ರಸ್ತೆ ಅಪಘಾತದಲ್ಲಿ ಕಾಂಗ್ರೆಸ್ ಕಟ್ಟಾಳು ವೀರಸೇನಾ ರೆಡ್ಡಿ ನಿಧನ
ಇದ್ದಾರೆ
ರಸ್ತೆ ಅಪಘಾತದಲ್ಲಿ ಕಾಂಗ್ರೆಸ್ ಕಟ್ಟಾಳು ವೀರಸೇನಾ ರೆಡ್ಡಿ ನಿಧನ


ಬಳ್ಳಾರಿ, 22 ಜೂನ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಮುಖಂಡ, ವಣೇನೂರು ಗ್ರಾಮ ನಿವಾಸಿ, ಗುತ್ತಿಗೆದಾರ ವಿರಸೇನಾರೆಡ್ಡಿ (58) ಅವರು ಹೊಸ ಮೋಕಾದ ಸಮೀಪದ ಸೋಮವಾರ ಮಧ್ಯಾಹ್ನ 3.30ರ ಸುಮಾರಿಗೆ ಆಟೋ - ದ್ವಿಚಕ್ರ ವಾಹನ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಮೃತರಿಗೆ ಪತ್ನಿ, ಪುತ್ರ - ಪುತ್ರ, ತಾಯಿ - ಸಹೋದರ ಇದ್ದಾರೆ.

ವೀರಸೇನಾ ರೆಡ್ಡಿ ಅವರು ಬಳ್ಳಾರಿಯಿಂದ ವಣೇನೂರು ಗ್ರಾಮಕ್ಕೆ ಹೋಗುವಾಗ ಹೊಸ ಮೋಕಾದ ಕ್ರಾಸ್ ಬಳಿ ಎದುರುಗಡೆಯಿಂದ ಬಂದ ಆಟೋ ವೇಗವಾಗಿ ಬಂದು ಡಿಕ್ಕಿ ಹೊಡೆದ ಕಾರಣ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರ ಅಂತ್ಯಕ್ರಿಯೆಯು ವಣೇನೂರು ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ನೆರವೇರಲಿದೆ.

ಮೃತರ ಆತ್ಮಕ್ಕೆ ಶಾಂತಿ ಕೋರಿ ಕಾಂಗ್ರೆಸ್ಸಿಗರು ಸಂತಾಪ ಸೂಚಿಸಿದ್ದಾರೆ.

ವಿವರಗಳಿಗಾಗಿ : ಶ್ರೀನಿವಾಸ್, ಗೆಳೆಯರು, 9535975760 ಗೆ ಕರೆ ಮಾಡಿರಿ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande