ಆದರ್ಶ ಶಿಕ್ಷಕರ ಗುಣಗಳನ್ನು ಬಿಂಬಿಸಿದ ಪ್ರಧಾನಿ ಮೋದಿ
ನವದೆಹಲಿ, 01 ಜೂನ್ (ಹಿ.ಸ.) : ಆ್ಯಂಕರ್ : ಉತ್ತಮ ಶಿಕ್ಷಕನಿಗೆ ಇರಬೇಕಾದ ಗುಣಗಳನ್ನು ಬಿಂಬಿಸುವ ಸಂಸ್ಕೃತ ಸುಭಾಷಿತವೊಂದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಯಾವುದೇ ವಿಷಯದಲ್ಲಿ ಪರಿಣತಿ ಹೊಂದುವುದರ ಜೊತೆಗೆ ಅದನ್ನು ಪರಿಣಾಮಕಾರಿಯಾಗಿ ಇತರರಿಗೆ ಬೋಧಿಸುವ
Pm


ನವದೆಹಲಿ, 01 ಜೂನ್ (ಹಿ.ಸ.) :

ಆ್ಯಂಕರ್ : ಉತ್ತಮ ಶಿಕ್ಷಕನಿಗೆ ಇರಬೇಕಾದ ಗುಣಗಳನ್ನು ಬಿಂಬಿಸುವ ಸಂಸ್ಕೃತ ಸುಭಾಷಿತವೊಂದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಯಾವುದೇ ವಿಷಯದಲ್ಲಿ ಪರಿಣತಿ ಹೊಂದುವುದರ ಜೊತೆಗೆ ಅದನ್ನು ಪರಿಣಾಮಕಾರಿಯಾಗಿ ಇತರರಿಗೆ ಬೋಧಿಸುವ ಸಾಮರ್ಥ್ಯವಿರುವ ವ್ಯಕ್ತಿಯೇ ಶ್ರೇಷ್ಠ ಶಿಕ್ಷಕನೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಎಕ್ಸ್ ಖಾತೆಯಲ್ಲಿ ಪ್ರಧಾನಿ ಮೋದಿ ಅವರು ಈ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ.

ಶ್ಲಿಷ್ಟ ಕ್ರಿಯಾ ಕಸ್ಯಚಿದಾತ್ಮಾ ಸಂಸ್ಥಾ ಸಂಕ್ರಾಂತಿರಣ್ಯಸ್ಯ ವಿಶೇಷಯುಕ್ತ. ಯಶೋಭಯಂ ಸಾಧು ಸ ಶಿಕ್ಷಣಂ ಧುರೀ ಪ್ರತಿಷ್ಠಾಪಯತ್ಯವ್ಯ ಏವ..”

ಈ ಸುಭಾಷಿತದ ಅರ್ಥವನ್ನು ವಿವರಿಸಿದ ಪ್ರಧಾನಿ, ಕೆಲವರು ಯಾವುದೇ ಕಾರ್ಯವನ್ನು ತಾವೇ ಅತ್ಯಂತ ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಮತ್ತೊಂದೆಡೆ, ಕೆಲವು ವ್ಯಕ್ತಿಗಳು ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ಇತರರಿಗೆ ಪರಿಣಾಮಕಾರಿಯಾಗಿ ಬೋಧಿಸುವಲ್ಲಿ ನಿಪುಣರಾಗಿರುತ್ತಾರೆ ಎಂದು ತಿಳಿಸಿದ್ದಾರೆ.

ಆದರೆ ಆತ್ಮನಿಯಂತ್ರಣ, ವಿಷಯದ ಮೇಲಿನ ಪಾಂಡಿತ್ಯ ಹಾಗೂ ಅದನ್ನು ಇತರರಿಗೆ ಯಶಸ್ವಿಯಾಗಿ ಕಲಿಸುವ ಸಾಮರ್ಥ್ಯ – ಈ ಎರಡೂ ಗುಣಗಳನ್ನು ಹೊಂದಿರುವ ವ್ಯಕ್ತಿಯೇ ಶಿಕ್ಷಕರಲ್ಲಿ ಅತ್ಯುನ್ನತ ಸ್ಥಾನಕ್ಕೆ ಅರ್ಹನಾಗುತ್ತಾನೆ ಎಂದು ಅವರು ಹೇಳಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಜ್ಞಾನಾರ್ಜನೆ ಮತ್ತು ಜ್ಞಾನ ಹಂಚಿಕೆಯ ಮಹತ್ವವನ್ನು ಒತ್ತಿ ಹೇಳುವ ಈ ಸುಭಾಷಿತವು ಆದರ್ಶ ಶಿಕ್ಷಕರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ವಿಷಯದಲ್ಲಿ ಪರಿಣತಿ ಸಾಧಿಸುವುದಷ್ಟೇ ಅಲ್ಲದೆ, ವಿದ್ಯಾರ್ಥಿಗಳಿಗೆ ಅದನ್ನು ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಬೋಧಿಸುವ ಸಾಮರ್ಥ್ಯವೂ ಶಿಕ್ಷಕರ ಪ್ರಮುಖ ಗುಣವಾಗಿರಬೇಕು ಎಂಬ ಸಂದೇಶವನ್ನು ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande