ಯೋಗದಿಂದ ಕೈದಿಗಳಲ್ಲಿ ಮಾನಸಿಕ ಶಾಂತಿ, ಸಕಾರಾತ್ಮಕ ಚಿಂತನೆ : ಡಾ. ಎಂ.ಎಸ್. ಮಾಳಿ
ವಿಜಯಪುರ, 22 ಜೂನ್ (ಹಿ.ಸ.) : ಆ್ಯಂಕರ್ : ಯೋಗ ದಿನಾಚರಣೆ ಅಂಗವಾಗಿ ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಯೋಗ ಹಾಗೂ ಸುದರ್ಶನ ಕ್ರಿಯೆ ಶಿಬಿರವನ್ನು ಆಯೋಜಿಸಲಾಯಿತು. ವಿಜಯಪುರ ಆರ್ಟ್ ಆಫ್ ಲಿವಿಂಗ್ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದಲ್ಲಿ ಏಳು ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ಕಾರಾಗೃಹ ಸಿಬ್ಬಂದಿ
Yoga


ವಿಜಯಪುರ, 22 ಜೂನ್ (ಹಿ.ಸ.) :

ಆ್ಯಂಕರ್ : ಯೋಗ ದಿನಾಚರಣೆ ಅಂಗವಾಗಿ ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಯೋಗ ಹಾಗೂ ಸುದರ್ಶನ ಕ್ರಿಯೆ ಶಿಬಿರವನ್ನು ಆಯೋಜಿಸಲಾಯಿತು. ವಿಜಯಪುರ ಆರ್ಟ್ ಆಫ್ ಲಿವಿಂಗ್ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದಲ್ಲಿ ಏಳು ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ಕಾರಾಗೃಹ ಸಿಬ್ಬಂದಿ ಹಾಗೂ ಕೈದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

ಡಾ. ಬಿ.ಎಂ. ಪಾಟೀಲ್ ಗುರೂಜಿಯವರ ನೇತೃತ್ವದಲ್ಲಿ ನಡೆದ ಸಂತಸದ ಕಾರ್ಯಕ್ರಮ ಹಾಗೂ ಸುದರ್ಶನ ಕ್ರಿಯೆ ಶಿಬಿರದ ಅಂಗವಾಗಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಕಾರಾಗೃಹ ಅಧೀಕ್ಷಕ ಡಾ. ಎಂ.ಎಸ್. ಮಾಳಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಎಂ.ಎಸ್. ಮಾಳಿ, “ಮನುಷ್ಯ ಆರೋಗ್ಯದಿಂದ ಇರಲು ಮನಸ್ಸು ಶಾಂತವಾಗಿರಬೇಕು. ಮನಸ್ಸು ಶಾಂತವಾಗಿದ್ದರೆ ಮಾತ್ರ ಜೀವನದಲ್ಲಿ ಕ್ರಿಯಾಶೀಲತೆ ಹೆಚ್ಚುತ್ತದೆ ಹಾಗೂ ಸಮಾಜಕ್ಕೆ ಉತ್ತಮ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದೆ. ಇದನ್ನು ಯೋಗ ಮತ್ತು ಧ್ಯಾನದ ಮೂಲಕ ಸಾಧಿಸಬಹುದು” ಎಂದು ಹೇಳಿದರು.

ಜಿಲ್ಲಾ ಅಭಿವೃದ್ಧಿ ಸಮಿತಿ ಸದಸ್ಯ ಡಾ. ರವೀಂದ್ರ ಬೆಳ್ಳಿ ಮಾತನಾಡಿ, ಯೋಗವು ಮನುಷ್ಯನ ಮನಸ್ಸನ್ನು ಶಾಂತವಾಗಿಟ್ಟು ಪ್ರಸನ್ನಚಿತ್ತದಿಂದ ಇರಲು ಸಹಕಾರಿಯಾಗಿದೆ. ಕೋಪದ ಸಂದರ್ಭದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಅನೇಕ ಅನಾಹುತಗಳಿಗೆ ಕಾರಣವಾಗಬಹುದು. ಆದ್ದರಿಂದ ಪ್ರತಿಯೊಬ್ಬರೂ ಪ್ರತಿನಿತ್ಯ ಕನಿಷ್ಠ ಅರ್ಧ ಗಂಟೆಯಾದರೂ ಯೋಗ, ಪ್ರಾಣಾಯಾಮದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಾನಿಧ್ಯ ವಹಿಸಿದ್ದ ಡಾ. ಬಿ.ಎಂ. ಪಾಟೀಲ್ ಗುರೂಜಿ ಮಾತನಾಡಿ, ಮನುಷ್ಯನು ಸದಾ ಸಂತಸದಿಂದ ಇರಲು ಮನಸ್ಸು, ಬುದ್ಧಿ ಹಾಗೂ ಚಿಂತನೆಗಳು ಸಮಚಿತ್ತದಲ್ಲಿರಬೇಕು. ಧ್ಯಾನ, ಯೋಗ, ಪ್ರಾಣಾಯಾಮ ಮತ್ತು ಸುದರ್ಶನ ಕ್ರಿಯೆಯನ್ನು ನಿಯಮಿತವಾಗಿ ಮಾಡುವುದರಿಂದ ಯಾವುದೇ ಪರಿಸ್ಥಿತಿಯನ್ನು ಸಹನೆಯಿಂದ ಎದುರಿಸುವ ಶಕ್ತಿ ದೊರೆಯುತ್ತದೆ. ಈ ಶಿಬಿರದ ಮೂಲಕ ಕೈದಿಗಳು ಉತ್ತಮ ಜೀವನದತ್ತ ಸಾಗಲು ಪ್ರೇರಣೆ ಪಡೆಯಬೇಕು ಎಂದು ಹೇಳಿದರು.

ಮಹಿಳಾ ಬಂದಿಗಳಿಗೆ ಶಿಕ್ಷಕಿ ಸಹನಾ ಪಾಟೀಲ್ ಅವರು ಯೋಗ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಸಹಾಯಕ ಅಧೀಕ್ಷಕ ಅಭಿಜಿತ್ ಜಾಯಕ್ಕನವರ, ಜೈಲರ್ಗಳಾದ ಗೋಪಾಲ್ ಕುಲಕರ್ಣಿ, ಸವಿತಾ ಬೆಳ್ಳುಂಡಗಿ, ಭಾಗ್ಯಶ್ರೀ ಕೆ., ಡಿ.ಎಸ್. ದೀಕ್ಷಿತ್, ಆರ್ಟ್ ಆಫ್ ಲಿವಿಂಗ್ ಜಿಲ್ಲಾ ಅಭಿವೃದ್ಧಿ ಸಮಿತಿ ಸದಸ್ಯ ಪ್ರಕಾಶ್ ಚೌಹಾಣ್, ಸ್ವಯಂಸೇವಕರಾದ ಡಾ. ಎಸ್.ಜಿ. ಅಸ್ಕಿ, ಶೃತಿ ಪಾಟೀಲ್, ಗೋಪಾಲ್ ಪಾಟೀಲ್, ಲೋಕೇಶ್ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಯೋಗ ದಿನಾಚರಣೆಯಲ್ಲಿ 30ಕ್ಕೂ ಹೆಚ್ಚು ಕಾರಾಗೃಹ ಸಿಬ್ಬಂದಿ, 300ಕ್ಕೂ ಅಧಿಕ ಪುರುಷ ಬಂದಿಗಳು ಹಾಗೂ 30ಕ್ಕೂ ಹೆಚ್ಚು ಮಹಿಳಾ ಬಂದಿಗಳು ಪಾಲ್ಗೊಂಡು ಯೋಗಾಭ್ಯಾಸ ಮಾಡಿದರು

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande