ಕೊಪ್ಪಳ : ಅಲ್ಪಸಂಖ್ಯಾತರ ಮಹಿಳಾ ಪಿಯು ಕಾಲೇಜಿಗೆ ಬಾಡಿಗೆ ಕಟ್ಟಡ
ಕೊಪ್ಪಳ, 21 ಜೂನ್ (ಹಿ.ಸ.) : ಆ್ಯಂಕರ್ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದ ಅಲ್ಪಸಂಖ್ಯಾತರ ಮಹಿಳಾ ಪದವಿ ಪೂರ್ವ ಕಾಲೇಜಿಗೆ ಕೊಪ್ಪಳದಲ್ಲಿ ಬಾಡಿಗೆ ಕಟ್ಟಡದ ಅವಶ್ಯಕವಾಗಿದ್ದು, ಆಸಕ್ತ ಕಟ್ಟಡ ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಕೊಪ್ಪಳ ನಗರಕ್ಕೆ ಹೊಸದಾಗಿ ಅಲ್ಪಸಂಖ್ಯಾತರ ಮಹಿಳಾ ಪದವಿ ಪೂರ
ಕೊಪ್ಪಳ : ಅಲ್ಪಸಂಖ್ಯಾತರ ಮಹಿಳಾ ಪಿಯು ಕಾಲೇಜಿಗೆ ಬಾಡಿಗೆ ಕಟ್ಟಡ


ಕೊಪ್ಪಳ, 21 ಜೂನ್ (ಹಿ.ಸ.) :

ಆ್ಯಂಕರ್ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದ ಅಲ್ಪಸಂಖ್ಯಾತರ ಮಹಿಳಾ ಪದವಿ ಪೂರ್ವ ಕಾಲೇಜಿಗೆ ಕೊಪ್ಪಳದಲ್ಲಿ ಬಾಡಿಗೆ ಕಟ್ಟಡದ ಅವಶ್ಯಕವಾಗಿದ್ದು, ಆಸಕ್ತ ಕಟ್ಟಡ ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಕೊಪ್ಪಳ ನಗರಕ್ಕೆ ಹೊಸದಾಗಿ ಅಲ್ಪಸಂಖ್ಯಾತರ ಮಹಿಳಾ ಪದವಿ ಪೂರ್ವ (ವಿಜ್ಞಾನ, ವಾಣಿಜ್ಯ & ಕಲಾ ವಿಭಾಗ) ಕಾಲೇಜು ಮಂಜೂರು ಮಾಡಿ ಸರ್ಕಾರವು ಆದೇಶಿಸಿದ್ದು, ಈ ಕಾಲೇಜನ್ನು ಪ್ರಸ್ತುತ ಶೈಕ್ಷಣಿಕ ಸಾಲಿನಿಂದ ಪ್ರಾರಂಭಿಸಬೇಕಾಗಿರುತ್ತದೆ. ಹಾಗಾಗಿ ಈ ಕಾಲೇಜಿಗೆ 10 ಕೊಠಡಿಗಳು ಹಾಗೂ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿರುವ ಕಟ್ಟಡವನ್ನು ಬಾಡಿಗೆ ರೂಪದಲ್ಲಿ ನೀಡಲಿಚ್ಛೀಸುವ ಆಸಕ್ತ ಕಟ್ಟಡ ಮಾಲೀಕರು, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಆಜಾದ್ ಭವನ ಹೊಸಪೇಟ್ ರಸ್ತೆ ಕೊಪ್ಪಳ, ಇಲ್ಲಿಗೆ ಜೂನ್ 30 ರೊಳಗಾಗಿ ಕಛೇರಿ ಸಮಯದಲ್ಲಿ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು, ಅಲ್ಪಸಂಖ್ಯಾತರ ಮಹಿಳಾ ಪದವಿ ಪೂರ್ವ ಕಾಲೇಜು, ಕೊಪ್ಪಳ ಮೊ.ಸಂ: 9902573068 ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಕಾರ್ಯಾಲಯ, ಮೌಲಾನಾ ಆಜಾದ್ ಭವನ ಕೊಪ್ಪಳ ಕಛೇರಿ ದೂರವಾಣಿ: 08539-225070 ಗೆ ಸಂಪರ್ಕಿಸುವಂತೆ ಕೊಪ್ಪಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಜ್ಮೀರ್ ಅಲಿ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande