜುಲೈ 18 ರಂದು ಕೊನೆಯ ದಿನವಾಗಿದೆ.
ಖಾಲಿ ಇರುವ ಕೇಂದ್ರಗಳು ಮತ್ತು ಮೀಸಲಾತಿ ವಿವರ :
ಅಂಗನವಾಡಿ ಕಂ-ಕ್ರಷ್ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳು ಕೆಳಕಂಡ ಒಂದೇ ರೀತಿಯ ಕೇಂದ್ರಗಳಲ್ಲಿ ಖಾಲಿ ಇದ್ದು, ವಿವರ ಹೀಗಿದೆ.
ತೋರಣಗಲ್ಲು-03, ತೋರಣಗಲ್ಲು-01, ತೋರಣಗಲ್ಲು-05, ಎಸ್.ಓಬಳಾಪುರ, ಸಿ.ಕೆ.ಹಳ್ಳಿ-02, ಸಿದ್ದಾಪುರ-01.
ಅರ್ಜಿಯೊಂದಿಗೆ ಲಗತ್ತಿಸಬೇಕಾದ ಅಗತ್ಯ ದಾಖಲೆಗಳು ಹಾಗೂ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಂಡೂರಿನ ಕೆ.ಹೆಚ್.ಬಿ ಕಾಲೋನಿಜಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ (ಮೊ.8971982008), ಬಳ್ಳಾರಿಯ ಉಪನಿರ್ದೇಶಕರ ಕಚೇರಿ(ದೂ.08392-266219) ಗೆ ಸಂಪರ್ಕಿಸಬಹುದಾಗಿದೆ ಎಂದು ಸಂಡೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್