ಮುನಿರಾಬಾದ್ : ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ
ಕೊಪ್ಪಳ, 21 ಜೂನ್ (ಹಿ.ಸ.) : ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಕೊಪ್ಪಳ ಹಾಗೂ ತೋಟಗಾರಿಕೆ ಮಹಾವಿದ್ಯಾಲಯ ಮುನಿರಾಬಾದ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಎನ್.ಎಸ್.ಎಸ್ ಘಟಕ, ರೆಡ್ ರ
ಮುನಿರಾಬಾದ್ : ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ


ಕೊಪ್ಪಳ, 21 ಜೂನ್ (ಹಿ.ಸ.) :

ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಕೊಪ್ಪಳ ಹಾಗೂ ತೋಟಗಾರಿಕೆ ಮಹಾವಿದ್ಯಾಲಯ ಮುನಿರಾಬಾದ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಎನ್.ಎಸ್.ಎಸ್ ಘಟಕ, ರೆಡ್ ರಿಬ್ಬನ್ ಕ್ಲಬ್ ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ-2026ರ ಕಾರ್ಯಕ್ರಮವನ್ನು ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಆಚರಿಸಲಾಯಿತು.

ಮೊದಲಿಗೆ ಮೊಬೈಲೈಶೇಷನ್ ಫಾರ್ ಏಡ್ಸ್ ಸುರಕ್ಷಾದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು ಹಾಗೂ ಮೊಬೈಲೈಶೇಷನ್ ಫಾರ್ ಏಡ್ಸ್ ಸುರಕ್ಷಾದ ಕ್ಯೂ.ಆರ್ ಕೋಡ್ ಹಾಗೂ ಸ್ವಯಂ ಪ್ರೇರಿತ ರಕ್ತದಾನದ ಶಿಬಿರಕ್ಕೆ ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಜಿ.ಪ್ರಭುಲಿಂಗ ಅವರು ಚಾಲನೆ ನೀಡಿದರು.

ಕೊಪ್ಪಳ ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿಗಳಾದ ಡಾ. ಎ.ಶಶಿಧರ ಅವರು ವೇದಿಕೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಬಳಿಕ ಮಾತನಾಡಿ, ರಕ್ತದಾನದ ಮಹತ್ವ, ಜೊತೆಗೆ ಮೂರು ಜನರಿಗೆ ಉಪಯೋಗದ ಬಗ್ಗೆ ಹೋಲ್ ಬ್ಲಡ್, ಪ್ಲಾಸ್ಮಾ ಹಾಗೂ ಪ್ಲೇಟ್ಲೇಟ್, ರಕ್ತ ದಾನದ ನಂತರ ಹೆಚ್ ಐವಿ ಸಿಫಿಲಿಸ್ ಹೆಬಟೈಟಿಸ್ ಬಿ ಕುರಿತು ಮಾಹಿತಿ ನೀಡಿದರು.

ಕಮ್ಯುನಿಕೇಷನ್ ಡಿಸೀಜ್ ಹಾಗೂ ನಾನ್ ಕಮ್ಯುನಿಕೇಷನ್ ಡಿಸೀಜ್ ಕುರಿತು ವಿವರವಾಗಿ ತಿಳಿಸಿ, ಸಾಮಾಜಿಕ ಜಾಲತಾಣಗಳ ಹೆಚ್ಚು ಬಳಕೆಯಿಂದ ಹೆಚ್.ಐವಿ, ಕ್ಯಾನ್ಸರ್, ಮಧುಮೇಹ ಮತ್ತು ಬಿಪಿ ಸ್ಟ್ರೋಕ್ ಜೊತೆಗೆ ಡ್ರಗ್ಸ್ ಹವ್ಯಾಸ ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಮೌಲಸಾಬ ಅವರು ವಹಿಸಿಕೊಂಡಿದ್ದರು.

ರಕ್ತ ದಾನ ಶಿಬಿರದಲ್ಲಿ ಒಟ್ಟು 31 ಯೂನಿಟ್ಗಳನ್ನು ಸಂಗ್ರಹಿಸಲಾಯಿತು ಅದೇ ಕಅಲೇಜಿನ ಡಾ.ಅರುಣಕುಮಾರ ಕೆ.ಟಿ ಸಹ ಪ್ರಾದ್ಯಾಪಕರು ಅತಿ ಹೆಚ್ಚು 16 ಬಾರಿ ರಕ್ತದಾನ ಮಾಡಿರುವ ಪ್ರಯುಕ್ತ ಹಾಗೂ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿರುವ ದಾನಿಗಳನ್ನು ಗೌರವಿಸಲಾಯಿತು. ಇದೇ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಜಿಲ್ಲಾ ಮೇಲ್ವೀಚಾರಕರಾದ ಮಾಲತೇಶ ಸಜ್ಜನ, ಆಪ್ತಸಮಾಲೋಚರಾದ ಚಿದಾನಂದ ಇಂಡಿ ಸಹ ಪ್ರಾದ್ಯಾಪಕರಾದ ಡಾ. ಅರುಣಕುಮಾರ ಕೆ.ಟಿ. ಹಾಗೂ ಡಾ ಶಶಿಧರ ಚವ್ಹಾಣ, ವೈದ್ಯಾದಿಕಾರಿಗಳಾದ ಡಾ ಮಂಜುನಾಥ ದಿನ್ನಿ, ಡಾ ಕೃಷ್ಣ ಯಾದವ್ ಸೇರಿದಂತೆ ಎನ್.ಎಸ್.ಎಸ್ ಪ್ರೊಗ್ರಾಮ ಆಫೀಸರ್, ದೈಹಿಕ ಶಿಕ್ಷಕರು, ಯುಥ್ ರೆಡ್ ಕ್ರಾಸ್ ಯುನಿಟ್ ಕೋಆರ್ಡಿನೆಟರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande