ಟಿಬಿ ಡ್ಯಾಮಗೆ ಹೊಸ ಗೇಟಗಳ ಅಳವಡಿಕೆ ಕಾಮಗಾರಿ ಪೂರ್ಣ
ಕೊಪ್ಪಳ, 19 ಜೂನ್ (ಹಿ.ಸ.) : ಆ್ಯಂಕರ್ : ರಾಜ್ಯ ಜಲ ಸಂಪನ್ಮೂಲ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಪೂರ್ವ ನಿಗದಿಯಂತೆ ಕೊಪ್ಪಳ ಜಿಲ್ಲೆಗೆ ಆಗಮಿಸಿ, ತುಂಗಭದ್ರಾ ಜಲಾಶಯಕ್ಕೆ ಹೊಸದಾಗಿ ಅಳವಡಿಸಿದ ಕ್ರಸ್ಟ್ ಗೇಟಗಳ ಉದ್ಘಾಟನಾ ಕಾರ್ಯಕ್ರಮದ ಸ್ಥಳ ಪರಿಶೀಲಿಸಿದರು. ಜೂನ್ 25ಕ್ಕೆ ನಿಗದಿಯಾದ ಮಾನ್ಯ ಮುಖ್
Installation of new gates for TB Dam complete


Installation of new gates for TB Dam complete


ಕೊಪ್ಪಳ, 19 ಜೂನ್ (ಹಿ.ಸ.) :

ಆ್ಯಂಕರ್ : ರಾಜ್ಯ ಜಲ ಸಂಪನ್ಮೂಲ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಪೂರ್ವ ನಿಗದಿಯಂತೆ ಕೊಪ್ಪಳ ಜಿಲ್ಲೆಗೆ ಆಗಮಿಸಿ, ತುಂಗಭದ್ರಾ ಜಲಾಶಯಕ್ಕೆ ಹೊಸದಾಗಿ ಅಳವಡಿಸಿದ ಕ್ರಸ್ಟ್ ಗೇಟಗಳ ಉದ್ಘಾಟನಾ ಕಾರ್ಯಕ್ರಮದ ಸ್ಥಳ ಪರಿಶೀಲಿಸಿದರು.

ಜೂನ್ 25ಕ್ಕೆ ನಿಗದಿಯಾದ ಮಾನ್ಯ ಮುಖ್ಯಮಂತ್ರಿಗಳ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮುನಿರಾಬಾದ್ ಗ್ರಾಮದ ಹೈಸ್ಕೂಲ್ ಗ್ರೌಂಡ್ ಆವರಣದ ಸ್ಥಳ ವೀಕ್ಷಣೆ ನಡೆಸಿ, ಸುಗಮ ಸಂಚಾರಕ್ಕೆ ಸೂಕ್ತವಾದ ರಸ್ತೆ, ಬ್ಯಾರಿಕೇಡ್ ಅಳವಡಿಕೆ ಸೇರಿದಂತೆ ನಾನಾ ಸಿದ್ಧತೆಗಳ ಬಗ್ಗೆ ಸೂಚನೆ ನೀಡಿದರು. ಟಿಬಿ ಡ್ಯಾಮ್ ಆವರಣದಿಂದ ಮುನಿರಾಬಾದ್ ಶಾಲಾ ಮೈದಾನಕ್ಕೆ ಬಂದು ಹೋಗಲು ಅನುಕೂಲವಾಗುವಂತೆ ಯಾವ ರಸ್ತೆ ಸೂಕ್ತ ಎಂಬುದರ ಬಗ್ಗೆ ನೋಡಿಕೊಳ್ಳಲು ಸಚಿವರು ತಿಳಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮುಖ್ಯಮಂತ್ರಿಗಳು ಮತ್ತು ತಾವು ಕೇಂದ್ರದ ಜಲ ಸಂಪನ್ಮೂಲ ಸಚಿವರಿಗೆ ಭೇಟಿ ಮಾಡಿ ಮಹಾದಾಯಿ, ಮೇಕೆದಾಟು ಯೋಜನೆ ಸೇರಿದಂತೆ ರಾಜ್ಯದ ನಾನಾ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಿದ್ದೇವೆ.

ಕಳೆದ ವರ್ಷ ತುಂಗಭದ್ರಾ ಡ್ಯಾಮನ ಗೇಟ್ ಕೊಚ್ಚಿ ಹೋದಾಗ 19ನೇ ಕ್ರಸ್ಟ್ ಗೇಟ್ ಸೇರಿದಂತೆ ಬೇರೆಲ್ಲ ಗೇಟಗಳನ್ನು ಬದಲಾಯಿಸಲು ನಿರ್ಣಯಿಸಿ ಆರಂಭಗೊಂಡ ಕಾಮಗಾರಿ ಈಗ ಪೂರ್ಣಗೊಂಡಿದೆ. ಇದಕ್ಕಾಗಿ 51 ಕೋಟಿ ರೂ ಖರ್ಚಾಗಿದೆ. ಈ ಗೇಟಗಳು 55 ರಿಂದ 60 ವರ್ಷಗಳವರೆಗೆ ಬಾಳಿಕೆ ಬರುತ್ತವೆ ಎಂದು ತಿಳಿಸಿದರು.

ಹೊಸ ಗೇಟಗಳ ಲೋಕಾರ್ಪಣೆ ಸಮಾರಂಭಕ್ಕೆ ಕರ್ನಾಟಕ ಸೇರಿದಂತೆ ತೆಲಂಗಾಣ ಮತ್ತು ಆಂದ್ರ ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಆಗಮಿಸಲಿದ್ದಾರೆ.

ಈ ವೇಳೆ ಆಂಧ್ರಪ್ರದೇಶ ಮತ್ತು ತೆಲಂಗಾಣ ಸಿಎಂ ಮತ್ತು ಸಚಿವರೊಂದಿಗೆ ಮಾತುಕತೆಗೆ ಏರ್ಪಾಡು ಮಾಡಿ ಜಲಾಶಯದ ನೀರಿನ ಹಂಚಿಕೆ ಸೇರಿದಂತೆ ನಾನಾ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತೇವೆ.

ನವಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ನಾವು ಬದ್ದರಾಗಿದ್ದು ಮೂರು ರಾಜ್ಯಗಳ ಸಿಎಂ ಮತ್ತು ಸಚಿವರು ಒಂದೆಡೆ ಸೇರಿ ಚರ್ಚಿಸಿ ನಿರ್ಣಯಿಸಲು ಇದು ಸಕಾಲವಾಗಿದೆ ಎಂದು ತಿಳಿಸಿದರು. ಮೂರು ರಾಜ್ಯಗಳ ಸಿಎಂ ಮತ್ತು ಸಚಿವರ ಈ ಸಭೆಯಲ್ಲಿ ಮಹತ್ವದ ಪ್ರಸ್ತಾವಣೆಗಳ ಬಗ್ಗೆ ಚರ್ಚಿಸುತ್ತೇವೆ ಎಂದರು.

ಕರ್ನಾಟಕ, ತೆಲಂಗಾಣ ಮತ್ತು ಆಂದ್ರಪ್ರದೇಶ ಮೂರು ರಾಜ್ಯಗಳಿಗೆ ಸಂಬಂಧಿಸಿದಂತೆ ಅಂತಾರಾಜ್ಯ ನದಿ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಇದು ಸಕಾಲ. ಈ ಭಾಗ ಸೇರಿದಂತೆ ಯಾವುದೇ ಭಾಗದ ಜನತೆಗೆ ಅನ್ಯಾಯ ಆಗೋಕೆ ಬೀಡುವುದಿಲ್ಲ ಎಂದು ಸಚಿವರು ಹೇಳಿದರು.

ಈ ವೇಳೆ ಸಂಸದರಾದ ಕೆ ರಾಜಶೇಖರ ಹಿಟ್ನಾಳ, ಮುಖಂಡರಾದ ಅಮರೇಶ ಕರಡಿ, ಬಳ್ಳಾರಿ ವಲಯದ ಐಜಿಪಿ ಡಾ.ಪಿ ಎಸ್ ಹರ್ಷ, ಕೊಪ್ಪಳ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಡಾ.ರಾಮ್ ಎಲ್ ಅರಸಿದ್ದಿ, ಹೆಚ್ಚುವರಿ ಪೆÇಲೀಸ್ ವರಿμÁ್ಠಧಿಕಾರಿ ಹೇಮಂತಕುಮಾರ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಹಾಗೂ ಇತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande