
ಕೊಪ್ಪಳ, 21 ಜೂನ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪವಿಭಾಗ ವ್ಯಾಪ್ತಿಯ 110ಕೆವಿ ಕೊಪ್ಪಳ ಉಪಕೇಂದ್ರಕ್ಕೆ ಸಂಬಂಧಿಸಿದಂತೆ 11ಕೆವಿ ಮಾರ್ಗಗಳ ಕಾಮಗಾರಿಯ ನಿಮಿತ್ತ ಜೂ. 23 ರಂದು ಭಾಗ್ಯನಗರ ಮತ್ತು ಕಾಳಿದಾಸನಗರ ಫೀಡರ್ಗಳ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಎಫ್-8 ಭಾಗ್ಯನಗರ ಫೀಡರ್ಗೆ ಒಳಪಡುವ ಗಣೇಶ ನಗರ, ಕೆ.ಹೆಚ್.ಬಿ ಕಾಲೋನಿ, ಗುಪ್ತಾ ಅಪಾರ್ಟಮೆಂಟ್, ಧನವಂತರಿ ಕಾಲೋನಿ, ಕೀರ್ತಿ ಕಾಲೋನಿ, ಪದ್ಮಾವತಿ ಕಾಲೋನಿ, ಅಡವಿ ಅಂಜನೇಯ ಏರಿಯಾ, ಶಾಸ್ತ್ರಿ ಕಾಲೋನಿ, ಶಿವಗಂಗಾ ಲೇಔಟ್, ಸಾಯಿ ಬಾಬ ಗುಡಿ ಹಿಂದುಗಡೆ, ನವನಗರ, ಓಜನಹಳ್ಳಿ ರಸ್ತೆ, ಶ್ರೀರಾಮ ಕಾಲೋನಿ, ಮತ್ತು ಹಳೆ ಭಾಗ್ಯನಗರ ಏರಿಯಾಗಳಲ್ಲಿ ಹಾಗೂ ಎಫ್-13 ಕಾಳಿದಾಸನಗರ ಫೀಡರ್ಗೆ ಒಳಪಡುವ ಕಾಳಿದಾಸ ನಗರ, ಸಿದ್ದೇಶ್ವರ ನಗರ, ಪದಕಿ ಟೌನ್ಶಿಪ್, ತಾಲೇಡಾ ಲೇಔಟ್, ಪುರದ ಲೇಔಟ್, ಶಿವಶಾಂತವೀರ ಕಲ್ಯಾಣ ಮಂಟಪ ಮತ್ತು ಕಿನ್ನಾಳ ರಸ್ತೆಯ ಎಲ್ಲಾ ಮಾರ್ಗಗಳಲ್ಲಿ ಜೂ. 23ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ಕಾಮಗಾರಿ ಕೆಲಸವು ಬೇಗನೆ ಮುಕ್ತಾಯಗೊಂಡಲ್ಲಿ, ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ-ಕಾರ್ಯಗಳನ್ನು ಮಾಡಬಾರದೆಂದು ಈ ಮೂಲಕ ಸೂಚಿಸಲಾಗಿದೆ. ಒಂದು ವೇಳೆ ವಿದ್ಯುತ್ ಅಫಘಾತ ಸಂಬವಿಸಿದ್ದಲ್ಲಿ ಕಂಪನಿಯು ಜವಬ್ದಾರರಾಗಿರುವುದಿಲ್ಲ ಎಂದು ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್