ರಂಗಭೂಮಿ ಸೇವೆಗೆ ಹೇಮೇಶ್ವರರ ಕೊಡುಗೆ ಅಪಾರ : ಬಿ. ಸಿದ್ದಪ್ಪ
ಎಮ್ಮಿಗನೂರು, 22 ಜೂನ್ (ಹಿ.ಸ.) : ಆ್ಯಂಕರ್ : 12ನೇ ಯೋಗ ದಿನಾಚರಣೆ ಪ್ರಯುಕ್ತ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ (ರಿ)ಮಾವಿನಹಳ್ಳಿ ಟ್ರಸ್ಟ್ ವತಿಯಿಂದ ಜೂನ10 ರಿಂದ ಜೂನ್ 21ರವರೆಗೆ ಯೋಗ ತರಬೇತಿ ಮತ್ತು ಯೋಗ ದಿನಾಚರಣೆ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಎಮ್ಮಿಗನೂರು ಸರಕ
ರಂಗಭೂಮಿ ಸೇವೆಗೆ ಹೇಮೇಶ್ವರರ ಕೊಡುಗೆ ಅಪಾರ : ಬಿ. ಸಿದ್ದಪ್ಪ


ರಂಗಭೂಮಿ ಸೇವೆಗೆ ಹೇಮೇಶ್ವರರ ಕೊಡುಗೆ ಅಪಾರ : ಬಿ. ಸಿದ್ದಪ್ಪ


ರಂಗಭೂಮಿ ಸೇವೆಗೆ ಹೇಮೇಶ್ವರರ ಕೊಡುಗೆ ಅಪಾರ : ಬಿ. ಸಿದ್ದಪ್ಪ


ರಂಗಭೂಮಿ ಸೇವೆಗೆ ಹೇಮೇಶ್ವರರ ಕೊಡುಗೆ ಅಪಾರ : ಬಿ. ಸಿದ್ದಪ್ಪ


ರಂಗಭೂಮಿ ಸೇವೆಗೆ ಹೇಮೇಶ್ವರರ ಕೊಡುಗೆ ಅಪಾರ : ಬಿ. ಸಿದ್ದಪ್ಪ


ಎಮ್ಮಿಗನೂರು, 22 ಜೂನ್ (ಹಿ.ಸ.) :

ಆ್ಯಂಕರ್ : 12ನೇ ಯೋಗ ದಿನಾಚರಣೆ ಪ್ರಯುಕ್ತ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ (ರಿ)ಮಾವಿನಹಳ್ಳಿ ಟ್ರಸ್ಟ್ ವತಿಯಿಂದ ಜೂನ10 ರಿಂದ ಜೂನ್ 21ರವರೆಗೆ ಯೋಗ ತರಬೇತಿ ಮತ್ತು ಯೋಗ ದಿನಾಚರಣೆ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಎಮ್ಮಿಗನೂರು ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ವಸತಿ ನಿಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ರಂಗಭೂಮಿ ನಿರಂತರವಾಗಿ ಕಾರ್ಯಗತಗೊಳಿಸಲು ಹೇಮೇಶ್ವರ ಗ್ರಾಮೀಣ ಭಾಗದಲ್ಲಿ ಸಾಂಸ್ಕೃತಿಕ ಕಲೆಗಳನ್ನು ಬೆಳಸಲು ಮುಂದಾಗಿದ್ದಾರೆ. ಯಾವಾಗಲೂ ಗ್ರಾಮೀಣ ಭಾಗದ ಜನಪದ, ತತ್ವಪದಗಳು, ಭಾವಗೀತೆಗಳು, ಲಾವಣಿ ಪದಗಳು, ಬಯಲಾಟ, ನಾಟಕ,ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆ ಹೇಮೇಶ್ವರ ಎಂದು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟನಾ ಕಾರ್ಯಕ್ರಮ ನೇರವೇರಿಸಿದ ಭಜನೆ ಮತ್ತು ತತ್ವಪದಗಳು ಕಲಾವಿದರು ಬಿ.ಸಿದ್ದಪ್ಪನವರು ಉದ್ಘಾಟಕರ ನುಡಿಯನ್ನು ನುಡಿದರು.

ಇಂದಿನ ದಿನಗಳಲ್ಲಿ ಮಕ್ಕಳು ಕಲೆಗಳು ಪರಿಚಯ ಇಲ್ಲದೆ ಇರುವುದು ಕಂಡುಬರುತ್ತದೆ. ಅದಕ್ಕಾಗಿ ಗ್ರಾಮೀಣ ಭಾಗದಲ್ಲಿ ಇಂತಹ ಕಲೆಗಳನ್ನು ಬೆಳಿಸುವ ಕೆಲಸ ಸರಕಾರ ಮಾಡಬೇಕು ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರಂಗಭೂಮಿ ಕಲಾವಿದರಾದ ಜಿ.ಪಾಂಡುರಂಗ ಹೇಳಿದರು.

ರಂಗಭೂಮಿ ಚಿಕ್ಕ ವಯಸ್ಸಿನಲ್ಲಿ ಕಲೆಸುವ ಕೆಲಸ ಮನೆಯಲ್ಲಿ ತಂದೆ ತಾಯಿ ಮತ್ತು ಗುರುಗಳು ಮಾಡಬೇಕು ಅದಕ್ಕಾಗಿ ಸರ್ಕಾರ ಶಾಲೆಯಲ್ಲಿ ರಂಗಭೂಮಿ ಶಿಕ್ಷಕರು ನೇಮಕಾತಿ ಮಾಡುವುದರ ಮೂಲಕ ನಾಟಕ ಶಿಕ್ಷಕರ, ಸಂಗೀತ ಶಿಕ್ಷಕರ ಮತ್ತು ನೃತ್ಯ ಶಿಕ್ಷಕರ ನೇಮಕಗೊಳಿಸಿ ರಂಗಭೂಮಿ ಶಿಕ್ಷಣ ನೀಡಲು ಮುಂದಾಗಬೇಕೆಂದು ಮುಖ್ಯ ಅತಿಥಿಗಳಾಗಿ ಬಾಗವಹಿಸಿದ ರಂಗಭೂಮಿ ಕಲಾವಿದರಾದ ಡಿ.ಜಡೀಯಪ್ಪ ಹೇಳಿದರು.

ಯೋಗದಿಂದ ರೋಗ ಮುಕ್ತಿ ಎಲ್ಲರೂ ಪ್ರತಿದಿನ ಯೋಗ,ಧ್ಯಾನ ಕೈಗೊಂಡು ನಡೆಯಬೇಕು ನಮ್ಮ ಆರೋಗ್ಯ ದಿನ ದಿನ ಅನಾರೋಗ್ಯದ ಕಡೆ ಸರಿಯುತ್ತಿದೆ ಅದಕ್ಕಾಗಿ ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಸಧೃಡರಾಗಲು ಯೋಗವನ್ನು ಕೈಗೊಳ್ಳಬೇಕೆಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಆಯುಷ್ಮಾನ್ ಆರೋಗ್ಯ ಮಂದಿರ ಸಣಾಪುರದ ವೈದ್ಯರು ಡಾ.ಬಸವರಾಜ ಹೇಳಿದರು.

ಕಲೆ,ಸಾಹಿತ್ಯ, ಮತ್ತು ಯೋಗ ಈ ನಂಟು ಬೆಸೆಯುವ ಗಂಟು ಪ್ರತಿಯೊಬ್ಬರೂ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ನಮ್ಮ ಕುಟುಂಬದ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬಂತೆ ಪ್ರತಿದಿನ ನಾವು ಯೋಗ ಮತ್ತು ಧ್ಯಾನ ಕೈಗೊಂಡು ನಡೆಯಬೇಕು ನಾವು ಯೋಗ ಕಲಿತು ನಮ್ಮ ಮನೆಯಲ್ಲಿ ಇರುವ ಎಲ್ಲರೂ ಯೋಗ ಮಾಡಲು ಪ್ರೇರಪಿಸಬೇಕೆಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಆಯುಷ್ಮಾನ್ ಆರೋಗ್ಯ ಮಂದಿರ ಹಂಪಾದೇವನಹಳ್ಳಿ ವೈದ್ಯಾಧಿಕಾರಿಳು ಡಾ.ಪ್ರಲ್ಹಾದ ಆರ್. ಐಲಿಯವರು ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳು:- ತತ್ವಪದಗಳು:- ಸದಾಶಿವ ಗೌಡ.ಬಿ ಮತ್ತು ತಂಡದವರು ಎಮ್ಮಿಗನೂರು. ಯೋಗ ನೃತ್ಯ ಕಗ್ಗಲ್ ಲೋಕಣ್ಣ ಮತ್ತು ತಂಡದವರು ಕುರುಗೋಡು. ಹಾಗೂ ಸಮೂಹ ನೃತ್ಯ :- ಹೆಚ್. ಲೋಕರಾಜ್ ಮತ್ತು ತಂಡದವರು ಕುರುಗೋಡು ನೇರವೇರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದವರು:- ಬಯಲಾಟ ಮತ್ತು ರಂಗಭೂಮಿ ಕಲಾವಿದರು ಬಿ. ಸಿದ್ದಪ್ಪ ಧರ್ಮಪ್ಪ ಮಾವಿನಹಳ್ಳಿ,ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಕಿರಿಯ ಮೇಲ್ವಿಚಾರಕ ಮಾರೇಶ, ತತ್ವಪದಗಳು ಕಲಾವಿದರಗಳು ಶರಣ, ಸ್ವಾಮಯ್ಯ,ಬೆಳಗೋಡು ತಿಪ್ಪೇಶ, ಶಂಕರಪ್ಪ, ಚಾನಾಳ ಈರಣ್ಣ, ಬಸವ, ಹಳೆಮನೆ ವಿರೇಶ, ಪಕ್ಕೀರಪ್ಪ, ಜಡೇಶ, ಸಾಧಕಲಿ, ಹೊನ್ನುರಸಾಬ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರಾಟೆ ಮತ್ತು ಸಮಾಜ ಸೇವಕ ಹೆಚ್ ಪೀರಾವಲಿ, ಸಿದ್ದಶಂಕರ, ಪಾರ್ಥಕುಮಾರ್, ಸಿದ್ದಾರ್ಥ ಪ್ರಸಾದ್, ಕು.ಕಾವ್ಯಾಂಜಲಿ, ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್(ರಿ) ಅಧ್ಯಕ್ಷ ಗುರುಮಹಾಂತೇಶ. ಬಿ ಕಾರ್ಯದರ್ಶಿ ಹೇಮೇಶ್ವರ, ಖಜಾಂಚಿ ಕೆ. ಹಿಮಂತರಾಜ ನಿರೂಪಣೆ ಕುರುಬರ ಹೇಮೇಶ್ವರ, ಸ್ವಾಗತ ಹೆಚ್.ಪೀರಾವಲಿ, ಗುರು ಮಹಾಂತೇಶ ಬಿ ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande