ಕುಷ್ಟಗಿ : ಬೆಳೆ ವಿಮೆಗೆ ನೋಂದಾಯಿಸಲು ರೈತರಿಗೆ ಸೂಚನೆ
ಕುಷ್ಟಗಿ, 21 ಜೂನ್ (ಹಿ.ಸ.) : ಆ್ಯಂಕರ್ : 2026-27 ನೇ ಸಾಲಿನ ಮುಂಗಾರು ಹಂಗಾಮಿಗೆ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು ತಾಲೂಕ ರೈತರಿಗೆ ಸರ್ಕಾರವು ಘೋಷಿಸಿದೆ, ದಾಳಿಂಬೆ ಹಾಗೂ ಮಾವು ಬೆಳೆಗೆ ಹಾಗೂ ಹೋಬಳಿಗಳ ಆಯ್ದ ಗ್ರಾಮ ಪಂಚಾಯತಗಳನ್ನು ಈ ವಿಮೆ ಯೋಜನೆಯ ವ್ಯಾಪ್ತಿಗೆ ಒಳ
ಕುಷ್ಟಗಿ : ಬೆಳೆ ವಿಮೆಗೆ ನೋಂದಾಯಿಸಲು ರೈತರಿಗೆ ಸೂಚನೆ


ಕುಷ್ಟಗಿ, 21 ಜೂನ್ (ಹಿ.ಸ.) :

ಆ್ಯಂಕರ್ : 2026-27 ನೇ ಸಾಲಿನ ಮುಂಗಾರು ಹಂಗಾಮಿಗೆ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು ತಾಲೂಕ ರೈತರಿಗೆ ಸರ್ಕಾರವು ಘೋಷಿಸಿದೆ, ದಾಳಿಂಬೆ ಹಾಗೂ ಮಾವು ಬೆಳೆಗೆ ಹಾಗೂ ಹೋಬಳಿಗಳ ಆಯ್ದ ಗ್ರಾಮ ಪಂಚಾಯತಗಳನ್ನು ಈ ವಿಮೆ ಯೋಜನೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ಕುಷ್ಟಗಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶಿವಯೋಗಪ್ಪ ತಿಳಿಸಿದ್ದಾರೆ.

ವಿಮೆ ಕಂತಿಗೆ ಸಂಬಂಧಪಟ್ಟಂತೆ ದಾಳಿಂಬೆ ಬೆಳೆಗೆ ರೂ.6,385 ಪ್ರತಿ ಹೆಕ್ಟೇರ್ ಗೆ ಹಾಗೂ ಮಾವು ಬೆಳೆಗೆ ರೂ. 4,000 ಪ್ರತಿ ಹೆಕ್ಟೇರ್ ಗೆ ರೈತರು ತಮ್ಮ ವಿಮೆ ಕಂತಿನ ಮೊತ್ತವನ್ನು ಪಾವತಿಸಬೇಕಾಗಿರುತ್ತದೆ. ವಿಮಾ ಕಂತನ್ನು ಜೂನ್ 30 ರೊಳಗೆ ಪಾವತಿಸಬೇಕು. ಈ ಯೋಜನೆ ಅಡಿ ನೋದಾಯಿಸಿಕೊಳ್ಳಲು ಫ್ರೂಟ್ಸ್ ಐಡಿ ಹೊಂದಿರಬೇಕು. ರೈತರು ಹತ್ತಿರದ ಬ್ಯಾಂಕುಗಳಿಗೆ ಅಥವಾ ಸಾಮಾನ್ಯ ಸೇವಾ ಕೇಂದ್ರ (ಸಿಎಸ್ಸಿ)ಗಳಿಗೆ ಭೇಟಿ ನೀಡಿ ರೈತರು ಯೋಜನೆಯ ಸದುಪಯೋಗ ಪಡೆಯಬಹುದು.

ಈ ಕುರಿತ ಮಾಹಿತಿಯನ್ನು ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ ಕಛೇರಿಯಲ್ಲಿ ಹಾಗೂ ತಾಲೂಕು ತೋಟಗಾರಿಕೆ ಕಛೇರಿಯ ಸೂಚನಾಫಲಕದಲ್ಲಿ ಪ್ರರ್ದಶಿಸಲಾಗಿದೆ. ಹಾಗೂ ಸುನೀಲಕುಮಾರ, ಸಹಾಯಕ ತೋಟಗಾರಿಕೆ ಅಧಿಕಾರಿ (ರೈ.ಸಂಕೇ), ಕುಷ್ಟಗಿ ಮೊ.ಸಂ: 8951860236, ಮಹಮ್ಮದ್ ತೌಫಿಕ್, ಸಹಾಯಕ ತೋಟಗಾರಿಕೆ ಅಧಿಕಾರಿ (ರೈ.ಸಂ.ಕೇ), ತಾವರಗೇರಾ, ಮೊ.ಸಂ: 9060550146, ವಿನಯಕುಮಾರ ಬೇವಿನಮರದ, ಸಹಾಯಕ ತೋಟಗಾರಿಕೆ ಅಧಿಕಾರಿ (ರೈ.ಸಂ.ಕೇ) ಹನಮಸಾಗರ, ಮೊ.ಸಂ: 9035195783, ಶಿವಪ್ಪ ಶಾಂತಗೇರಿ, ಸಹಾಯಕ ತೋಟಗಾರಿಕೆ ಅಧಿಕಾರಿ(ರೆ.ಸಂ.ಕೇ) ಹನಮನಾಳ, ಮೊ.ಸಂ: 9740084555 ಇವರನ್ನು ಸಂಪರ್ಕಿಸಬಹುದು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande