

ಕೊಪ್ಪಳ, 22 ಜೂನ್ (ಹಿ.ಸ.) :
ಆ್ಯಂಕರ್ : ಯೋಗ ದಿನ ಪ್ರಯುಕ್ತ ಗಿಣಿಗೇರಾ ಗ್ರಾಮ ಪಂಚಾಯತಿ ಹಾಗೂ ಕೆರೆ ಅಭಿವೃದ್ಧಿ ಸಮಿತಿ ವತಿಯಿಂದ ಗಿಣಿಗೇರಾ ಗ್ರಾಮದ ಅಮೃತ ಸರೋವರ ದಡದಲ್ಲಿ ಯೋಗಭ್ಯಾಸ ಮತ್ತು ಪ್ರಾಣಾಯಮ ಅಭ್ಯಾಸಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಕುರಿತು ಗಿಣಿಗೇರಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಮಂಜುಳಾದೇವಿ ಹೂಗಾರ ಅವರು ಮಾತನಾಡಿ, ಪ್ರಸ್ತುತ ದಿನದಲ್ಲಿ ಆಹಾರ ಪದ್ದತಿ ಬಹು ಮುಖ್ಯವಾದದು. ಆಹಾರ ಪದ್ದತಿಯನ್ನು ನಾವು ಬದಲಾವಣೆ ಮಾಡಿಕೊಳ್ಳುವದು ಸೂಕ್ತ. ಬದಲಾವಣೆ ಮಾಡಿಕೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುವದು ಖಂಡಿತವೆ0ದರು.
ಆಧುನಿಕ ಜಗತ್ತಿನಲ್ಲಿರುವ ನಾವುಗಳು ಪ್ರತಿನಿತ್ಯ ಬದುಕಿನಲ್ಲಿ ಒತ್ತಡ ಜೀವನ ಸಾಗಿಸುತ್ತಿದ್ದೆವೆ. ಪ್ರತಿ ದಿನ ನಾವುಗಳು ಆರೋಗ್ಯದಿಂದ ಇರಬೇಕಾದ ದಿನದ 24 ಗಂಟೆಗಳಲ್ಲಿ 01 ಗಂಟೆಯಾದರು ಯೋಗ ಮತ್ತು ಪ್ರಾಣಾಯಮವನ್ನು ರೂಢಿಸಿಕೊಳ್ಳಬೇಕು. ಹಿಂದಿನ ಕಾಲದಲ್ಲಿ ಋಷಿಮುನಿಗಳು ಯೋಗ ಮತ್ತು ಪ್ರಾಣಾಯಮದಿಂದ ಆರೋಗ್ಯವನ್ನು ಗೆಲ್ಲುವದಕ್ಕೆ ಸಾಧ್ಯ ಎಂಬುದನ್ನು ಮನಗಂಡು ಸಾಧನೆಗೈದು ಇತರರಿಗೆ ಮಾದರಿಯಾಗಿದ್ದಾರೆ. ಗ್ರಾಮದ ಕೆರೆಗಳು ಜೀವಂತ ಆಗರಗಳು ಎನ್ನುವ ಪದಕ್ಕೆ ಗ್ರಾಮೀಣಾಭಿವೃದ್ದಿ ಆಯುಕ್ತಾಲಯವು ಅಮೃತ ಸರೋವರ ದಡದಲ್ಲಿ ಯೋಗ ಮತ್ತು ಪ್ರಾಣಾಯಮ ಶಿಬಿರಗಳನ್ನು ಆಯೋಜಿಸಲು ನಿರ್ದೇಶನ ನೀಡಿರುವದು ಕೆರೆಯ ಮಹತ್ವಕ್ಕೆ ಆದ್ಯತೆ ನೀಡಿದೆ ಎಂದರು.
ಯೋಗ ಮತ್ತು ಪ್ರಾಣಾಯಮಕ್ಕೆ ಯಾವುದೇ ರೀತಿಯ ವಯಸ್ಸಿನ ಇತಿ ಮಿತಿ ಇರುವದಿಲ್ಲ. ಆದರೆ ಕ್ರಮಬದ್ದವಾಗಿ ಯೋಗಭ್ಯಾಸ ರೂಢಿಸಿಕೊಳ್ಳಬೇಕೆಂದರು.
ಯೋಗ ಅಭ್ಯಾಸ ಮತ್ತು ಪ್ರಾಣಾಯಮ ಭಂಗಿಗಳನ್ನು ಮಾರುತಿ ಚಿತ್ರಗಾರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ಪಂಚಾಯತ ಅಭಿವೃದ್ದಿ ಅಧಿಕಾರಿ ಮಂಜುಳಾದೇವಿ ಹೂಗಾರ, ಗ್ರಾಮಸ್ಥರಾದ ಕೃಷ್ಣಮೂರ್ತಿ ಹಲಗೇರಿ, ನೀಲಪ್ಪ ಮೂರಮನಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಸದಾನಂದ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಮಂಜುನಾಥ, ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಈಶ್ವರಯ್ಯ ಪೋಲಿಸ್ ಪಾಟೀಲ, ರಾಜಾ, ರಾಜಾಭಕ್ಷಿ, ಶ್ರೀಕಾಂತ,ಆಶಾ ಕಾರ್ಯಕರ್ತರು, ಶಾಲಾ ಮಕ್ಕಳು, ಶಿಕ್ಷಕರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್